ಖ್ಯಾತ ಯುಟ್ಯೂಬರ್ ಮುಕಳೆಪ್ಪ ಅಲಿಯಾಸ್ ಕ್ವಾಜಾ ಶಿರಹಟ್ಟಿ  
ರಾಜ್ಯ

Love jihad: ಮುಕಳೆಪ್ಪಾ ಅಲಿಯಾಸ್ Khwaja Shirahatti..; ಕನ್ನಡದ ಯೂಟ್ಯೂಬರ್ ವಿರುದ್ಧ ಗಾಯತ್ರಿ ಪೋಷಕರ ಗಂಭೀರ ಆರೋಪ

ಯೂಟ್ಯೂಬರ್ ಮುಕಳೆಪ್ಪಾ ಹಿಂದೂ ಯುವತಿ ಗಾಯತ್ರಿಯನ್ನು ಮೋಸದಿಂದ ಮದುವೆಯಾಗಿದ್ದಾನೆ ಎಂದು ಬಜರಂಗದಳ ದೂರು ನೀಡಿದೆ.

ಧಾರವಾಡ: ಉತ್ತರ ಕರ್ನಾಟಕದ ಖ್ಯಾತ ಯುಟ್ಯೂಬರ್ ಮುಕಳೆಪ್ಪ ಅಲಿಯಾಸ್ ಕ್ವಾಜಾ ಶಿರಹಟ್ಟಿ ವಿರುದ್ಧ ಲವ್ ಜಿಹಾದ್ ಆರೋಪ ಕೇಳಿಬಂದಿದ್ದು, ಆತ ತಮ್ಮ ಮಗಳಿಗೆ ಮೋಸ ಮಾಡಿದ್ದಾನೆ ಎಂದು ಗಾಯತ್ರಿ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಯೂಟ್ಯೂಬರ್ ಮುಕಳೆಪ್ಪಾ ಹಿಂದೂ ಯುವತಿ ಗಾಯತ್ರಿಯನ್ನು ಮೋಸದಿಂದ ಮದುವೆಯಾಗಿದ್ದಾನೆ ಎಂದು ಎಂದು ಬಜರಂಗದಳ ದೂರು ನೀಡಿದೆ.

ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ, ಉತ್ತರ ಕರ್ನಾಟಕದ ಜನಪ್ರಿಯ ಯುಟ್ಯೂಬರ್‌ ಕ್ವಾಜಾ ಶಿರಹಟ್ಟಿ ಅಲಿಯಾಸ್‌ ಮುಕುಳೆಪ್ಪ (YouTuber Mukaleppa) ವಿರುದ್ಧ, ಬಜರಂಗದಳ ಕಾರ್ಯಕರ್ತರು ಲವ್ ಜಿಹಾದ್ ಆರೋಪದಡಿ ದೂರು ಸಲ್ಲಿಸಿದ್ದಾರೆ. ಆರೋಪದಲ್ಲಿ, ಮುಕುಳೆಪ್ಪ ಧಮ್ಕಿಗಳ ಮೂಲಕ ಮತ್ತು ಸುಳ್ಳು ದಾಖಲೆಗಳನ್ನು ನೀಡಿ ಹಿಂದೂ ಯುವತಿಯನ್ನು ಮದುವೆಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಧರ್ಮನಿಂದನೆ ಆರೋಪ

ಮಾತ್ರವಲ್ಲದೆ ಇದೇ ಮುಕಳೆಪ್ಪಾ ವಿರುದ್ಧ ಧರ್ಮನಿಂದನೆ ಆರೋಪ ಕೂಡ ಕೇಳಿಬಂದಿದ್ದು, ತನ್ನ ವಿಡಿಯೋದಲ್ಲಿ ಉದ್ದೇಶಪೂರ್ವಕವಾಗಿ ಹಿಂದೂ ಧರ್ಮವನ್ನು ಅವಮಾನಿಸುತ್ತಿದ್ದಾನೆ ಎಂದು ಭಜರಂಗದಳ ಕಾರ್ಯಕರ್ತರು ದೂರಿನಲ್ಲಿ ಆರೋಪಿಸಿದ್ದಾರೆ.

ಗಾಯತ್ರಿ ಪೋಷಕರ ಗಂಭೀರ ಆರೋಪ

ಈ ನಡುವೆ ಮುಕುಳೆಪ್ಪ ಮದುವೆಯಾಗಿರುವ ಹುಡುಗಿ ಗಾಯತ್ರಿ ಜಾಲಿಹಾಳ ಅವರ ತಾಯಿ ಶಿವಕ್ಕ ಜಾಲಿಹಾಳ ಕೂಡ ಆತನ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಅವರು, 'ಕ್ವಾಜಾ ಅಲಿಯಾಸ್‌ ಮುಕಳೆಪ್ಪ ತನ್ನ ಮಗಳಿಗೆ ಮೋಸ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾರೆ.

'ಮುಕಳೆಪ್ಪ ನನ್ನ ಮಗಳನ್ನು ಟೂರ್ ಗೆ ಕರೆದುಕ್ಕೊಂಡು ಹೋಗುತ್ತಿದ್ದ. ನಾವು ಹಳ್ಳಿಯವರು ಎಲ್ಲೂ ಹೋಗಲ್ಲ. ನನ್ನ ಮಗಳು ದೊಡ್ಡ ಹೆಸರು ಮಾಡಬಹುದು ಅಂತಾ ಮುಕಳೆಪ್ಪನ ಜೊತೆ ವಿಡಿಯೋ ಮಾಡಲು ಹೋಗುತ್ತಿದ್ದಳು. ನಾವು ವಿಡಿಯೋ ಮಾಡಲು ಕಳುಹಿಸಿಕೊಡುತ್ತಿದ್ದೆವು. ಅವನು ಈಗ ನನ್ನ ಮಗಳು ಗಾಯತ್ರಿಗೆ ಮೋಸ ಮಾಡಿದ್ದಾನೆ. ನಮ್ಮ ಹಿಂದೂ ಮಂದಿ ಏನ್ ಶಿಕ್ಷೆ ಕೊಡುತ್ತೀರೋ ಕೊಡಿ. ನನ್ನ ಮಗಳನ್ನ ಕರೆತಂದು ನcಗೆ ಒಪ್ಪಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಕಣ್ಣೀರಿಟ್ಟ ಗಾಯತ್ರಿ ತಾಯಿ

ತಮ್ಮ ಮಗಳನ್ನು ಪುಸಲಾಯಿಸಿ ಮುಕುಳೆಪ್ಪ ಮದುವೆ ಆಗಿದ್ದಾನೆ. ನಮ್ಮ ಮಗಳು ದೊಡ್ಡ ಮಟ್ಟದಲ್ಲಿ ಬೆಳಿತಾಳೆ ಅಂತ ನಾವು ಮುಕುಳೆಪ್ಪ ಜೊತೆಗೆ ವಿಡಿಯೋ ಮಾಡಲು ಅನುಮತಿ ನೀಡಿದ್ದೆವು. ಅದೇ ನಾವು ಮಾಡಿದ ದೊಡ್ಡ ತಪ್ಪು, ಹಿಂದೂ ಸಮಾಜ ನಮ್ಮ ಬೇಕಾದ್ದು ಶಿಕ್ಷೆ ನೀಡಲಿ. ಚಿತ್ರೀಕರಣ ಇದೆ ಅಂದಿದ್ದಕ್ಕೆ ಮೂರ್ನಾಲ್ಕು ದಿನ ಟೂರ್ ಗೆ ಕರೆದುಕೊಂಡು ಹೋಗುತ್ತಿದ್ದ. ಆದರೆ ಮುಕುಳೆಪ್ಪ ನಮ್ಮ ಮಗಳ ತಲೆ ಕೆಡಿಸುತ್ತಿದ್ದಾನೆ ಅಂತ ಗೊತ್ತಾಗಲಿಲ್ಲ. ನಮ್ಮಿಂದ ತಪ್ಪಾಯಿತು ಅಂತ ವಿಡಿಯೋದಲ್ಲಿ ಗಾಯತ್ರಿ ಅವರ ತಂದೆ ತಾಯಿ ಅಳಲು ತೋಡಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

H-1B ವೀಸಾ ಶುಲ್ಕ ಹೆಚ್ಚಳ: 'ಮಾನವೀಯ' ಪರಿಣಾಮಗಳ ಬಗ್ಗೆ MEA ತೀವ್ರ ಕಳವಳ; 'ಅಡೆತಡೆ' ನಿವಾರಣೆಗೆ ಅಮೆರಿಕಕ್ಕೆ ಒತ್ತಾಯ!

ಜಾತಿ ಗಣತಿಯಲ್ಲಿ ಕ್ರಿಶ್ಚಿಯನ್ ಧರ್ಮದಡಿ ವಿವಿಧ ಜಾತಿಗಳ ಉಲ್ಲೇಖ ಕೈಬಿಡಲಾಗಿದೆ: ಸಿಎಂ ಸಿದ್ದರಾಮಯ್ಯ

ಸರ್ಕಾರಕ್ಕೆ ಸೆಡ್ಡು: ಧರ್ಮ ಹಿಂದೂ, ಜಾತಿ ಒಕ್ಕಲಿಗ ಬರೆಸಲು ನಿರ್ಣಯ; ನಿರ್ಮಾಲಾನಂದನಾಥ ಸ್ವಾಮೀಜಿ

India vs Pakistan ಹೈವೋಲ್ಟೇಜ್ ಪಂದ್ಯ: ಆಟಗಾರರಿಗೆ ನಾಯಕ Suryakumar Yadav ಖಡಕ್ ಸೂಚನೆ!

3rd ODI: ವಿರೋಚಿತ ಹೋರಾಟದ ಹೊರತಾಗಿಯೂ ಮುಗ್ಗರಿಸಿದ ಭಾರತ; ಆಸಿಸ್ ತೆಕ್ಕೆಗೆ ಏಕದಿನ ಸರಣಿ!

SCROLL FOR NEXT