ಡಿಕೆ ಶಿವಕುಮಾರ್ 
ರಾಜ್ಯ

ದೇಶದಾದ್ಯಂತ ರಸ್ತೆ ಗುಂಡಿ ಸಮಸ್ಯೆ ಇದೆ, ಕರ್ನಾಟಕದಲ್ಲಿ ಮಾತ್ರ ಎಂದು ಬಿಂಬಿಸುವುದು ಸರಿಯಲ್ಲ: ಡಿ.ಕೆ ಶಿವಕುಮಾರ್

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್, ಈ ಸಮಸ್ಯೆಯನ್ನು ಸರಿಪಡಿಸುವ ಕರ್ತವ್ಯ ಮತ್ತು ಜವಾಬ್ದಾರಿ ಸರ್ಕಾರದ್ದಾಗಿದ್ದು, ಅದು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಬೆಂಗಳೂರು: ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ದೇಶದಾದ್ಯಂತ ಗುಂಡಿಗಳ ಸಮಸ್ಯೆ ಇದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಈ ಸಮಸ್ಯೆ ಇದೆ ಎಂದು ಮಾಧ್ಯಮಗಳಲ್ಲಿ ಬಿಂಬಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಗಳವಾರ ಹೇಳಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್, ಈ ಸಮಸ್ಯೆಯನ್ನು ಸರಿಪಡಿಸುವ ಕರ್ತವ್ಯ ಮತ್ತು ಜವಾಬ್ದಾರಿ ಸರ್ಕಾರದ್ದಾಗಿದ್ದು, ಅದು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಅಧಿಕಾರದಲ್ಲಿದ್ದಾಗ ರಸ್ತೆಗಳನ್ನು ನಿರ್ವಹಿಸದ ಮತ್ತು ಈಗ ನಾಗರಿಕ ಸಂಸ್ಥೆಗಳ ಚುನಾವಣೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ ಈ ವಿಷಯವನ್ನು ಎತ್ತುತ್ತಿದೆ ಎಂದು ಟೀಕಿಸಿದರು.

ಆನ್‌ಲೈನ್ ಟ್ರಕ್ಕಿಂಗ್ ಪ್ಲಾಟ್‌ಫಾರ್ಮ್ ಬ್ಲ್ಯಾಕ್‌ಬಕ್ ಕಂಪನಿಯನ್ನು ಬೆಂಗಳೂರಿನ ಹೊರ ವರ್ತುಲ ರಸ್ತೆಯ (ಒಆರ್‌ಆರ್) ಬೆಳ್ಳಂದೂರಿನಲ್ಲಿರುವ ಸದ್ಯದ ಸ್ಥಳದಿಂದ ಸ್ಥಳಾಂತರಿಸಲು ನಿರ್ಧರಿಸಿರುವುದಾಗಿ ಘೋಷಿಸಿದ ನಂತರ, ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಮತ್ತು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ರಾಜ್ಯ ಸರ್ಕಾರವು ತಕ್ಷಣ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆಗಳು ಬಂದಿವೆ.

ಕರ್ನಾಟಕ ಬಿಜೆಪಿ ಸೆಪ್ಟೆಂಬರ್ 24 ರಂದು ರಾಜ್ಯದಾದ್ಯಂತ, ವಿಶೇಷವಾಗಿ ಬೆಂಗಳೂರಿನಲ್ಲಿ ರಸ್ತೆಗಳ ದುಸ್ಥಿತಿಯಿಂದಾಗಿ ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

'ಮಳೆ ಬಂದರೂ ನಾವು ಗುಂಡಿಗಳನ್ನು ಮುಚ್ಚುತ್ತಿದ್ದೇವೆ. ಪ್ರತಿ ಪಾಲಿಕೆಯಲ್ಲಿ (ಬೆಂಗಳೂರಿನಲ್ಲಿ 5 ಪಾಲಿಕೆಗಳು) ಸುಮಾರು ಸಾವಿರ ಗುಂಡಿಗಳನ್ನು ಮುಚ್ಚುವ ಕೆಲಸ ಪ್ರತಿದಿನ ನಡೆಯುತ್ತಿದೆ' ಎಂದು ಶಿವಕುಮಾರ್ ಬಿಹಾರಕ್ಕೆ ತೆರಳುವ ಮೊದಲು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

'ನಾನು ದೆಹಲಿಗೆ ಹೋಗಿ ಅಲ್ಲಿನ ರಸ್ತೆಗಳನ್ನು ನೋಡಿದ್ದೇನೆ. ಅಲ್ಲಿ ಎಷ್ಟು ಗುಂಡಿಗಳಿವೆ ಮತ್ತು ಪ್ರಧಾನಿ ನಿವಾಸಕ್ಕೆ ಹೋಗುವ ರಸ್ತೆಯಲ್ಲಿ ಎಷ್ಟು ಗುಂಡಿಗಳಿವೆ? ಎಂದು ದಯವಿಟ್ಟು (ದೆಹಲಿಯಲ್ಲಿ) ನಿಮ್ಮ ವರದಿಗಾರರನ್ನು ಕೇಳಿ. ದೊಡ್ಡ ಐಟಿ ಕಂಪನಿಗಳು ಮತ್ತು ಇತರರಿಗೆ ನಾನು ಹೇಳಲು ಬಯಸುತ್ತೇನೆ, ಅಂತಹ ವಿಷಯಗಳು (ಗುಂಡಿಗಳ ಸಮಸ್ಯೆ) ಎಲ್ಲೆಡೆ ಇವೆ. ನಾವು ನಮ್ಮ ಕೆಲಸವನ್ನು ಮಾಡುತ್ತಿದ್ದೇವೆ. ಅದು ದೇಶದಾದ್ಯಂತ ಇದೆ. ನಾವು ನಮ್ಮ ಕರ್ತವ್ಯವನ್ನು ಮಾಡುತ್ತಿದ್ದೇವೆ' ಎಂದು ಅವರು ಹೇಳಿದರು.

ಇಂತಹ ವಿಷಯಗಳು ಕರ್ನಾಟಕದಲ್ಲಿ ಮಾತ್ರ ಇವೆ ಎಂದು ಬಿಂಬಿಸುವುದು ಸರಿಯಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರಸ್ತೆಗಳ ನಿರ್ವಹಣೆ ಮಾಡಿದ್ದರೆ, ಈಗ ಅಂತಹ ಪರಿಸ್ಥಿತಿ ಏಕೆ ಉದ್ಭವಿಸುತ್ತಿತ್ತು?. ಅವರು (ಬಿಜೆಪಿ) ಹಾಗೆ ಮಾಡಲಿಲ್ಲ. ಚುನಾವಣೆಗಳು (ಕಾರ್ಪೊರೇಷನ್ ಚುನಾವಣೆಗಳು) ಸಮೀಪಿಸುತ್ತಿವೆ. ಆದ್ದರಿಂದ, ಅವರು ಹಾಗೆ ಮಾತನಾಡುತ್ತಿದ್ದಾರೆ. ಇರಲಿ, ನಾವು ನಮ್ಮ ಕರ್ತವ್ಯವನ್ನು ಮಾಡುತ್ತೇವೆ ಎಂದು ಕೇಳಿದರು.

ಕಾಂಗ್ರೆಸ್ ರಾಜ್ಯಾಧ್ಯಕ್ಷರೂ ಆಗಿರುವ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸೆಪ್ಟೆಂಬರ್ 24 ರಂದು ಪಾಟ್ನಾದಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಲು ಬಿಹಾರಕ್ಕೆ ತೆರಳಲಿದ್ದಾರೆ.

'ನಾಳೆ ಬಿಹಾರದಲ್ಲಿ ನಮ್ಮ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಇದೆ. ಇಂದು ಸಂಜೆ ಮುಖ್ಯಮಂತ್ರಿ ಹೊರಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ವಿಸ್ತೃತ ಕಾರ್ಯಕಾರಿ ಸಮಿತಿ ಸಭೆಯೂ ಇದೆ ಮತ್ತು ನಾವು ಅದರಲ್ಲಿ ಭಾಗವಹಿಸುತ್ತೇವೆ' ಎಂದು ಶಿವಕುಮಾರ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಹಾರ ವಿಧಾನಸಭಾ ಚುನಾವಣೆ 2025: Exit Poll Results ಬಹಿರಂಗ; ಯಾರಿಗೆ ಎಷ್ಟು ಸ್ಥಾನ?- ಇಲ್ಲಿದೆ ಮಾಹಿತಿ

Delhi Blast: ಆಪರೇಷನ್ ಸಿಂದೂರ್ ಗೆ ಸೇಡು... 20 ಟೈಮರ್, 3000 ಕೆಜಿ ಸ್ಫೋಟಕ.. ಉಗ್ರರ ಯೋಜನೆ ಕಾರ್ಯಗತವಾಗಿದ್ದರೇ ಇತಿಹಾಸದ ಅತೀ ದೊಡ್ಡ 'ಭಯೋತ್ಪಾದಕ ದಾಳಿ'!

Delhi Red Fort blast: ಸ್ಪೂಟಕ್ಕೂ ಮುನ್ನ 3 ಗಂಟೆ ಕಾರು ಪಾರ್ಕಿಂಗ್! ನಿರ್ಣಾಯಕ 'ಮೂರು ಆಯಾಮ'ಗಳಲ್ಲಿ ಪೊಲೀಸರ ತನಿಖೆ

Bihar Elections: ಎರಡನೇ ಹಂತದಲ್ಲಿ ದಾಖಲೆಯ ಶೇ. 67.14 ರಷ್ಟು ಮತದಾನ

ಕೆಂಪು ಕೋಟೆ ಬಳಿಯ ಸ್ಫೋಟ: ದಿನಬಳಕೆಯ ವಸ್ತುಗಳು ಭಯೋತ್ಪಾದನೆಯ ಆಯುಧವಾದದ್ದು ಹೇಗೆ? (ಜಾಗತಿಕ ಜಗಲಿ)

SCROLL FOR NEXT