ರಾಮನಗರ: ಕನಕಪುರದಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿದ್ದು ಮುಸ್ಲಿಂ ಮಹಿಳೆ ಜೊತೆಗಿದ್ದ ಹಿಂದೂ ವ್ಯಕ್ತಿಗೆ ಮನಬಂದಂತೆ ಥಳಿಸಿ ತಲೆಬೋಳಿಸಿರುವ ಘಟನೆ ನಡೆದಿದ್ದು ಈ ಸಂಬಂಧ ಕನಕಪುರಪುರ ಠಾಣೆ ಪೊಲೀಸರು ಓರ್ವ ಮಹಿಳೆ ಸೇರಿ ಐವರು ಬಂಧಿಸಿದ್ದಾರೆ. ನವಾಜ್, ಕಬೀರ್, ಸುಯೋಲ್, ನಯಾಜ್ ಮತ್ತು ಮಹಿಳೆ ಬಂಧಿತ ಆರೋಪಿಗಳು. ಎರಡು ಪ್ರತ್ಯೇಕ ಎಫ್ಐಆರ್ ಮಾಡಲಾಗಿದೆ. ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಮುಸ್ಲಿಂ ಮಹಿಳೆ ಹಸೀನಾ ಬಾನು ಹಾಗೂ ಹಿಂದೂ ವ್ಯಕ್ತಿ ಮಹೇಶ್ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ಕನಕಪುರದ ಇಂದಿರಾನಗರದಲ್ಲಿ ನಡೆದಿದೆ. ಆರೋಪಿಗಳು ಇಬ್ಬರ ತಲೆಯನ್ನು ಬೋಳಿಸಿದ್ದಾರೆ. ಮಹಿಳೆಯ ಕುಟುಂಬಸ್ಥರು ಹಾಗೂ ಸಂಬಂಧಿಕರಿಂದ ಕೃತ್ಯವೆಸಗಿದ್ದಾರೆ. ಮಹೇಶ್ ಹಾಗೂ ಹಸೀನಾ ಬಾನು ದೂರಿನ ಅನ್ವಯ ಸದ್ಯ ಐವರು ಆರೋಪಿಗಳನ್ನು ಪೊಲೀಸರನ್ನು ಬಂಧಿಸಿದ್ದಾರೆ. ಘಟನೆ ಕುರಿತಂತೆ ಎರಡು ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಎಸ್.ಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.