ಕೇಂದ್ರದಿಂದ 14 ವರ್ಷದ ಎಲ್ಲಾ ಬಾಲಕಿಯರಿಗೆ HPV ಲಸಿಕೆ ಅಭಿಯಾನ

HPV ಲಸಿಕೆ ಗರ್ಭಕಂಠದ ಕ್ಯಾನ್ಸರ್, ಜನನಾಂಗದ ನರಹುಲಿಗಳು ಮತ್ತು HPV ಯಿಂದ ಉಂಟಾಗುವ ಇತರ ಕ್ಯಾನ್ಸರ್‌ಗಳನ್ನು ತಡೆಯುವ ಅತ್ಯಂತ ಪರಿಣಾಮಕಾರಿ ಲಸಿಕೆಯಾಗಿದೆ.
Representational image
ಸಾಂಕೇತಿಕ ಚಿತ್ರ
Updated on

ನವದೆಹಲಿ: ಕೇಂದ್ರ ಸರ್ಕಾರ ಶೀಘ್ರದಲ್ಲೇ ರಾಷ್ಟ್ರವ್ಯಾಪಿ 14 ವರ್ಷದ ಎಲ್ಲಾ ಬಾಲಕಿಯರಿಗೆ HPV(ಹ್ಯೂಮನ್ ಪ್ಯಾಪಿಲೋಮವೈರಸ್) ಲಸಿಕೆ ಅಭಿಯಾನವನ್ನು ಆರಂಭಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಗಾರ್ಡಸಿಲ್ ಇಂಜೆಕ್ಷನ್(HPV ಲಸಿಕೆ) ಅನ್ನು ಉಚಿತವಾಗಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

HPV ಲಸಿಕೆ ಗರ್ಭಕಂಠದ ಕ್ಯಾನ್ಸರ್, ಜನನಾಂಗದ ನರಹುಲಿಗಳು ಮತ್ತು HPV ಯಿಂದ ಉಂಟಾಗುವ ಇತರ ಕ್ಯಾನ್ಸರ್‌ಗಳನ್ನು ತಡೆಯುವ ಅತ್ಯಂತ ಪರಿಣಾಮಕಾರಿ ಲಸಿಕೆಯಾಗಿದೆ. ಇದು 9 ರಿಂದ 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಹೆಚ್ಚು ಪರಿಣಾಮಕಾರಿಯಾಗಿದೆ.

"ಶಿಫಾರಸು ಮಾಡಲಾದ ವಯಸ್ಸಿನ ಬಾಲಕಿಯರಿಗೆ ಒಂದೇ ಡೋಸ್ ಲಸಿಕೆ ನೀಡಿದರೆ ಬಲವಾದ ರಕ್ಷಣೆ ನೀಡುತ್ತದೆ ಎಂದು ಜಾಗತಿಕ ಮತ್ತು ಭಾರತೀಯ ವೈಜ್ಞಾನಿಕ ಪುರಾವೆಗಳು ದೃಢಪಡಿಸಿವೆ" ಎಂದು ಅಧಿಕೃತ ಮೂಲಗಳು ತಿಳಿಸಿವೆ.

Representational image
ಹೆಚ್‌ಪಿವಿ ಬಗ್ಗೆ ತಿಳಿದಿದ್ದೀರಾ? ಈ ರೋಗ ತಡೆಗೆ ಲಸಿಕೆ ಇದೆ ಎಂದು ಗೊತ್ತಿದೆಯೇ?

"ರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿ ಈ ಲಸಿಕೆ ಸ್ವಯಂಪ್ರೇರಿತ ಮತ್ತು ಉಚಿತವಾಗಿರುತ್ತದೆ" ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com