ಶಾಮನೂರು ಶಿವಶಂಕರಪ್ಪ 
ರಾಜ್ಯ

ಜಾತಿ ಗಣತಿ: ವೀರಶೈವ ಲಿಂಗಾಯತ ಮಹಾಸಭಾ ಕಾರ್ಯತಂತ್ರ; ಶಾಮನೂರು ಶಿವಶಂಕರಪ್ಪ ಮಹತ್ವದ ಸುದ್ದಿಗೋಷ್ಠಿ!

ಜಾತಿ ಗಣತಿಯಲ್ಲಿ ನಿಖರವಾದ ಪ್ರಾತಿನಿಧ್ಯ ಖಾತ್ರಿಗೆ ಸಮುದಾಯದ ಪ್ರಯತ್ನಗಳನ್ನು ಅವರ ಸುದ್ದಿಗೋಷ್ಠಿಯಲ್ಲಿ ತಿಳಿಸುವ ನಿರೀಕ್ಷೆಯಿದೆ

ಬೆಂಗಳೂರು: ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ , ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಕುರಿತು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಭಾನುವಾರ ತಮ್ಮ ಸಮುದಾಯದ ಮುಂದಿನ ಕಾರ್ಯತಂತ್ರವನ್ನು ರೂಪಿಸಲಿದ್ದಾರೆ.

ಬಳಿಕ ಬೆಂಗಳೂರಿನ ಸದಾಶಿವನಗರದಲ್ಲಿರುವ ವೀರಶೈವ ಲಿಂಗಾಯತ ಭವನದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಶಿವಶಂಕರಪ್ಪ ಮಾತನಾಡಲಿದ್ದಾರೆ. ಮಹಾಸಭಾದ ಪ್ರಧಾನ ಕಾರ್ಯದರ್ಶಿ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ, ಮಹಾಸಭಾದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಡಿಜಿಪಿ ಶಂಕರ ಬಿದರಿ ಸೇರಿದಂತೆ ಪ್ರಮುಖರು ಹಾಗೂ ಇತರ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಜಾತಿ ಗಣತಿಯಲ್ಲಿ ನಿಖರವಾದ ಪ್ರಾತಿನಿಧ್ಯ ಖಾತ್ರಿಗೆ ಸಮುದಾಯದ ಪ್ರಯತ್ನಗಳನ್ನು ಅವರ ಸುದ್ದಿಗೋಷ್ಠಿಯಲ್ಲಿ ತಿಳಿಸುವ ನಿರೀಕ್ಷೆಯಿದೆ. ಸಮುದಾಯದ ಸದಸ್ಯರಿಗೆ ಸಮೀಕ್ಷೆಯಲ್ಲಿ ಸಹಾಯ ಮಾಡಲು ಪ್ರತಿ ತಾಲ್ಲೂಕಿನಲ್ಲಿ ಮೀಸಲಾದ ತಂಡಗಳನ್ನು ನಿಯೋಜಿಸುವ ಯೋಜನೆಯನ್ನು ಸಮುದಾಯವು ಈಗಾಗಲೇ ಘೋಷಿಸಿದೆ.

ನಮ್ಮ ತಾಲೂಕುವಾರು ನೆಟ್‌ವರ್ಕ್‌ಗಳ ಮೂಲಕ ಪ್ರಮಾಣಿತ ಪ್ರತಿಕ್ರಿಯೆ ಸಿದ್ಧಪಡಿಸಲು ಮತ್ತು ವಿತರಿಸಲು ಅಧಿಕೃತ ಸಮೀಕ್ಷೆಯ ಕೈಪಿಡಿಗಾಗಿ ಕಾಯುತ್ತಿದ್ದೇವೆ ಎಂದು ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ ತಿಳಿಸಿದ್ದಾರೆ.ಪ್ರ

ಪ್ರಸ್ತುತ ನಡೆಯುತ್ತಿರುವ ಜಾತಿ ಗಣತಿ ಕುರಿತು ಅನೇಕ ಟೀಕೆಗಳು ಕೇಳಿಬರುತ್ತಿವೆ. ಕೆಲವರು ಇದನ್ನು ಸಾಮಾಜಿಕ ಅಸಮಾನತೆಗಳನ್ನು ಪರಿಹರಿಸುವ ಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ ಮತ್ತೆ ಕೆಲವರು ಸಂಭಾವ್ಯ ಪಕ್ಷಪಾತಗಳ ಬಗ್ಗೆ ಎಚ್ಚರಿಸಿದ್ದಾರೆ.

ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ, ಲಿಂಗಾಯತ ಮಠಾಧೀಶರು ಮತ್ತು ಸಮುದಾಯದ ಮುಖಂಡರು ಜಾತಿ ಗಣತಿಯಲ್ಲಿ ಲಿಂಗಾಯತರನ್ನು ವಿಶಿಷ್ಟ ಧಾರ್ಮಿಕ ಗುರುತಾಗಿ ಗುರುತಿಸುವುದು ಪ್ರಾರಂಭವಾಗಬೇಕು. ಲಿಂಗಾಯತ ಎಂಬ ಪ್ರತ್ಯೇಕ ನಮೂದಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಜಾತಿ ಪಟ್ಟಿಯಲ್ಲಿ ಲಿಂಗಾಯತರಲ್ಲಿ ಸುಮಾರು 103 ಉಪಜಾತಿಗಳನ್ನು ಒಳಗೊಂಡಿಲ್ಲ. 181 ಉಪ ಜಾತಿಗಳನ್ನು ಹೊಂದಿದ್ದು, ರಾಜ್ಯದಲ್ಲಿ ದೊಡ್ಡ ಸಮುದಾಯಗಳಲ್ಲಿ ಲಿಂಗಾಯತ ಒಂದಾಗಿದ್ದರೂ, ಅನೇಕ ಉಪಜಾತಿಗಳನ್ನು ಸೇರಿಸಲಾಗಿಲ್ಲ ಎಂದು ಅವರು ಆರೋಪಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಸ್ರೇಲ್ ನಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಜೆರುಸಲೆಮ್ ಬಸ್ ಮೇಲೆ ಗುಂಡಿನ ದಾಳಿ: 5 ಸಾವು, 12 ಜನರಿಗೆ ಗಾಯ

Nepal: ಸಾಮಾಜಿಕ ಮಾಧ್ಯಮ ಬ್ಯಾನ್ ವಿರುದ್ಧ ಪ್ರತಿಭಟನೆ; ಯುವಕರ ಮೇಲೆ ಪೊಲೀಸರ ಗುಂಡು; 19 ಮಂದಿ ಸಾವು; ಸೇನೆ ನಿಯೋಜನೆ; Video!

ಕೋಮು ಘರ್ಷಣೆ: ಸೆಪ್ಟೆಂಬರ್ 9 ರಂದು ಮದ್ದೂರು ಬಂದ್‌ಗೆ ಬಿಜೆಪಿ ಕರೆ

ನಾಳೆ ಉಪರಾಷ್ಟ್ರಪತಿ ಚುನಾವಣೆ: ಮತದಾನದಿಂದ BRS-BJD ದೂರ; ಇದು INDIA ಅಭ್ಯರ್ಥಿ ವಿರುದ್ಧ NDA ಅಭ್ಯರ್ಥಿ ಗೆಲುವಿಗೆ ವರವಾಗುತ್ತಾ?

ರಷ್ಯಾದಿಂದ ತೈಲ ಖರೀದಿ "ರಕ್ತದ ಹಣ": ಭಾರತದ ಮೇಲೆ ಮತ್ತೆ ಕಿಡಿ ಕಾರಿದ ವ್ಯಾಪಾರ ಸಲಹೆಗಾರ ಪೀಟರ್ ನವರೊ!

SCROLL FOR NEXT