BMRCL ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ 
ರಾಜ್ಯ

ರಸ್ತೆ ಗುಂಡಿ ಮುಚ್ಚಲು ಜಾತಿ ಸಮೀಕ್ಷೆ, ಮಳೆ ಅಡ್ಡಿ: GBA ಮುಖ್ಯಸ್ಥ ಮಹೇಶ್ವರ್ ರಾವ್

ಮಳೆಯಿಂದಾಗಿ ಮುಚ್ಚಿದ್ದ ಗುಂಡಿಗಳೂ ಕೂಡ ಬಾಯ್ತೆರೆಯುತ್ತಿವೆ. ಮತ್ತೆ ಮತ್ತೆ ಗುಂಡಿಗಳು ಕಾಣಿಸಿಕೊಳ್ಳುತ್ತಿವೆ. ಗುಂಡಿಗಳನ್ನು ಮುಚ್ಚಲು ಸಮೀಕ್ಷೆ ಕಾರ್ಯ ಮತ್ತು ಮಳೆ ಎರಡೂ ದೊಡ್ಡ ಸವಾಲನ್ನು ಎದುರು ಮಾಡುತ್ತಿದೆ.

ಬೆಂಗಳೂರು: ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ನಡೆಯುತ್ತಿರುವ ಸಾಮಾಜಿಕ-ಆರ್ಥಿಕ ಸಮೀಕ್ಷೆ ಮತ್ತು ಮಳೆ ಹಿನ್ನೆಲೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಸರ್ಕಾರದ ಗಡುವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯಸ್ಥ ಮಹೇಶ್ವರ್ ರಾವ್ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಸಮೀಕ್ಷೆ ಹಾಗೂ ಮಳೆ ಹಿನ್ನೆಲೆ ನಗರದಾದ್ಯಂತ ಸಾವಿರಾರು ಗುಂಡಿಗಳನ್ನು ಮುಚ್ಚಲು ಅಕ್ಟೋಬರ್ 31 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಗದಿಪಡಿಸಿದ ಗಡುವನ್ನು ಪೂರೈಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕಠಿಣ ಸಮಯವನ್ನು ಎದುರಿಸುತ್ತಿದೆ ಎಂದು ಹೇಳಿದರು.

ಮಳೆಯಿಂದಾಗಿ ಮುಚ್ಚಿದ್ದ ಗುಂಡಿಗಳೂ ಕೂಡ ಬಾಯ್ತೆರೆಯುತ್ತಿವೆ. ಮತ್ತೆ ಮತ್ತೆ ಗುಂಡಿಗಳು ಕಾಣಿಸಿಕೊಳ್ಳುತ್ತಿವೆ. ಗುಂಡಿಗಳನ್ನು ಮುಚ್ಚಲು ಸಮೀಕ್ಷೆ ಕಾರ್ಯ ಮತ್ತು ಮಳೆ ಎರಡೂ ದೊಡ್ಡ ಸವಾಲನ್ನು ಎದುರು ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ, ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಜಿಬಿಎ ಮಿತಿಯ ಐದು ಪಾಲಿಕೆಗಳಲ್ಲಿ 10,000 ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಹೇಳಿಕೊಂಡಿದ್ದು, 500 ಕಿ.ಮೀ. ರಸ್ತೆಯ ವೈಟ್ ಟಾಪಿಂಗ್ ಅನ್ನು 4,000 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದ್ದರು.

ಸಮೀಕ್ಷೆ ನಡೆಯುತ್ತಿರುವ ಕಾರಣ ಬೆಳಿಗ್ಗೆ 8 ಗಂಟೆಯಿಂದಲೇ ಮನೆಯಿಂದ ಹೊರಹೋಗುತ್ತಿದ್ದು, ಸಂಜೆ ತಡವಾಗಿ ಮನೆಗೆ ಮರಳುತ್ತಿದ್ದೇವೆ. ಹೀಗಾಗಿ, ಗುಂಡಿ ಗುಂಡಿ ಮುಚ್ಚಿವುದು ಮತ್ತು ವಾರ್ಷಿಕ ನಿರ್ವಹಣಾ ಕಾರ್ಯಗಳ ಮೇಲೆ ತೀವ್ರ ಪರಿಣಾಮ ಬೀರಿವೆ ಎಂದು ಜಿಬಿಎ ಎಂಜಿನಿಯರ್‌ಗಳು ಹೇಳಿದ್ದಾರೆ.

ಗುಂಡಿ ತುಂಬುವ ಕೆಲಸಗಳ ಪಟ್ಟಿಯನ್ನು ಸಿದ್ಧಪಡಿಸಬೇಕಾಗಿತ್ತು. ನಾವು ಕೆಲಸ ಪೂರ್ಣಗೊಂಡ ಫೋಟೋವನ್ನು ಮೀಸಲಾದ ಅರ್ಜಿಯಲ್ಲಿ ಅಪ್‌ಲೋಡ್ ಮಾಡಬೇಕಾಗಿತ್ತು. ಸಾಮಾಜಿಕ-ಆರ್ಥಿಕ ಸಮೀಕ್ಷೆಯಲ್ಲಿ ನಾವು ತೊಡಗಿಸಿಕೊಂಡಿರುವುದರಿಂದ, ಈ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹಿರಿಯ ಎಂಜಿನಿಯರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಚರ್ಚೆ ನಡುವಲ್ಲೇ ನವೆಂಬರ್‌ನಲ್ಲಿ ರಾಹುಲ್ ಗಾಂಧಿ ಬೆಂಗಳೂರಿಗೆ..?

ಕರ್ನೂಲ್ ಬಸ್ ಬೆಂಕಿ ದುರಂತ: ರಾಜ್ಯದ 6 ಮಂದಿ ಬಲಿ

'ನೀನು ಹಾಗೆ ಮಾತನಾಡಿದ್ದೀಯ ಎಂದು ಯತೀಂದ್ರನ್ನ ಕೇಳಿದೆ, ಅದಕ್ಕವನು ಹೀಗೆ ಹೇಳಿದ'...ಪುತ್ರನ 'ಉತ್ತರಾಧಿಕಾರಿ' ಹೇಳಿಕೆಗೆ ಸಿಎಂ ಸಿದ್ದರಾಮಯ್ಯ-Video

ಭಾರತ ಅಮೆರಿಕ ವ್ಯಾಪಾರ ಒಪ್ಪಂದ: 'ಬಹುತೇಕ ಎಲ್ಲ ಸಮಸ್ಯೆಗಳು ಇತ್ಯರ್ಥವಾಗಿವೆ': ಸರ್ಕಾರಿ ಮೂಲಗಳು!

ರಷ್ಯನ್ ತೈಲ: ಆರ್ಥಿಕ ಅವಶ್ಯಕತೆ ಮತ್ತು ಅಮೆರಿಕದ ಒತ್ತಡಗಳ ನಡುವೆ ಸಿಲುಕಿದ ಭಾರತ, ಚೀನಾ (ಜಾಗತಿಕ ಜಗಲಿ)

SCROLL FOR NEXT