ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ 2025ರ ಉದ್ಘಾಟನಾ ಕಾರ್ಯಾಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಗರಂ ಆದ ಪ್ರಸಂಗ ನಡೆಯಿತು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ನಾಡಹಬ್ಬ ಐತಿಹಾಸಿಕ ದಸರಾ ಉದ್ಘಾಟನೆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಈ ಅತ್ತ ಸಿದ್ದರಾಮಯ್ಯ ಅವರ ಭಾಷಣ ಆರಂಭವಾಗುತ್ತಿದ್ದಂತೆಯೇ ಇತ್ತ ಕಾರ್ಯಕ್ರಮದಲ್ಲಿ ಹಾಜರಿದ್ದ ಕೆಲವರು ಅಲ್ಲಿಂದ ಎದ್ದು ಹೋಗಲು ಪ್ರಯತ್ನಿಸಿದರು. ಈ ವೇಳೆ ಭಾಷಣದ ಮಧ್ಯೆ ವ್ಯಕ್ತಿಯೊಬ್ಬನಿಗೆ "ಏ ಕೂತ್ಕೊಳ್ರಿ ಯಾರಲೇ" ಎಂದು ಗದರಿದ ಪ್ರಸಂಗ ನಡೆಯಿತು.
ಸಿದ್ದರಾಮಯ್ಯ ಭಾಷಣ ಆರಂಭಿಸುತ್ತಲೇ ಕೆಲವರು ವೇದಿಕೆಯಿಂದ ಹೊರ ಹೋಗಲು ಪ್ರಯತ್ನಿಸಿದರು. ಈ ವೇಳೆ ಇದನ್ನು ಗಮನಿಸಿದ ಸಿಎಂ ಸಿದ್ದರಾಮಯ್ಯ ಸಿಟ್ಟಿನಿಂದ, 'ಏಯ್ ಇನ್ನೊಂದು ಸ್ವಲ್ಪ ಹೊತ್ತು ಕೂತ್ಕೊಳ್ಳೊಕೆ ಆಗಲ್ವಾ ನಿಮಗೇ.. ಕೂತ್ಕೊಳ್ರೊ.. ಅವ್ನ್ ಯಾರೋ ಅವ್ನು.. ಒಂದ್ ಸಾರಿ ಹೇಳಿದ್ರೆ ಗೊತ್ತಾಗಲ್ವಾ ನಿಮಗೆ.. ಯಾಕ್ ಬರ್ತೀರಿ ನೀವು ಇಲ್ಲಿಗೆ.. ಮನೇಲಿ ಇರಬೇಕಾಗಿತ್ತು.. ಎಂದು ಗದರಿದರು.
ಅಲ್ಲದೆ, 'ಪೊಲೀಸ್ ನವರೇ ಅವರನ್ನು ಬಿಡಬೇಡಿ.. ಎಲ್ರನ್ನೂ ಕಳುಹಿಸಿ... ಅರ್ಧ ಗಂಟೆ.. ಒಂದು ಗಂಟೆ ಕೂತ್ಕೊಳ್ಳೇಕೆ ಆಗದೇ ಇದ್ದ ಮೇಲೆ ಯಾಕೆ ಬರ್ತೀರ ಇಲ್ಲಿಗೆ ಫಂಕ್ಷನ್ ಗೆ ನೀವು'.. ಎಂದು ಸಿಟ್ಟಾಗಿ ಹೇಳಿದರು.