ಪ್ರಹ್ಲಾದ್ ಜೋಶಿ 
ರಾಜ್ಯ

ಕರ್ನಾಟಕದಿಂದ ಹೆಸರುಕಾಳು, ಉದ್ದು, ಸೂರ್ಯಕಾಂತಿ ಖರೀದಿಗೆ ಕೇಂದ್ರ ಸಿದ್ಧತೆ: ಪ್ರಹ್ಲಾದ್ ಜೋಶಿ

ಇದರಿಂದ ರಾಜ್ಯದ ರೈತ ಸಮುದಾಯಕ್ಕೆ ಹೆಚ್ಚಿನ ಲಾಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಶನಿವಾರ ಹೇಳಿದ್ದಾರೆ.

ಬೆಂಗಳೂರು: ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ, ಕೇಂದ್ರ ಸರ್ಕಾರವು ಕರ್ನಾಟಕದಿಂದ ಹೆಸರುಕಾಳು, ಉದ್ದು, ಸೂರ್ಯಕಾಂತಿ, ನೆಲಗಡಲೆ ಮತ್ತು ಸೋಯಾಬೀನ್ ಖರೀದಿಸಲಿದೆ. ಇದರಿಂದ ರಾಜ್ಯದ ರೈತ ಸಮುದಾಯಕ್ಕೆ ಹೆಚ್ಚಿನ ಲಾಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಶನಿವಾರ ಹೇಳಿದ್ದಾರೆ.

ರಾಜ್ಯ ಸರ್ಕಾರ ಪ್ರಸ್ತಾಪಿಸಿದಂತೆ, 2025-26 ಖಾರಿಫ್ ಋತುವಿನಲ್ಲಿ ಕರ್ನಾಟಕದಲ್ಲಿ ಬೆಳೆಯುವ ಈ ಬೆಳೆಗಳ ಖರೀದಿಗೆ ಅನುಮೋದನೆ ನೀಡುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೋರಿರುವುದಾಗಿ ಜೋಶಿ ತಿಳಿಸಿದ್ದಾರೆ.

"ನನ್ನ ವಿನಂತಿಯನ್ನು ಕೇಂದ್ರ ಸರ್ಕಾರ ಈಗ ಅನುಮೋದಿಸಿದೆ ಎಂದು ತಮಗೆ ತಿಳಿಸಲು ಸಂತೋಷವಾಗುತ್ತಿದೆ" ಎಂದು ಪ್ರಹ್ಲಾದ್ ಜೋಶಿ ಅವರು ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್' ನಲ್ಲಿ, ಚೌಹಾಣ್ ಅವರ ಪತ್ರವನ್ನು ಹಂಚಿಕೊಂಡಿದ್ದಾರೆ.

ಪ್ರಹ್ಲಾದ್ ಜೋಶಿಕೇಂದ್ರ ಕೃಷಿ ಸಚಿವರು ಸೆಪ್ಟೆಂಬರ್ 20 ರಂದು ಜೋಶಿ ಅವರಿಗೆ ಬರೆದ ಪತ್ರದಲ್ಲಿ, "ಕರ್ನಾಟಕ ಸರ್ಕಾರವು 2025-26 ಖಾರಿಫ್ ಋತುವಿನಲ್ಲಿ ರಾಜ್ಯದಲ್ಲಿ ಹೆಸರುಕಾಳು, ಸೂರ್ಯಕಾಂತಿ, ನೆಲಗಡಲೆ ಮತ್ತು ಸೋಯಾಬೀನ್ ಖರೀದಿಗೆ ಪಿಎಸ್ಎಸ್ ಅನುಷ್ಠಾನಕ್ಕೆ ಪ್ರಸ್ತಾವನೆ ಕಳುಹಿಸಿದೆ ಎಂದು ನಿಮಗೆ ತಿಳಿಸಲು ಸಂತೋಷವಾಗುತ್ತಿದೆ ಎಂದಿದ್ದಾರೆ.

ಸರಿಯಾದ ಪರಿಗಣನೆಯ ನಂತರ, ಈ ಸಚಿವಾಲಯವು ಕರ್ನಾಟಕದಲ್ಲಿ ಪಿಎಸ್ಎಸ್ ಅಡಿಯಲ್ಲಿ 38,000 ಮೆಟ್ರಿಕ್ ಟನ್ ಹೆಸರುಕಾಳು, 60,180 ಮೆಟ್ರಿಕ್ ಟನ್ ಉದ್ದು, 15,650 ಮೆಟ್ರಿಕ್ ಟನ್ ಸೂರ್ಯಕಾಂತಿ, 61,148 ಮೆಟ್ರಿಕ್ ಟನ್ ನೆಲಗಡಲೆ ಮತ್ತು 1,15,000 ಮೆಟ್ರಿಕ್ ಟನ್ ಸೋಯಾಬೀನ್ ಖರೀದಿಗೆ ಅನುಮೋದನೆ ನೀಡಿದೆ.

"ರೈತರ ಹಿತಾಸಕ್ತಿ ಕಾಪಾಡಲು ಮತ್ತು ಅವರಿಗೆ ಸ್ಥಿರ ಹಾಗೂ ಸುಸ್ಥಿರ ಆದಾಯವನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರದ ಬದ್ಧತೆಯನ್ನು ಈ ಅನುಮೋದನೆ ಪ್ರತಿಬಿಂಬಿಸುತ್ತದೆ" ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾಷಾ ಮಸೂದೆ ವಿರೋಧಿಸಿ ಸಿದ್ದರಾಮಯ್ಯ ಪತ್ರ: ಕೇರಳ ಸಿಎಂ ಸ್ಪಷ್ಟೀಕರಣ; ಪಿಣರಾಯಿ ವಿಜಯನ್ ಹೇಳಿದ್ದೇನು?

"Surely It's Time": ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

VB-G RAM G ಕುರಿತು ಚರ್ಚೆಗೆ ವಿಶೇಷ ಅಧಿವೇಶನ: ಬಿಜೆಪಿ, ಜೆಡಿಎಸ್ ಸ್ವಾಗತ

I-PAC raids: ಅಪರಿಚಿತ ಇಡಿ ಅಧಿಕಾರಿಗಳ ವಿರುದ್ಧ ಪೊಲೀಸ್ ತನಿಖೆ ಆರಂಭ; ಬಂಗಾಳ ಸರ್ಕಾರದಿಂದ ಸುಪ್ರೀಂಗೆ ಕೇವಿಯಟ್ ಸಲ್ಲಿಕೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಮುಂದಿನ 24 ಗಂಟೆಯಲ್ಲಿ ಕರ್ನಾಟಕದಲ್ಲಿ ತೀವ್ರ ಶೀತಗಾಳಿ?; IMD ಎಚ್ಚರಿಕೆ

SCROLL FOR NEXT