ಎಡಮುರಿ ಫಾಲ್ಸ್‌ ಸಾಂದರ್ಭಿಕ ಚಿತ್ರ 
ರಾಜ್ಯ

Edamuri Falls: ಎಡಮುರಿ ಫಾಲ್ಸ್‌ನಲ್ಲಿ ಮುಳುಗಿ ಇಬ್ಬರು ಬೆಂಗಳೂರು ವಿದ್ಯಾರ್ಥಿಗಳ ಸಾವು

ಮೃತ ವಿದ್ಯಾರ್ಥಿಗಳನ್ನು ಬಿಬಿಎ ವಿದ್ಯಾರ್ಥಿಗಳಾದ ವಿಲಿಯಂ ಶ್ಯಾಮ್(21) ಮತ್ತು ವೆಂಕಟೇಶ್ (21) ಎಂದು ಗುರುತಿಸಲಾಗಿದೆ.

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಎಡಮುರಿ ಜಲಪಾತದಲ್ಲಿ ಮುಳುಗಿ ಇಬ್ಬರು ಬೆಂಗಳೂರಿನ ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ (Yedamuri Falls) ಶುಕ್ರವಾರ ನಡೆದಿದೆ.

ಎಡಮುರಿ ಫಾಲ್ಸ್‌ ನೋಡಲು ಬೆಂಗಳೂರಿನ ಡಾನ್ ಬಾಸ್ಕೋ ಪದವಿ ಕಾಲೇಜಿನ ಇಬ್ಬರು ತೆರಳಿದ್ದರು. ಕಾಲೇಜಿಗೆ ರಜೆ ಇದ್ದ ಕಾರಣ ಸ್ನೇಹಿತರೊಂದಿಗೆ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದಾಗ ದುರ್ಘಟನೆ ನಡೆದಿದೆ.

ಮೃತ ವಿದ್ಯಾರ್ಥಿಗಳನ್ನು ಬಿಬಿಎ ವಿದ್ಯಾರ್ಥಿಗಳಾದ ವಿಲಿಯಂ ಶ್ಯಾಮ್(21) ಮತ್ತು ವೆಂಕಟೇಶ್ (21) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿದ ವಿಷಯ ತಿಳಿದು ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ, ಮೃಹದೇಹಗಳನ್ನು ಹೊರ ತೆಗೆದಿದ್ದಾರೆ.

ವಿಹಾರಕ್ಕೆಂದು ಏಳು ಮಂದಿ ವಿದ್ಯಾರ್ಥಿಗಳ ತಂಡ ಬೆಂಗಳೂರಿನಿಂದ ಎಡಮುರಿ ಫಾಲ್ಸ್ ಗೆ ಬಂದಿತ್ತು. ಈಜಲು ನದಿಗೆ ಇಳಿದಾಗ ವಿಲಿಯಂ ಶ್ಯಾಂ ಮತ್ತು ವೆಂಕಟೇಶ್ ಸುಳಿಗೆ ಸಿಕ್ಕಿ ನೀರಿನಲ್ಲಿ ಮುಳುಗಿದ್ದಾರೆ. ಅವರನ್ನು ರಕ್ಷಿಸಲು ಸಹಪಾಠಿಗಳು ಹಾಗೂ ಸ್ಥಳೀಯರು ನಡೆಸಿದ ಪ್ರಯತ್ನ ವಿಫಲವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೆಆರ್ ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ಜೊತೆ ವ್ಯಾಪಾರ ಒಪ್ಪಂದ: 'ನಮ್ಮ ತಲೆಗೇ ಬಂದೂಕು ಇಟ್ಟುಕೊಳ್ಳುವ ವ್ಯಾಪಾರ ಒಪ್ಪಂದಕ್ಕೆ ಭಾರತ ಸಹಿ ಹಾಕಲ್ಲ': ಪಿಯೂಷ್ ಗೋಯಲ್

ಟ್ರಂಪ್ ಕೋರಿಕೆಯ ಮೇರೆಗೆ ಭಾರತ ರಷ್ಯಾದಿಂದ ತೈಲ ಆಮದನ್ನು ತಗ್ಗಿಸಲಿದೆ: ಶ್ವೇತಭವನ

ಭಾರತದ ಗಡಿಯಲ್ಲಿ ಹೊಸದಾದ 'ವಾಯು ರಕ್ಷಣಾ ವ್ಯವಸ್ಥೆ' ನಿರ್ಮಿಸುತ್ತಿರುವ ಚೀನಾ! Satellite Images

ಮುಳ್ಳಂದಿ ಮುಖದ ಕಾಮಿಡಿ ಪೀಸ್! ನಮ್ಮ ತಂದೆ ಚಿಕ್ಕಬಳ್ಳಾಪುರ ಕಡೆ ಬಂದಿದ್ರೆ ನೀನು ಸುಂದರವಾಗಿ ಹುಟ್ಟುತ್ತಿದ್ದೆ: ಪ್ರತಾಪ್ ಸಿಂಹ ಲೇವಡಿ

Kurnool Bus Fire: ಆಂಧ್ರ ಪ್ರದೇಶದ ಕರ್ನೂಲ್ ಹೆದ್ದಾರಿಯಲ್ಲಿ ಹೈದರಾಬಾದ್-ಬೆಂಗಳೂರು ಖಾಸಗಿ ಬಸ್ ನಲ್ಲಿ ಭೀಕರ ಬೆಂಕಿ ಅವಘಡ: 21 ಮಂದಿ ಸಜೀವ ದಹನ-Video

SCROLL FOR NEXT