ಎಚ್.ಡಿ ಕುಮಾರಸ್ವಾಮಿ, ಸಿಎನ್ ಮಂಜುನಾಥ್ ಮತ್ತು ಶೋಭಾ ಕರಂದ್ಲಾಜೆ 
ರಾಜ್ಯ

ಆಮದಿನ ಮೇಲಿನ ಅವಲಂಬನೆ ಕಡಿಮೆ ಮಾಡಲು ರೈತರು ಹೆಚ್ಚು ದ್ವಿದಳ ಧಾನ್ಯ ಬೆಳೆಯಬೇಕು: ಎಚ್‌ಡಿ ಕುಮಾರಸ್ವಾಮಿ

ಪ್ರಧಾನಿಯವರು ಕೃಷಿಗೆ ಹೆಚ್ಚು ಒತ್ತು ನೀಡಿದ್ದಾರೆ. ರಾಷ್ಟ್ರವು ಕೃಷಿ ಕ್ಷೇತ್ರದಲ್ಲಿ ದೊಡ್ಡ ಸಾಧನೆಗಳನ್ನು ಮಾಡುತ್ತಿದೆ. ರೈತರ ಬಗ್ಗೆ ಕಳಕಳಿ ಹೊಂದಿರುವ ಮೋದಿಯವರು ಆರ್ಥಿಕಶಕ್ತಿ ತುಂಬಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು: ಭಾರತವು ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭತ್ತದ ಜೊತೆಗೆ ದ್ವಿದಳ ಧಾನ್ಯಗಳನ್ನು ಬೆಳೆಯುವಂತೆ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವ ಎಚ್‌ಡಿ ಕುಮಾರಸ್ವಾಮಿ ರೈತರಿಗೆ ಕರೆ ನೀಡಿದ್ದಾರೆ.

ಯಲಹಂಕದಲ್ಲಿ ರಾಷ್ಟ್ರೀಯ ಕೃಷಿ ಕೀಟ ಸಂಪನೂಲ ಬ್ಯೂರೋದ 33ನೇ ಸಂಸ್ಥಾಪನಾ ದಿನಾಚರಣೆ ಹಾಗೂ 3ನೇ ಕೃಷಿಕೀಟ ಜೈವಿಕ ನಿಯಂತ್ರಣದ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೇಳೆಕಾಳುಗಳನ್ನು ಬೆಳೆಯಲು ರೈತರು ಮುಂದಾಗಬೇಕು, ದ್ವಿದಳ ಧಾನ್ಯ ಬೆಳೆಯಲು ರೈತರಿಗೆ ಉತ್ತೇಜನ ನೀಡುವ ಯೋಜನೆಗೆ ಕೇಂದ್ರ ಸರ್ಕಾರದಿಂದ 35 ಸಾವಿರ ಕೋಟಿ ರೂ.ನಷ್ಟು ಅನುದಾನ ಒದಗಿಸಲಾಗಿದೆ, ಅಕ್ಕಿಯಿಂದಲೇ ಪೌಷ್ಠಿಕತೆ ಸಾಧ್ಯವಿಲ್ಲ. ಹೀಗಾಗಿ ದ್ವಿದಳ ಧಾನ್ಯ ಪೌಷ್ಟಿಕತೆ ಹೆಚ್ಚಳಕ್ಕೆ ಸಹಕಾರಿಯಾಗಿದೆ ಎಂದು ಹೇಳಿದರು.

ಪ್ರಧಾನಿಯವರು ಕೃಷಿಗೆ ಹೆಚ್ಚು ಒತ್ತು ನೀಡಿದ್ದಾರೆ. ರಾಷ್ಟ್ರವು ಕೃಷಿ ಕ್ಷೇತ್ರದಲ್ಲಿ ದೊಡ್ಡ ಸಾಧನೆಗಳನ್ನು ಮಾಡುತ್ತಿದೆ. ರೈತರ ಬಗ್ಗೆ ಕಳಕಳಿ ಹೊಂದಿರುವ ಮೋದಿಯವರು ರೈತರಿಗೆ ಆರ್ಥಿಕಶಕ್ತಿ ತುಂಬಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕಳಪೆ ರಸಗೊಬ್ಬರ ಮಾರಾಟವಾಗುತ್ತಿದೆ. ಇದರಿಂದ ಭೂಮಿಯ ಫಲವತ್ತತೆ ನಾಶವಾಗುವುದಲ್ಲದೆ, ಆಹಾರದ ಉತ್ಪಾದನೆಯಲ್ಲೂ ಕುಂಠಿತವಾಗುತ್ತದೆ. ಕಪ್ಪು ತಲೆ ಹುಳುವಿನ ಬಾಧೆಯಿಂದ ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹುಳುಗಳ ಬಾಧೆಗೆ ನನ್ನ ತೆಂಗಿನ ತೋಟವು ಒಳಗಾಗಿದೆ. ತೆಂಗಿನ ಮರದ ಗರಿಗಳು ಒಣಗುತ್ತಿವೆ. ಕ್ರಿಮಿನಾಶಕವನ್ನು ಅನಿಯಂತ್ರಿತವಾಗಿ ಬಳಸುವುದರಿಂದ ರೈತರ ಬದುಕು ಹಾಳಾಗುತ್ತಿದೆ ಎಂದು ಅವರು ಹೇಳಿದರು.

ಬೆಂಗಳೂರು ಗ್ರಾಮೀಣ ಸಂಸದ ಡಾ. ಸಿ.ಎನ್. ಮಂಜುನಾಥ್, "ಭಾರತವು ಪ್ರತಿ ವರ್ಷ ಸುಮಾರು 15 ರಿಂದ ಶೇ. 35 ರಷ್ಟು ಬೆಳೆಗಳನ್ನು ಕೀಟ ಸಂಬಂಧಿತ ರೋಗಗಳಿಂದ ಕಳೆದುಕೊಳ್ಳುತ್ತದೆ, ಇದರ ಪರಿಣಾಮವಾಗಿ ರೈತರ ನಷ್ಟವು ರೂ. 90,000 ಕೋಟಿ ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು. ಮಾನವನ ಆರೋಗ್ಯವು ಬೆಳೆಗಳ ಗುಣಮಟ್ಟ ಮತ್ತು ಮಣ್ಣಿನ ಫಲವತ್ತತೆಯನ್ನು ಅವಲಂಬಿಸಿರುತ್ತದೆ ಎಂದು ಒತ್ತಿ ಹೇಳಿದರು.

ನಾವು ಹೆಚ್ಚಾಗಿ ಜೈವಿಕ ವಿಧಾನಗಳನ್ನು ಬಳಸಬೇಕಾಗಿದೆ. ಸಾವಯವ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಅನೇಕ ರೋಗಗಳನ್ನು ತಡೆಗಟ್ಟಬಹುದು. ಕೀಟನಾಶಕಗಳು ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡುವುದು ಅವಶ್ಯಕ ಎಂದು ಅವರು ಹೇಳಿದರು.

ಪರಿಸರಕ್ಕೆ ಮನುಷ್ಯರ ಅಗತ್ಯವಿಲ್ಲ - ಮನುಷ್ಯರಿಗೆ ಪರಿಸರ ಬೇಕು. ನಾವು ಮಣ್ಣು, ಗಾಳಿ ಮತ್ತು ನೀರನ್ನು ನಾಶಮಾಡಿದರೆ, ನಾವು ನಮ್ಮನ್ನು ನಾವೇ ನಾಶಪಡಿಸಿಕೊಂಡೆತೆ. ನಮ್ಮ ಭವಿಷ್ಯವು ಸುಸ್ಥಿರ ಮತ್ತು ಜೈವಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವುದರ ಮೇಲೆ ಅವಲಂಬಿತವಾಗಿದೆ. ಆರೋಗ್ಯಕರ ಮಣ್ಣು, ಆರೋಗ್ಯಕರ ಬೆಳೆಗಳು ಮತ್ತು ಆರೋಗ್ಯವಂತ ಜನರು, ಅದು ನಮ್ಮ ಹೊಸ ಕೃಷಿ ಮಂತ್ರವಾಗಿರಬೇಕು" ಎಂದು ಅವರು ಹೇಳಿದರು.

ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಶೋಭಾ ಕರಂದ್ಲಾಜೆ ಮಾತನಾಡಿ, ನಮ್ಮ ರೈತರ ಹಿಂದಿನ ತಲೆಮಾರುಗಳು ರೈತ ಸ್ನೇಹಿ ಕೀಟಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ಹೊಂದಿದ್ದವು ಎಂದು ಹೇಳಿದರು. ಇಂದಿನ ರೈತರಿಗೂ ಈ ಜ್ಞಾನವನ್ನು ಪ್ರಸಾರ ಮಾಡುವ ಕೆಲಸ ಮಾಡಲಾಗುತ್ತಿದೆ. ರೈತರು, ಸಂಶೋಧಕರು ಮತ್ತು ವಿಜ್ಞಾನಿಗಳಿಗೆ ಸಾವಯವ ಕೃಷಿಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭ.. ಸುಳ್ಳು ಸುದ್ದಿ ಹರಡಿದ್ರೆ ಕೇಸ್ ಹಾಕ್ತೀವಿ': ಸಿಎಂ ಸಿದ್ದರಾಮಯ್ಯ ಘೋಷಣೆ

ರಾಜ್ಯ ಸರ್ಕಾರಕ್ಕೆ ಸೆಡ್ಡು: ಕಲಬುರಗಿಯಲ್ಲಿ ನಡೆದ RSS ಪಥಸಂಚಲನದಲ್ಲಿ ಭಾಗಿಯಾದ ಸರ್ಕಾರಿ ವೈದ್ಯ, Congress ಕಾರ್ಯಕರ್ತರು!

ತಮ್ಮ ಪಕ್ಷದ ಡಿಸಿಎಂಗೆ ಮತ ಹಾಕಬೇಡಿ ಎಂದು ಬಿಹಾರಿಗಳಿಗೆ ಬಿಜೆಪಿ ನಾಯಕ ಮನವಿ!

'96 ಲಕ್ಷ ನಕಲಿ ಮತದಾರರ ಸೇರ್ಪಡೆ': ಚುನಾವಣಾ ಆಯೋಗದ ವಿರುದ್ಧ ರಾಜ್ ಠಾಕ್ರೆ ಕಿಡಿ

ಶಿಮ್ಲಾದಲ್ಲಿ ಪಂಚಾಯತ್ ಮುಖ್ಯಸ್ಥನಿಂದ ಬಾಲಕಿ ಮೇಲೆ ಅತ್ಯಾಚಾರ!

SCROLL FOR NEXT