ಬೆಂಗಳೂರು- ಹಂಪಿ ದೈನಂದಿನ ವಿಮಾನ ಸೇವೆ  
ರಾಜ್ಯ

ನವೆಂಬರ್ 1 ರಿಂದ ಬೆಂಗಳೂರು-ಹಂಪಿ ದೈನಂದಿನ ವಿಮಾನ ಸೇವೆ ಆರಂಭ

ಈ ಹೊಸೆ ವಿಮಾನ ಯಾನ ಸೇವೆಯಿಂದ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಮತ್ತು ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಹಂಪಿಗೆ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುವ ನಿರೀಕ್ಷೆಯಿದೆ.

ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಮತ್ತು ವ್ಯವಹಾರಕ್ಕೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಾದೇಶಿಕ ವಿಮಾನಯಾನ ಸಂಸ್ಥೆ ಸ್ಟಾರ್ ಏರ್ ಬೆಂಗಳೂರು ಮತ್ತು ಹಂಪಿಯನ್ನು ಸಂಪರ್ಕಿಸುವ ಹೊಸ ವಿಮಾನವನ್ನು ಪ್ರಾರಂಭಿಸುವ ಯೋಜನೆಯನ್ನು ಪ್ರಕಟಿಸಿದೆ.

ಐತಿಹಾಸಿಕ ಪಟ್ಟಣಕ್ಕೆ ಹತ್ತಿರದ ವಿಮಾನ ನಿಲ್ದಾಣವಾದ ವಿದ್ಯಾನಗರ (ಜೆಎಸ್‌ಡಬ್ಲ್ಯೂ) ಏರ್ ಪೋರ್ಟ್ ಮೂಲಕ ವಿಮಾನಗಳು ಕಾರ್ಯನಿರ್ವಹಿಸಲಿವೆ. ಕಳೆದ ಒಂದು ತಿಂಗಳಿನಿಂದ ಜೆಎಸ್‌ಡಬ್ಲ್ಯೂ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿರುವುದರಿಂದ ಪ್ರಯಾಣಿಕರು ಮತ್ತು ಸ್ಥಳೀಯರಿಗೆ ಈ ಘೋಷಣೆ ನಿರಾಳವಾಗಿದೆ.

ಈ ಹೊಸೆ ವಿಮಾನ ಯಾನ ಸೇವೆಯಿಂದ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಮತ್ತು ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಹಂಪಿಗೆ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುವ ನಿರೀಕ್ಷೆಯಿದೆ. ಬಳ್ಳಾರಿಗೂ ಸಹ ಪ್ರಯೋಜನವಾಗಲಿದೆ, ವಿಮಾನ ಸೇವೆಯು ನವೆಂಬರ್ 1 ರಂದು ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸ್ಟಾರ್ ಏರ್‌ನ ಘೋಷಣೆಯು ಪ್ರವಾಸಿಗರು ಮತ್ತು ಸ್ಥಳೀಯ ಉದ್ಯಮಿಗಳಿಗೆ ಸಂತೋಷವನ್ನು ತಂದಿದೆ. ಈ ಹಿಂದೆ, ಅಲೈಯನ್ಸ್ ಏರ್ ಹಂಪಿಯಿಂದ ಬೆಂಗಳೂರಿಗೆ ದೈನಂದಿನ ವಿಮಾನಗಳನ್ನು ನಿರ್ವಹಿಸುತ್ತಿತ್ತು, ಆದರೆ ತಾಂತ್ರಿಕ ಕಾರಣಗಳಿಂದ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

ಸ್ಟಾರ್ ಏರ್ ಪ್ರಕಾರ, ದೈನಂದಿನ ವಿಮಾನವು ಬೆಂಗಳೂರಿನಿಂದ ಬೆಳಿಗ್ಗೆ ಹೊರಟು, ವಿದ್ಯಾನಗರವನ್ನು ತಲುಪಿ, ಸ್ವಲ್ಪ ಸಮಯದ ನಂತರ ಹಿಂತಿರುಗುತ್ತದೆ. ಈ ವಿಮಾನವು ಬೆಂಗಳೂರಿನಿಂದ ಬೆಳಿಗ್ಗೆ 7:50 ಕ್ಕೆ ಹೊರಟು, 8.40 ಕ್ಕೆ ವಿದ್ಯಾನಗರ ತಲುಪಿ, 9.10 ಕ್ಕೆ ವಿದ್ಯಾನಗರದಿಂದ ಹಿಂತಿರುಗಿ ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ತಲುಪಲಿದೆ.

ಇದು ದೈನಂದಿನ ಸೇವೆಯಾಗಿರುತ್ತದೆ. ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘ ಮತ್ತು ಹಂಪಿ ಮಾರ್ಗದರ್ಶಿಯ ಕಾರ್ಯದರ್ಶಿ ವಿರೂಪಾಕ್ಷಿ ವಿ ಹಂಪಿ ಮಾತನಾಡಿ "ಹಂಪಿ ಜೆಎಸ್‌ಡಬ್ಲ್ಯೂ ವಿದ್ಯಾನಗರ ವಿಮಾನ ನಿಲ್ದಾಣದಿಂದ ಸುಮಾರು 35 ಕಿ.ಮೀ ದೂರದಲ್ಲಿದೆ. ಪ್ರಸ್ತುತ, ಅನೇಕ ಪ್ರವಾಸಿಗರು ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಬಳಸುತ್ತಾರೆ, ಇದು ಸುಮಾರು 150 ಕಿ.ಮೀ ದೂರದಲ್ಲಿದೆ. ಈ ಅತ್ಯಂತ ಅಗತ್ಯವಾದ ಸೇವೆಗಾಗಿ ನಾನು ಸ್ಟಾರ್ ಏರ್‌ಗೆ ಕೃತಜ್ಞನಾಗಿದ್ದೇನೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಹಿರಂಗವಾಗಿ BJP- RSS ಹೊಗಳಿ, 'ವಿವಾದದ ಕಿಡಿ' ಹೊತ್ತಿಸಿದ ದಿಗ್ವಿಜಯ್ ಸಿಂಗ್!

Kogilu layout Demolition: ಅಕ್ರಮ ತೆರವು ಮಾಡಿಲ್ಲ, ವಲಸಿಗರಾದ್ರೂ ಮುಸ್ಲಿಂ ಕುಟಂಬಗಳಿಗೆ ಬೇರೆಡೆ ಜಾಗ ಕೋಡ್ತೀವಿ: ಸಿದ್ದರಾಮಯ್ಯ

Pushpa 2 ಕಾಲ್ತುಳಿತ ಪ್ರಕರಣ: ಪೊಲೀಸರಿಂದ ಚಾರ್ಜ್ ಶೀಟ್ ಸಲ್ಲಿಕೆ, ನಟ ಅಲ್ಲು ಅರ್ಜುನ್ 11ನೇ ಆರೋಪಿ!

ಐಪಿಎಲ್ ಆರಂಭಕ್ಕೂ ಮುನ್ನವೇ RCBಗೆ ಆಘಾತ, ತಂಡದ ಸ್ಟಾರ್ ಆಲ್ರೌಂಡರ್ ಗಾಯ, ಟೂರ್ನಿ ಆಡೋದೇ ಡೌಟ್!

ಅನಧಿಕೃತ ಮನೆ ಕಳೆದುಕೊಂಡ ಮುಸ್ಲಿಂ ಜನರಿಗಾಗಿ ಮಿಡಿದ ಕೇರಳ ಸರ್ಕಾರ, ಬೆಂಗಳೂರಿನ ಕೋಗಿಲು ಲೇಔಟ್‌ಗೆ ಭೇಟಿ ಕೊಟ್ಟ MP ಎಎ ರಹೀಮ್!

SCROLL FOR NEXT