ಹಾಸನ: ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣಕ್ಕೆ ಸಂಬಂಧ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. ಹಾಸನದ ಬೇಲೂರು ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಮುಂಭಾಗದ ಬೇಲೂರು ಪುರಸಭೆ ಆವರಣದಲ್ಲಿರುವ ಶ್ರೀ ವಿದ್ಯಾಗಣಪತಿ ದೇವಾಲಯದಲ್ಲಿ ಈ ಘಟನೆ ನಡೆದಿತ್ತು. ಬೆಳಗ್ಗೆ ಭಕ್ತಾಧಿಗಳು ಕೈಮುಗಿಯಲು ಹೋದಾಗ ಗಣಪತಿಗೆ ಚಪ್ಪಲಿ ಹಾರ ಹಾಕಿರುವುದನ್ನು ನೋಡಿದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ನಡುವೆ ದೇವಸ್ಥಾನಕ್ಕೆ ಮುಖ ಮುಚ್ಚಿಕೊಂಡ ಮಹಿಳೆಯೊಬ್ಬರು ಗಣೇಶನ ದೇವಸ್ಥಾನಕ್ಕೆ ಬಂದಿದ್ದು ಮೂರ್ತಿಗೆ ಚಪ್ಪಲಿ ಹಾರ ಹಾಕಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬೇಲೂರು ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಮಹಿಳೆಗಾಗಿ ಹುಡುಕಾಟ ಆರಂಭಿಸಿದ್ದಾರೆ. ಇದೀಗ ಹಾಸನದ ವಿಜಯನಗರ ಬಡಾವಣೆ ನಿವಾಸಿ ಲೀಲಮ್ಮ ಎನ್ನುವ ಮಹಿಳೆಯನ್ನು ಬಂಧಿಸಲಾಗಿದೆ.
1986 ಇಸವಿಯಲ್ಲಿ ಈ ಗಣೇಶ ಪ್ರತಿಷ್ಠಾಪನೆಯಾಗಿತ್ತು. ಇಲ್ಲಿರುವ ಸುತ್ತಮುತ್ತಲಿನ ಜನರು ವ್ಯಾಪಾರ ಉತ್ತಮವಾಗುತ್ತೆ ಎಂಬ ನಂಬಿಕೆಯಲ್ಲಿ ಮುಂಜಾನೆ ಪೂಜೆ ಮಾಡಿಕೊಂಡು ಹೋಗುತ್ತಾರೆ. ಮುಂಜಾನೆ ಎದ್ದ ನಿತ್ಯಕರ್ಮ ಮುಗಿಸಿ ದೇವರ ಮುಖ ನೋಡೋದೆ ಈ ಜನರ ವಾಡಿಕೆ. ಮೂವತ್ತು ನಲವತ್ತೈದು ವರ್ಷದಿಂದ ಈ ಪದ್ದತಿ ನಡೆದುಕೊಂಡು ಬಂದಿದೆ.