ಮೈಸೂರು: ಮೈಸೂರಿನ ಸಾಲಿಗ್ರಾಮ ಪಟ್ಟಣದಲ್ಲಿರುವ ಭಾಸ್ಕರ ದೇವಸ್ಥಾನದ ಬಳಿ ಕಾಲುವೆಗೆ ಈಜಲು ಹೋಗಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತ ಬಾಲಕರನ್ನು 13 ವರ್ಷದ ಅಜಾನ್, 14 ವರ್ಷದ ಲುಕ್ಮಾನ್ ಮತ್ತು 16 ವರ್ಷದ ಅಯಾನ್ ಎಂದು ಗುರುತಿಸಲಾಗಿದೆ. ಇಬ್ಬರ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬನ ಶವಕ್ಕಾಗಿ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.