ಬಿಜೆಪಿ (ಸಂಗ್ರಹ ಚಿತ್ರ) online desk
ರಾಜ್ಯ

ಕಾಂಗ್ರೆಸ್ RSS ನಿಷೇಧ ಮಾಡುವ ಚಿಂತೆಯಲ್ಲಿದ್ದರೆ, ಉದ್ಯಮಗಳು ಕರ್ನಾಟಕವನ್ನೇ ನಿಷೇಧ ಮಾಡುತ್ತಿವೆ: BJP

ಕಾಂಗ್ರೆಸ್ ನಾಯಕರು RSS ನಿಷೇಧ ಮಾಡುವ ಚಿಂತೆಯಲ್ಲಿದ್ದರೆ, ಅಲ್ಲಿ ಉದ್ಯಮಗಳು ಕರ್ನಾಟಕವನ್ನೇ ನಿಷೇಧ ಮಾಡುತ್ತಿವೆ. ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನ, ಅಸಮರ್ಥ ಆಡಳಿತ, ಉದ್ಯಮ-ವಿರೋಧಿ ನೀತಿಗಳು ಇದಕ್ಕೆ ಕಾರಣವಾಗಿದೆ.

ಬೆಂಗಳೂರು: ಇಲ್ಲಿ ಕಾಂಗ್ರೆಸ್ ನಾಯಕರು RSS ನಿಷೇಧ ಮಾಡುವ ಚಿಂತೆಯಲ್ಲಿದ್ದರೆ, ಅಲ್ಲಿ ಉದ್ಯಮಗಳು ಕರ್ನಾಟಕವನ್ನೇ ನಿಷೇಧ ಮಾಡುತ್ತಿವೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಭಾರತದಲ್ಲಿ ಮೊದಲ AI-ಹಬ್‌ಗಾಗಿ Google ಬರೊಬ್ಬರಿ 15 ಶತಕೋಟಿ ಡಾಲರ್ ಹೂಡಿಕೆ ಮಾಡಲಿದ್ದು, ಈ ಬೃಹತ್ ಯೋಜನೆ ಆಂಧ್ರಪ್ರದೇಶದ ಪಾಲಾಗಿದೆ ಇದರಿಂದ ರಾಜ್ಯಕ್ಕೆ 10,000 ಕೋಟಿ ರೂ ಆದಾಯ ಹಾಗೂ 30,000 ಉದ್ಯೋಗ ಕೈತಪ್ಪಿದಂತಾಗಿದೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

ಇಲ್ಲಿ ಕಾಂಗ್ರೆಸ್ ನಾಯಕರು RSS ನಿಷೇಧ ಮಾಡುವ ಚಿಂತೆಯಲ್ಲಿದ್ದರೆ, ಅಲ್ಲಿ ಉದ್ಯಮಗಳು ಕರ್ನಾಟಕವನ್ನೇ ನಿಷೇಧ ಮಾಡುತ್ತಿವೆ. ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನ, ಅಸಮರ್ಥ ಆಡಳಿತ, ಉದ್ಯಮ-ವಿರೋಧಿ ನೀತಿಗಳು ಇದಕ್ಕೆ ಕಾರಣವಾಗಿದ್ದು, ಉದ್ಯೋಗ ಸೃಷ್ಟಿ ಇಲ್ಲದೆ ಕರ್ನಾಟಕದ ಯುವಕರಿಗೆ ನಷ್ಟವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನಾದರೂ ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ಅನವಶ್ಯಕ ಹೇಳಿಕೆಗಳನ್ನು ಕೊಡುವುದನ್ನು ಬಿಡಬೇಕು. ಉದ್ಯಮ-ಸ್ನೇಹಿ ವಾತಾವರಣಕ್ಕೆ ಹೆಸರುವಾಸಿಯಾಗಿರುವ ಕರ್ನಾಟಕದ ವರ್ಚಸ್ಸಿಗೆ ಕಳಂಕ ತರದೇ ಉದ್ಯಮ, ಹೂಡಿಕೆಯನ್ನು ಆಕರ್ಷಿಸುವ ಮೂಲಕ ನಮ್ಮ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವತ್ತ ಗಮನ ಹರಿಸಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬೆಂಗಳೂರಿಗರಿಗೆ ಗುಡ್​​ನ್ಯೂಸ್: ನವೆಂಬರ್ 1ರಿಂದ A ಖಾತಾ ಅಭಿಯಾನ; ಆನ್‌ಲೈನ್ ವ್ಯವಸ್ಥೆಗೆ DCM ಚಾಲನೆ

"ಎಲ್ಲದಕ್ಕೂ ಒಂದು ಮಿತಿ ಇದೆ": ಕಿರಣ್ ಮಜುಂದಾರ್ ಷಾ ವಿರುದ್ಧ DCM ಡಿಕೆ ಶಿವಕುಮಾರ್ ಕಿಡಿ

ಔರಂಗಜೇಬ್ ಆಡಳಿತಕ್ಕೆ ಹೋಲಿಕೆ: ಸಿಎಂ ಮಮತಾ ಬ್ಯಾನರ್ಜಿ ಕ್ಷಮೆ ಕೋರಿದ ದುರ್ಗಾಪುರ ಅತ್ಯಾಚಾರ ಸಂತ್ರಸ್ತೆ ತಂದೆ!

ಡೊನಾಲ್ಡ್ ಟ್ರಂಪ್ ಎಚ್ಚರಿಕೆಗೂ ಬಗ್ಗದ ಹಮಾಸ್, 8 ಗಾಜಾ ನಿವಾಸಿಗಳ 'ಗುಂಡಿಟ್ಟು ಹತ್ಯೆ', Video

ಆಂಧ್ರ vs ಕರ್ನಾಟಕ: 'ಅವರು ಅಸಮರ್ಥರಾದರೆ ನಾವೇನು ಮಾಡಲು ಸಾಧ್ಯ..': ಬೆಂಗಳೂರು ರಸ್ತೆಗುಂಡಿ, ಉದ್ಯಮಗಳ ಸ್ಥಳಾಂತರದ ಬಗ್ಗೆ ಸಚಿವ ನಾರಾ ಲೋಕೇಶ್ ಹೊಸ ಬಾಂಬ್!

SCROLL FOR NEXT