ರೈತ ಶಂಕರ್ ಅವರು ಬೆಳದ ಭತ್ತವನ್ನು ಪರಿಶೀಲಿಸುತ್ತಿರುವ ಧಾರಾವಾಡ ವಿವಿ ಪ್ರೊಫೆಸರ್ ಗಳು Photo | EPS
ರಾಜ್ಯ

Belagavi: ದನ ಕಾಯುತ್ತಿದ್ದವ ಈಗ 260 ದೇಶಿಯ ಭತ್ತದ ತಳಿಗಳ ಸಂರಕ್ಷಕ! ಮೌನ ಕ್ರಾಂತಿಯ ರೈತ ಶಂಕರ್ ಲಂಗಟಿ ಯಶೋಗಾಥೆ!

14 ವರ್ಷದವರಾಗಿದ್ದಾಗ ತನ್ನ ತಂದೆಯನ್ನು ಕಳೆದುಕೊಂಡ ಶಂಕರ್ ಅವರಿಗೆ ಪಿತ್ರಾರ್ಜಿತವಾಗಿ ಬಂದ ಮೂರು ಎಕರೆ ಜಮೀನು ಇತ್ತು. ಆದರೆ ಆರ್ಥಿಕವಾಗಿ ಯಾವುದೇ ನೆರವು ಸಿಗದೆ ಹಳ್ಳಿಯಲ್ಲಿ ದನ ಕಾಯುವ ಕೆಲಸ ಆರಂಭಿಸಿ ತಿಂಗಳಿಗೆ ರೂ. 300 ಪಡೆಯುತ್ತಿದ್ದರು.

ಬೆಳಗಾವಿ: ಬೆಳಗಾವಿ ಜಿಲ್ಲೆಯ ಗುಂಡೇನಟ್ಟಿ ಗ್ರಾಮದಲ್ಲಿ ದೇಸಿ ಭತ್ತದ ತಳಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮೌನ ಕ್ರಾಂತಿ ನಡೆಯುತ್ತಿದೆ. ಈ ಗ್ರಾಮದ ಸಣ್ಣ ರೈತ ಶಂಕರ್ ಹನುಮಂತ ಲಂಗಟಿ ಈಗ ಅವಸಾನದ ಅಂಚಿನಲ್ಲಿದ್ದ ಸುಮಾರು 260ಕ್ಕೂ ಹೆಚ್ಚು ಭತ್ತದ ತಳಿಗಳ ಸಂರಕ್ಷಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಡತನದ ಕಾರಣ 3ನೇ ತರಗತಿಯ ನಂತರ ಓದನ್ನು ನಿಲ್ಲಿಸಬೇಕಾದ ಅನಿವಾರ್ಯತೆಗೆ ಸಿಲುಕಿದ ಶಂಕರ್, ಸಾಂಪ್ರದಾಯಿಕವಾಗಿ ಬೆಳೆದ ಭತ್ತದ ತಳಿಗಳನ್ನು ಸಂಗ್ರಹಿಸಿ ಅವುಗಳನ್ನು ಸಂರಕ್ಷಿಸುವ ಹವ್ಯಾಸ ಮುಂದೊಂದು ದಿನ ತನಗೆ ಹೆಸರು ಮತ್ತು ಕೀರ್ತಿ ತರುತ್ತದೆ ಅಂತಾ ಎಂದೂ ಅಂದುಕೊಂಡಿರಲಿಲ್ಲ.

ದನ ಕಾಯುವ ಕೆಲಸದಲ್ಲಿ ತಿಂಗಳಿಗೆ ರೂ.300

14 ವರ್ಷದವರಾಗಿದ್ದಾಗ ತನ್ನ ತಂದೆಯನ್ನು ಕಳೆದುಕೊಂಡ ಶಂಕರ್ ಅವರಿಗೆ ಪಿತ್ರಾರ್ಜಿತವಾಗಿ ಬಂದ ಮೂರು ಎಕರೆ ಜಮೀನು ಇತ್ತು. ಆದರೆ ಆರ್ಥಿಕವಾಗಿ ಯಾವುದೇ ನೆರವು ಸಿಗದೆ ಹಳ್ಳಿಯಲ್ಲಿ ದನ ಕಾಯುವ ಕೆಲಸ ಆರಂಭಿಸಿ ತಿಂಗಳಿಗೆ ರೂ. 300 ಪಡೆಯುತ್ತಿದ್ದರು. ನಂತರ ಅವರು ಕಬ್ಬು, ಭತ್ತ ಮತ್ತು ಇತರ ಬೆಳೆಗಳನ್ನು ಕಟಾವು ಮಾಡುವ ಕೃಷಿ ಕಾರ್ಮಿಕರಾಗಿ ಕೆಲಸ ಮಾಡಲು ಶುರು ಮಾಡುತ್ತಾರೆ. 2003 ರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಸಬಲೀಕರಣವನ್ನು ಉತ್ತೇಜಿಸುವ ಕಾರ್ಯಕರ್ತೆ ಶಾರದ ದಭಾಡೆ ಅವರ ಸಲಹೆಯ ಮೇರೆಗೆ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRDP) ಮತ್ತು GREEN ಫೌಂಡೇಶನ್ ಆಯೋಜಿಸಿದ್ದ ಬೀಜ ಮೇಳದಲ್ಲಿ ಶಂಕರ್ ಪಾಲ್ಗೊಂಡಿದ್ದರು.

ಮೇಳದಲ್ಲಿ ಒಂದು ಕಾಲದಲ್ಲಿ ಜನಪ್ರಿಯವಾಗಿದ್ದ 25 ಸ್ಥಳೀಯ ಭತ್ತದ ತಳಿಗಳನ್ನು ನೋಡಿದ್ದಾರೆ. ಆದರೆ ಅವುಗಳು ಹೆಚ್ಚಿನ ಇಳುವರಿ ನೀಡುವ ಹೈಬ್ರಿಡ್‌ಗಳಿಗೆ ಸ್ಥಳಾಂತರಗೊಂಡ ರೈತರಿಂದ ನಿರ್ಲಕ್ಷಿಸಲ್ಪಟ್ಟಿದ್ದವು. ಆ ಭತ್ತದ ತಳಿಗಳನ್ನು ಮನೆಗೆ ತಂದು ತಮ್ಮ ಜಮೀನಿನಲ್ಲಿ ಬಿತ್ತಿದರು. ಸಾಂಪ್ರದಾಯಿಕ ಕೃಷಿ ವಿಧಾನಗಳನ್ನು ಬಳಸಿ, ಉತ್ತಮ ಇಳುವರಿ ಪಡೆದರು. ಇದರಿಂದ ಉತ್ತೇಜಿತರಾದ ಅವರು ಧಾರವಾಡದ ಶಿವರಾಜ್ ಹುನಗುಂದ ಮತ್ತು ‘Save Seeds’ನ ಕೃಷ್ಣ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ದೇಶದಲ್ಲಿ ಮರೆಯಲಾದ ಭತ್ತದ ತಳಿಗಳನ್ನು ಪತ್ತೆ ಮಾಡುವ, ಬೆಳೆಸುವ ಮತ್ತು ಸಂರಕ್ಷಿಸುವ ಕಾಯಕ ಆರಂಭಿಸಿದರು.

ಸ್ಥಳೀಯ ತಳಿಗಳನ್ನು ಸಂಗ್ರಹಿಸಲು ಬೆಳಗಾವಿ, ಧಾರವಾಡ, ಗೋವಾ, ಒಡಿಶಾ, ಮಣಿಪುರ, ಮಹಾರಾಷ್ಟ್ರ, ತಮಿಳುನಾಡು ಮತ್ತು ಆಂಧ್ರಪ್ರದೇಶದಂತಹ ಇತರ ಭತ್ತ ಬೆಳೆಯುವ ರಾಜ್ಯಗಳಿಗೆ ಭೇಟಿ ನೀಡಿದರು. ಶಂಕರ್ ಅವರ ಪ್ರಯತ್ನವನ್ನು ಗುರುತಿಸಿ, ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು ಅವರಿಗೆ 50 ಸ್ಥಳೀಯ ಭತ್ತದ ತಳಿಗಳನ್ನು ನೀಡಿದೆ.

ಶಂಕರ್ ಅವರು ಸಾಂಪ್ರದಾಯಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡಿದ್ದು, ರಾಸಾಯನಿಕ ಕೀಟನಾಶಕಗಳು ಮತ್ತು ರಸಗೊಬ್ಬರಗಳನ್ನು ತಿರಸ್ಕರಿಸಿದ್ದಾರೆ. ಅವರು ಮಾನ್ಸೂನ್ ಸಮಯದಲ್ಲಿ ಭತ್ತ, ದ್ವಿದಳ ಧಾನ್ಯಗಳು, ತರಕಾರಿಗಳು, ಕಡಲೆಯಂತಹ ಇತರ ಬೆಳೆಗಳನ್ನು ಬೆಳೆಯುತ್ತಾರೆ.

ಮಾರ್ಕೆಟಿಂಗ್ ಕಾರ್ಯತಂತ್ರ: ಶಂಕರ್ ಅವರು ತಮ್ಮ ಉತ್ಪನ್ನಗಳಿಗೆ ವಿಶ್ವಾಸಾರ್ಹ ಗ್ರಾಹಕರನ್ನು ಹೊಂದಿದ್ದಾರೆ. ಗುಂಡೇನಟ್ಟಿಯ ಹೊರವಲಯದಲ್ಲಿ ರೈತರು ಮತ್ತು ಗ್ರಾಹಕರು ತಮ್ಮ ಉತ್ಪನ್ನಗಳನ್ನು ನೇರವಾಗಿ ಖರೀದಿಸುವ ಅಂಗಡಿ-ಕಮ್-ಗೋದಾಮು ನಿರ್ಮಿಸಿದ್ದಾರೆ. ಪ್ರತಿ ಗುರುವಾರ ಧಾರವಾಡದ ಗಾಂಧಿ ಶಾಂತಿ ಪ್ರತಿಷ್ಠಾನಕ್ಕೆ ಅಕ್ಕಿ, ಬೇಳೆಕಾಳು ಮತ್ತು ತರಕಾರಿಗಳನ್ನು ಮಾರಾಟ ಮಾಡಲು ಹೋಗುತ್ತಾರೆ.

9 ಎಕರೆ ಜಮೀನು ಖರೀದಿಸಿದ ಶಂಕರ್:

ಕೆಲವು ವರ್ಷಗಳ ಹಿಂದೆ, ಶಂಕರ್ ಅವರು ತಮ್ಮ ಜಮೀನಿನ ಪಕ್ಕದಲ್ಲಿ ಇನ್ನೂ ಒಂಬತ್ತು ಎಕರೆ ಜಮೀನನ್ನು ಖರೀದಿಸಿದರು. ಅಲ್ಲಿ ಭತ್ತ ಮತ್ತಿತರ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಹೈನುಗಾರಿಕೆ ಮತ್ತು ಮೀನು ಸಾಕಾಣಿಕೆಯನ್ನು ಕೈಗೊಂಡಿದ್ದಾರೆ. 260 ಕ್ಕೂ ಹೆಚ್ಚು ಭತ್ತದ ತಳಿಗಳ ಹೊರತಾಗಿ ಅಳಿವಿನಂಚಿನಲ್ಲಿರುವ ಹಸಿರು, ಕೆಂಪು, ಕಪ್ಪು ಮತ್ತು ಬಿಳಿ ಬಣ್ಣದ ಕಡಲೆ, ಕೆಂಪು ಗೋಧಿ ಬೀಜಗಳನ್ನು ಅವರು ಸಂಗ್ರಹಿಸಿದ್ದಾರೆ.

ಶಂಕರ್ ಹನುಮಂತ ಲಂಗಟಿ

ಪ್ರಶಸ್ತಿಗಳು ಮತ್ತು ಮನ್ನಣೆ: ಶಂಕರ್ ಅವರು ಸುಸ್ಥಿರ ಕೃಷಿ ಮತ್ತು ಮಾರುಕಟ್ಟೆ ಪರಿಸ್ಥಿತಿಗಳನ್ನು ಅಧ್ಯಯನ ಮಾಡಲು ಹಲವು ದೇಶಗಳಿಗೆ ಭೇಟಿ ನೀಡಿದ್ದಾರೆ. ಅವರು ಪ್ರಗತಿಪರ ರೈತರು ಮತ್ತು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾರೆ. ವಿಜ್ಞಾನಿಗಳು ಸಹ ಅವರ ಕೃಷಿ ವಿಧಾನಗಳನ್ನು ಅಧ್ಯಯನ ಮಾಡಲು ಅವರ ಜಮೀನಿಗೆ ಭೇಟಿ ನೀಡುತ್ತಾರೆ. ಅವರ ಪ್ರಯತ್ನಗಳು ಪ್ರಸಿದ್ಧ ಸಂಸ್ಥೆಗಳಿಂದ ಪ್ರಶಸ್ತಿಗಳು ಮತ್ತು ಮನ್ನಣೆಯನ್ನು ಗಳಿಸಿವೆ.

ಶಂಕರ್ ಅವರಿಗೆ ಕೇಂದ್ರ ಸರ್ಕಾರದಿಂದ ರೂ. 10 ಲಕ್ಷ ನಗದು ಬಹುಮಾನ ಹೊಂದಿರುವ ಸಸ್ಯ ತಳಿಗಳ ಸಂರಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಜಿಲ್ಲಾ ಮತ್ತು ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ; ಆರ್ಟ್ ಆಫ್ ಲಿವಿಂಗ್, ಧರ್ಮಸ್ಥಳ ಫೌಂಡೇಶನ್ ಮತ್ತು ಕರ್ನಾಟಕ ಜೀವವೈವಿಧ್ಯ ಮಂಡಳಿಯಿಂದ ಸನ್ಮಾನಿಸಲಾಗಿದೆ. ಹೈದರಾಬಾದ್‌ನ ಐಸಿಎಆರ್‌ನಿಂದ ರೈಸ್ ಇನ್ನೋವೇಶನ್ ಫಾರ್ಮರ್ ಪ್ರಶಸ್ತಿ, ಧಾರವಾಡ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸಂದಿದೆ. ಅವರ ದೇಶಿ ಭತ್ತದ ತಳಿಗಳನ್ನು ಐಸಿಎಆರ್ ನಲ್ಲಿ ನೋಂದಾಯಿಸಲಾಗಿದೆ. ಇತ್ತೀಚೆಗೆ, ಶಂಕರ್ ಅವರು ಮಧುಮೇಹಿಗಳಿಗೆ ಸೂಕ್ತವೆಂದು ಪರಿಗಣಿಸಲಾದ ‘ಸುರೇಂದ್ರಸಾಲಿ’ ಎಂಬ ಕೆಂಪು ಅಕ್ಕಿ ತಳಿಯನ್ನು ಬಿಡುಗಡೆ ಮಾಡಿದ್ದಾರೆ.

ಇಬ್ಬರು ಪುತ್ರರ ನೆರವಿನಿಂದ ಶಂಕರ್ ಈಗ ಕೃಷಿ ಉದ್ಯಮವನ್ನು ವಿಸ್ತರಿಸುತ್ತಿದ್ದು, ಖಾನಾಪುರ ತಾಲೂಕಿನಲ್ಲಿ 50 ಎಕರೆ ಗುತ್ತಿಗೆ ಪಡೆದಿದ್ದಾರೆ. ತಮ್ಮ ಹೋರಾಟದ ಆರಂಭದ ದಿನಗಳನ್ನು ವಿವರಿಸಿದ ಶಂಕರ್ ಅವರ ಪತ್ನಿ ಮಹಾದೇವಿ, "ನಾವು ಕೂಲಿ ಕೆಲಸ ಮಾಡಿದ್ದೇವೆ, ದನ ಮೇಯಿಸಿದ್ದೇವೆ, ನನ್ನ ಪತಿ ಮೊದಲಿನಿಂದಲೂ ಯಶಸ್ವಿ ಕೃಷಿ ಉದ್ಯಮವನ್ನು ಸ್ಥಾಪಿಸಿದ್ದಾರೆ, ಈಗ ನಾವು ನಮ್ಮ ದುಡಿಮೆಯ ಫಲವನ್ನು ಪಡೆಯುತ್ತಿದ್ದೇವೆ" ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Flood Relief: ಕರ್ನಾಟಕ, ಮಹಾರಾಷ್ಟ್ರಕ್ಕೆ ರೂ. 1,950 ಕೋಟಿ ಬಿಡುಗಡೆಗೆ ಕೇಂದ್ರದ ಅನುಮೋದನೆ!

ವಾಲ್ಮೀಕಿ ಸಮುದಾಯದ ವಿರುದ್ಧ ಅಶ್ಲೀಲ ಅವಹೇಳನ: ರಮೇಶ್ ಕತ್ತಿಗೆ ಸಂಕಷ್ಟ; ಅಟ್ರಾಸಿಟಿ ಪ್ರಕರಣ ದಾಖಲು!

News headlines 19-10-2025| ಖರ್ಗೆ ತವರಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ; DCC ಬ್ಯಾಂಕ್ ಚುನಾವಣೆ: ಮತಗಟ್ಟೆ ಬಳಿ ಜಾರಕಿಹೊಳಿ- ಸವದಿ ಬಣಗಳ ನಡುವೆ ಹೊಡೆದಾಟ; ರಸ್ತೆ ಗುಂಡಿ; DKShivakumar- Kiran Majumdar-Shaw ನಡುವೆ ನಿಲ್ಲದ ವಾಕ್ಸಮರ

ಮಳವಳ್ಳಿ: ಮೂರು KSRTC ಬಸ್​​ಗಳ ನಡುವೆ ಡಿಕ್ಕಿ, ಮೂವರು ಸಾವು, ಹಲವರಿಗೆ ಗಾಯ

ದೊಡ್ಡಬಳ್ಳಾಪುರ: "ಹೃದಯವಂತ ಆರ್.ಎಲ್.ಜಾಲಪ್ಪ ಜೀವನ‌ ಪಥ"; ಕೃತಿ ಲೋಕಾರ್ಪಣೆಗೊಳಿಸಿದ ಸಿಎಂ ಸಿದ್ದರಾಮಯ್ಯ!

SCROLL FOR NEXT