ನಿರ್ಮಲಾ ಸೀತಾರಾಮನ್ 
ರಾಜ್ಯ

ರಾಯಚೂರು ಸವಾಲುಗಳ ನಡುವೆಯೂ ಬೆಳೆಯುವ ಸಾಮರ್ಥ್ಯ ಹೊಂದಿದೆ: ನಿರ್ಮಲಾ ಸೀತಾರಾಮನ್

ಏಳು ಜಿಲ್ಲೆಗಳಲ್ಲಿ ಇದೇ ರೀತಿಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು. ಅಲ್ಲದೆ ಕಲ್ಯಾಣ ಕರ್ನಾಟಕದಾದ್ಯಂತ ಕೇಂದ್ರವು ಅಭಿವೃದ್ಧಿ ಉಪಕ್ರಮಗಳನ್ನು ಮುಂದುವರಿಸುತ್ತಿದೆ ಎಂದರು.

ರಾಯಚೂರು: ರಾಯಚೂರು ಜಿಲ್ಲೆ ಸವಾಲುಗಳ ಹೊರತಾಗಿಯೂ ಬೆಳೆಯುವ ಮತ್ತು ಅಭಿವೃದ್ಧಿ ಹೊಂದುವ ಸಾಮರ್ಥ್ಯ ಹೊಂದಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ.

ಇಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ಕೃಷಿ ಸಂಸ್ಕರಣೆಗಾಗಿ ರೈತ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಸೀತಾರಾಮನ್, ಏಳು ಜಿಲ್ಲೆಗಳಲ್ಲಿ ಇದೇ ರೀತಿಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು. ಅಲ್ಲದೆ ಕಲ್ಯಾಣ ಕರ್ನಾಟಕದಾದ್ಯಂತ ಕೇಂದ್ರವು ಅಭಿವೃದ್ಧಿ ಉಪಕ್ರಮಗಳನ್ನು ಮುಂದುವರಿಸುತ್ತಿದೆ ಎಂದರು.

"ಇದೇ ರೀತಿ, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ನಾವು ಒಟ್ಟು ಏಳು ಕೃಷಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುತ್ತಿದ್ದೇವೆ. ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಮತ್ತು ಖರೀದಿಸಲು ಸಹಾಯ ಮಾಡಲು ಐಟಿಸಿಯಂತಹ ಕಂಪನಿಗಳೊಂದಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ, ಜಿಲ್ಲಾ ಆಡಳಿತದ ಮೂಲಕ MPLADS ನಿಧಿ ಬಳಸಿಕೊಂಡು ಈ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ" ಎಂದು ಅವರು ಹೇಳಿದರು.

ತಮ್ಮ MPLADS ನಿಧಿಯಿಂದ 3.5 ಕೋಟಿ ರೂ.ಗಳನ್ನು ಈ ಏಳು ಘಟಕಗಳಿಗೆ ಖರ್ಚು ಮಾಡಲಾಗುತ್ತಿದೆ ಎಂದು ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆಯಾಗಿರುವ ಸೀತಾರಾಮನ್ ತಿಳಿಸಿದರು.

ಒಮ್ಮೆ ಸಂಸ್ಕರಿಸಿದ ನಂತರ, ಉತ್ಪನ್ನಗಳು ರಾಯಚೂರಿನಿಂದ ಬೆಂಗಳೂರಿನವರೆಗೆ ರಾಜ್ಯದ ಯಾವುದೇ ಸ್ಥಳಕ್ಕೆ ತಲುಪಿಸಬಹುದು. ಇದು ಕರ್ನಾಟಕದ ಒಟ್ಟಾರೆ ಬೆಳವಣಿಗೆಗೆ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು.

ಈ ಪ್ರದೇಶದ ಮೇಲೆ ಹೆಚ್ಚು ಗಮನಹರಿಸುವ ಅಗತ್ಯವನ್ನು ಒತ್ತಿ ಹೇಳಿದ ಹಣಕಾಸು ಸಚಿವೆ, ಬೆಂಗಳೂರಿನ ಅಭಿವೃದ್ಧಿ ಅಸಾಧಾರಣವಾಗಿದ್ದರೂ, ರಾಯಚೂರು, ತನ್ನ ಜನರ ಕಠಿಣ ಪರಿಶ್ರಮದ ಹೊರತಾಗಿಯೂ, ಅಭಿವೃದ್ಧಿ ಸಾಧಿಸುವಲ್ಲಿ ಹಲವು ತೊಂದರೆಗಳನ್ನು ಎದುರಿಸುತ್ತಿದೆ ಎಂದರು.

ಇವುಗಳನ್ನು "ಹಿಂದುಳಿದ ಜಿಲ್ಲೆಗಳು" ಎಂದು ಕರೆಯುವ ಬದಲು, ನಾವು ಈಗ ಅವುಗಳನ್ನು ಮಹತ್ವಾಕಾಂಕ್ಷೆಯ ಜಿಲ್ಲೆಗಳು ಎಂದು ಕರೆಯುತ್ತೇವೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕದ ರಾಯಚೂರು ಮತ್ತು ಯಾದಗಿರಿ ಸೇರಿದಂತೆ ದೇಶಾದ್ಯಂತ 112 ಅಂತಹ ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಸರ್ಕಾರ ಗುರುತಿಸಿದೆ ಎಂದು ಅವರು ಹೇಳಿದರು.

"ಇಂದು, ರಾಯಚೂರು ತನ್ನ ಸವಾಲುಗಳ ಹೊರತಾಗಿಯೂ ಅಭಿವೃದ್ಧಿ ಹೊಂದುವ ಸಾಮರ್ಥ್ಯ ಹೊಂದಿದೆ. ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸುತ್ತಿರುವುದನ್ನು ನಾನು ನೋಡಿದ್ದೇನೆ. ರಾಯಚೂರು ಅನೇಕ ಅಭಿವೃದ್ಧಿ ಸೂಚಕಗಳಲ್ಲಿ ಸುಧಾರಣೆಯನ್ನು ತೋರಿಸುತ್ತಿದೆ. ಈ ಯಶಸ್ಸು ಉದ್ದೇಶಿತ ಮಧ್ಯಸ್ಥಿಕೆಗಳು, ಕಟ್ಟುನಿಟ್ಟಾದ ಮೇಲ್ವಿಚಾರಣೆ ಮತ್ತು ಸಮಯಕ್ಕೆ ಅನುಗುಣವಾಗಿ ಅನುಷ್ಠಾನದ ಪರಿಣಾಮವಾಗಿದೆ - ಅದು ರಸ್ತೆಗಳು, ನೀರು ಸರಬರಾಜು ಅಥವಾ ಹಳ್ಳಿಗಳಲ್ಲಿ ವಿದ್ಯುತ್ ಆಗಿರಬಹುದು" ಎಂದು ಸಚಿವರೆ ತಿಳಿಸಿದರು.

2023 ರ ಶ್ರೇಯಾಂಕದಲ್ಲಿ 112 ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ರಾಯಚೂರು ಮೊದಲ ಸ್ಥಾನದಲ್ಲಿದೆ. ನೀತಿ ಆಯೋಗದ ಮಹತ್ವಾಕಾಂಕ್ಷೆಯ ಬ್ಲಾಕ್‌ಗಳ ಕಾರ್ಯಕ್ರಮದಲ್ಲಿ ಜಿಲ್ಲೆಯ ಮಸ್ಕಿ ಬ್ಲಾಕ್ ದಕ್ಷಿಣ ರಾಜ್ಯಗಳಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ ಎಂದು ಸೀತಾರಾಮನ್ ಹೇಳಿದರು,

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IndiGo: ಬರೊಬ್ಬರಿ 200 ವಿಮಾನಗಳ ಹಾರಾಟ ರದ್ದು, 'ಮುಚ್ಕೊಂಡ್ ಮನೆಗೆ ಹೋಗಿ..' 'crew shortage'ಗೆ ಪ್ರಯಾಣಿಕರ ಆಕ್ರೋಶ!

ದರ್ಶನ್ ಲಾಕಪ್ ಡೆತ್: 'ಸಿಐಡಿ ಅಲ್ಲ.. ನ್ಯಾಯಾಂಗ ತನಿಖೆಗೆ ಒಪ್ಪಿಸಿ': PUCL ಪ್ರತಿಭಟನೆ, ಪೊಲೀಸರಿಂದ ಹಣದ ಆಮಿಷ ಎಂದ ಪತ್ನಿ

2nd ODI: 'ಟಾಸ್, ಇಬ್ಬನಿ, 20 ರನ್ ಗಳ ಕೊರತೆ'..: ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿಗೆ ಕಾರಣ ನೀಡಿದ ನಾಯಕ KL Rahul

2nd ODI: ಸತತ 20ನೇ ಪಂದ್ಯದಲ್ಲೂ Toss ಸೋತ ಭಾರತ, ಜಗತ್ತಿನ ಮೊದಲ ತಂಡ, ಸುನಿಲ್ ಗವಾಸ್ಕರ್ ಗೂ ಆಘಾತ! video

Video: ಕ್ಯಾಚ್ ಡ್ರಾಪ್.. ಮ್ಯಾಚ್ ಡ್ರಾಪ್: ಜೈಸ್ವಾಲ್​ಗೆ ಶಾಕ್ ಕೊಟ್ಟ ಮಾರ್ಕ್ರಾಮ್, ಒಂದು ತಪ್ಪು ಭಾರತಕ್ಕೆ ಮುಳುವಾಯ್ತು!

SCROLL FOR NEXT