ಪ್ರಿಯಾಂಕ್ ಖರ್ಗೆ 
ರಾಜ್ಯ

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

'ಮುಖ್ಯಮಂತ್ರಿ ಕಚೇರಿ ಭಾನುವಾರ ಮಾಧ್ಯಮಗಳೊಂದಿಗೆ ಈ ಪತ್ರವನ್ನು ಹಂಚಿಕೊಂಡಿದ್ದು, 'ಆರ್‌ಎಸ್‌ಎಸ್‌ನ ನಂಬಿಕೆ ವ್ಯವಸ್ಥೆಯು 'ಭಾರತದ ಏಕತೆ ಮತ್ತು ಜಾತ್ಯತೀತ ಚೌಕಟ್ಟಿನ ಆದರ್ಶಗಳಿಗೆ ವಿರುದ್ಧವಾಗಿದೆ' ಎಂದು ಹೇಳಿದ್ದಾರೆ.

ಬೆಂಗಳೂರು: ರಾಜ್ಯದಾದ್ಯಂತ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ಆವರಣದಲ್ಲಿ ಆರ್‌ಎಸ್‌ಎಸ್‌ನ ಎಲ್ಲ ಚಟುವಟಿಕೆಗಳನ್ನು ನಿಷೇಧಿಸಬೇಕು. ಇಂತಹ ಕ್ರಮಗಳು ಭಾರತದ ಏಕತೆ ಮತ್ತು ಸಂವಿಧಾನದ ಸ್ಫೂರ್ತಿಗೆ ವಿರುದ್ಧವಾಗಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

ಅಕ್ಟೋಬರ್ 4 ರಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘವು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಹಾಗೂ ಸಾರ್ವಜನಿಕ ಮೈದಾನಗಳಲ್ಲಿ ಶಾಖೆಗಳನ್ನು ನಡೆಸುತ್ತಿದೆ. ಅಲ್ಲಿ ಘೋಷಣೆಗಳನ್ನು ಕೂಗಲಾಗುತ್ತದೆ. ಮಕ್ಕಳು ಮತ್ತು ಯುವಕರ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳನ್ನು ತುಂಬಲಾಗುತ್ತದೆ ಎಂದು ಆರೋಪಿಸಿದ್ದಾರೆ.

'ಮುಖ್ಯಮಂತ್ರಿ ಕಚೇರಿ ಭಾನುವಾರ ಮಾಧ್ಯಮಗಳೊಂದಿಗೆ ಈ ಪತ್ರವನ್ನು ಹಂಚಿಕೊಂಡಿದ್ದು, 'ಆರ್‌ಎಸ್‌ಎಸ್‌ನ ನಂಬಿಕೆ ವ್ಯವಸ್ಥೆಯು 'ಭಾರತದ ಏಕತೆ ಮತ್ತು ಜಾತ್ಯತೀತ ಚೌಕಟ್ಟಿನ ಆದರ್ಶಗಳಿಗೆ ವಿರುದ್ಧವಾಗಿದೆ' ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

'ಜನರಲ್ಲಿ ದ್ವೇಷವನ್ನು ಬಿತ್ತುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ, ಸಮಗ್ರತೆ, ಸಮಾನತೆ ಮತ್ತು ಏಕತೆಯ ಮೂಲ ತತ್ವಗಳ ಮೇಲೆ ಸ್ಥಾಪಿತವಾದ ನಮ್ಮ ಸಂವಿಧಾನವು ಅಂತಹ ಅಂಶಗಳನ್ನು ನಿಗ್ರಹಿಸಲು ಮತ್ತು ರಾಷ್ಟ್ರದ ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿಯಲು ನಮಗೆ ಅಧಿಕಾರವನ್ನು ನೀಡುತ್ತದೆ' ಎಂದು ಸಚಿವರು ಬರೆದಿದ್ದಾರೆ.

'ಪೊಲೀಸರ ಅನುಮತಿ ಪಡೆಯದೆ, ಕೋಲುಗಳನ್ನು ಹಿಡಿದು ಆಕ್ರಮಣಕಾರಿ ಪ್ರದರ್ಶನಗಳನ್ನು ನಡೆಸಲಾಗುತ್ತಿದೆ. ಇದು ಮಕ್ಕಳು ಮತ್ತು ಯುವಜನರ ಮೇಲೆ ಹಾನಿಕಾರಕ ಮಾನಸಿಕ ಪರಿಣಾಮ ಬೀರಬಹುದು. ದೇಶದ ಮಕ್ಕಳು, ಯುವಕರು, ಸಾರ್ವಜನಿಕರು ಮತ್ತು ಒಟ್ಟಾರೆಯಾಗಿ ಸಮಾಜದ ಯೋಗಕ್ಷೇಮದ ಹಿತದೃಷ್ಟಿಯಿಂದ, 'ಶಾಖೆ', 'ಸಂಘಿಕ್' ಅಥವಾ 'ಬೈಠಕ್' ಹೆಸರಿನಲ್ಲಿ ಆರ್‌ಎಸ್‌ಎಸ್ ನಡೆಸುವ ಎಲ್ಲ ರೀತಿಯ ಚಟುವಟಿಕೆಗಳ ಮೇಲೆ ನಿಷೇಧ ಹೇರಬೇಕೆಂದು ನಾನು ಪ್ರಾಮಾಣಿಕವಾಗಿ ವಿನಂತಿಸುತ್ತೇನೆ' ಎಂದಿದ್ದಾರೆ.

'ಸರ್ಕಾರಿ ಶಾಲೆಗಳು, ಸರ್ಕಾರಿ ಅನುದಾನಿತ ಶಾಲೆಗಳು, ಸಾರ್ವಜನಿಕ ಆಟದ ಮೈದಾನಗಳು, ಉದ್ಯಾನವನಗಳು, ಮುಜರಾಯಿ ಇಲಾಖೆ ಅಡಿಯಲ್ಲಿರುವ ದೇವಾಲಯಗಳು, ಪುರಾತತ್ವ ಇಲಾಖೆ ಅಡಿಯಲ್ಲಿರುವ ಸ್ಥಳಗಳು ಮತ್ತು ಯಾವುದೇ ಇತರ ಸರ್ಕಾರಿ ಆವರಣಗಳಲ್ಲಿ ಆರ್‌ಎಸ್ಎಸ್‌ ಚಟುವಟಿಕೆಗಳಿಗೆ ನಿಷೇಧ ಹೇರಬೇಕು' ಎಂದು ಅವರು ಹೇಳಿದರು.

'ಸಂವಿಧಾನವು ನಾಗರಿಕರು ಮತ್ತು ರಾಜ್ಯ ಇಬ್ಬರಿಗೂ ವಿಭಜನೆಯನ್ನು ಹರಡುವ ಶಕ್ತಿಗಳ ವಿರುದ್ಧ ಕಾರ್ಯನಿರ್ವಹಿಸಲು ಅಧಿಕಾರ ನೀಡುತ್ತದೆ. ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ರಕ್ಷಿಸಲಾಗಿದೆ ಎಂದು ಖಚಿತಪಡಿಸುತ್ತದೆ' ಎಂದು ಅವರು ಒತ್ತಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

SIR ಒತ್ತಡ: ಮದುವೆಗೆ ಒಂದು ದಿನ ಮೊದಲು ಆತ್ಮಹತ್ಯೆಗೆ ಶರಣಾದ ಯುಪಿ ಸಿಬ್ಬಂದಿ!

'Please wait...': ಡಿ.ಕೆ ಶಿವಕುಮಾರ್ ಗೆ ರಾಹುಲ್ ಗಾಂಧಿ ವಾಟ್ಸ್​ಆ್ಯಪ್​​ ಸಂದೇಶ; ಹೇಳಿದ್ದೇನು?

ಭಾರತದ ಸಿಇಸಿ ಜ್ಞಾನೇಶ್ ಕುಮಾರ್ ಗೆ ವಿಶ್ವ ಚುನಾವಣಾ ಸಂಸ್ಥೆಯ ಅಧ್ಯಕ್ಷ ಹುದ್ದೆ!

ಹಾಂಗ್ ಕಾಂಗ್ ನಲ್ಲಿ ಭೀಕರ ಅಗ್ನಿ ಅವಘಡ: 32 ಅಂತಸ್ತಿನ ಅಪಾರ್ಟ್ ಮೆಂಟ್ ಗೆ ಬೆಂಕಿ, 13 ಮಂದಿ ಸಾವು, 700 ಮಂದಿ ಸ್ಥಳಾಂತರ! Video

ಐಎಎಸ್​ ಅಧಿಕಾರಿ ಮಹಾಂತೇಶ ಬೀಳಗಿ ಪಂಚಭೂತಗಳಲ್ಲಿ ಲೀನ: ಏಕಕಾಲಕ್ಕೆ ನಾಲ್ವರ ಅಂತ್ಯಕ್ರಿಯೆ

SCROLL FOR NEXT