ಪ್ರಾತಿನಿಧಿಕ ಚಿತ್ರ 
ರಾಜ್ಯ

ಸದ್ಯಕ್ಕಿಲ್ಲ ಬ್ರೇಕ್..: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಅಕ್ಟೋಬರ್ 18ರವರೆಗೆ ಭಾರಿ ಮಳೆ; ಹವಾಮಾನ ಇಲಾಖೆ!

ಕರ್ನಾಟಕವನ್ನೂ ಒಳಗೊಂಡಂತೆ ದಕ್ಷಿಣ ಭಾರತದಲ್ಲಿ ಅಕ್ಟೋಬರ್ 18ರವರೆಗೂ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಸೋಮವಾರ ಎಚ್ಚರಿಕೆ ನೀಡಿದೆ.

ಬೆಂಗಳೂರು: ಮಾನ್ಸೂನ್ ಮಾರುತಗಳ ನಿರ್ಗಮನ ಪ್ರಕ್ರಿಯೆ ಚಾಲ್ತಿಯಲ್ಲಿರುವಂತೆಯೇ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಮುಂದಿನ 4 ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕರ್ನಾಟಕವನ್ನೂ ಒಳಗೊಂಡಂತೆ ದಕ್ಷಿಣ ಭಾರತದಲ್ಲಿ ಅಕ್ಟೋಬರ್ 18ರವರೆಗೂ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಸೋಮವಾರ ಎಚ್ಚರಿಕೆ ನೀಡಿದೆ.

ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಕೆಲ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಮಳೆ ಸಾಧ್ಯತೆ

ಅಂತೆಯೇ ಈ ಅವಧಿಯಲ್ಲಿ ಬೆಂಗಳೂರಿನಲ್ಲೂ ಭಾರೀ ಮಳೆಯಾಗಲಿದೆ. ಈ ಅವಧಿಯಲ್ಲಿ ಗಾಳಿಯ ವೇಗವು ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಬೀಸಲಿದೆ. ಈ ಅವಧಿಯಲ್ಲಿ ಸಿಡಿಲು ಉಂಟಾಗುವ ಸಾಧ್ಯತೆಗಳೂ ಇವೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ನೈರುತ್ಯ ಮುಂಗಾರು ಅಂತ್ಯ

ನೈರುತ್ಯ ಮುಂಗಾರು ಕೊನೆಗೊಳ್ಳುವ ಮನ್ಸೂಚನೆಯೂ ಇದ್ದು, ಹೀಗಾಗಿ ಕೇಂದ್ರ ಮತ್ತು ಪೂರ್ವ ಭಾರತದ ಹಲವೆಡೆ ಮಳೆಯಾಗಲಿದೆ ಎಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Operation Sindoor ಗೆ ಪಾಕಿಸ್ತಾನದ 100 ಕ್ಕೂ ಹೆಚ್ಚು ಸೈನಿಕರು ಬಲಿ, 12 ವಿಮಾನಗಳು ಧ್ವಂಸ: ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್

ಜೈಸಲ್ಮೇರ್‌ನಲ್ಲಿ ಹೊತ್ತಿ ಉರಿದ ಬಸ್: 15 ಮಂದಿ ಸಜೀವದಹನ; ಕಿಟಕಿಯಿಂದ ಹಾರಿ ಜೀವ ಉಳಿಸಿಕೊಂಡ ಪ್ರಯಾಣಿಕರು, Video!

ಟೀಕೆ ಬದಲು ಸಾಮೂಹಿಕ ಪ್ರಯತ್ನ ಅಗತ್ಯ: ಕಿರಣ್​ ಮಜುಂದಾರ್​ಗೆ ಡಿ.ಕೆ ಶಿವಕುಮಾರ್ ತಿರುಗೇಟು

ಕದನ ವಿರಾಮಕ್ಕೆ ಕಿಮ್ಮತ್ತಿಲ್ಲ: ಗಾಜಾದಲ್ಲಿ ಮಾರಣ ಹೋಮ ಮುಂದುವರೆಸಿದ ಇಸ್ರೇಲ್; 9 ಪ್ಯಾಲೆಸ್ತೇನಿಯರು ಸಾವು!

ಮಿತಿ ಮೀರುತ್ತಿದ್ದೀರಾ? ಒಕ್ಕೂಟ ವ್ಯವಸ್ಥೆಯ ಕಥೆಯೇನು?: ತಮಿಳುನಾಡು ಕೇಸ್ ನಲ್ಲಿ ED ವಿರುದ್ಧ 'ಸುಪ್ರೀಂ' ಗರಂ; ಕೋರ್ಟ್ ಚಾಟಿಗೆ ತನಿಖಾ ಸಂಸ್ಥೆ ಬೇಸ್ತು!

SCROLL FOR NEXT