ಕಿರಣ್ ಮಜುಂದಾರ್ ಶಾ 
ರಾಜ್ಯ

ಬೆಂಗಳೂರು ನಗರ ಕೊಳಕಾಗಲು "Greater bengaluru authority" ಅಸಮರ್ಥತೆಯೇ ಕಾರಣ: ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಶಾ

ನಾಗರಿಕ ಕೆಲಸದ ಪ್ರಜ್ಞೆಯ ಕೊರತೆ ಮತ್ತು ನಗರದ ಕಸರಾಶಿಗಳನ್ನು ನಿರ್ವಹಿಸುವಲ್ಲಿ ಪಾಲಿಕೆಯ ಅಸಮರ್ಥತೆಯು ನಮ್ಮ ನಗರವನ್ನು ಕೊಳಕಾಗಿಸಿದೆ.

ಬೆಂಗಳೂರು: ಬೆಂಗಳೂರು ನಗರ ನಿರ್ವಹಣೆ ಕುರಿತು ಪಾಲಿಕೆ ವಿರುದ್ಧ ತಮ್ಮ ವಾಗ್ದಾಳಿಯನ್ನು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ ಅವರು ಮುಂದುವರೆಸಿದ್ದು, ಬೆಂಗಳೂರು ಕೊಳಕಾಗಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಸಮರ್ಥತೆಯೇ ಕಾರಣ ಎಂದು ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ನಾಗರಿಕ ಕೆಲಸದ ಪ್ರಜ್ಞೆಯ ಕೊರತೆ ಮತ್ತು ನಗರದ ಕಸರಾಶಿಗಳನ್ನು ನಿರ್ವಹಿಸುವಲ್ಲಿ ಪಾಲಿಕೆಯ ಅಸಮರ್ಥತೆಯು ನಮ್ಮ ನಗರವನ್ನು ಕೊಳಕಾಗಿಸಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವುದನ್ನು ನಿಲ್ಲಿಸಬೇಕು. ಬ್ಲಾಕ್ ಸ್ಪಾಟ್ ಗಳನ್ನು ಸೃಷ್ಟಿಸದೆ ಸಹಕರಿಸಬೇಕೆಂದು ನಾಗರೀಕರಿಗೆ ಕರೆ ನೀಡಿದ್ದಾರೆ.

ನಗರವನ್ನು ಸ್ವಚ್ಛವಾಗಿಡಲು ಪೌರಕಾರ್ಮಿಕರಿಗೆ ಉತ್ತಮ ಉಪಕರಣಗಳು ಮತ್ತು ತರಬೇತಿಯನ್ನು ನೀಡಬೇಕೆಂದೂ ಒತ್ತಾಯಿಸಿದ್ದಾರೆ. ವಲಯ ಆಯುಕ್ತರು ಘನ ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

CWC ಸಭೆ: ಬಿಹಾರ ವಿಧಾನಸಭಾ ಚುನಾವಣೆ ಮೋದಿ ಸರ್ಕಾರದ 'ಭ್ರಷ್ಟ ಆಡಳಿತ' ಅಂತ್ಯಕ್ಕೆ ನಾಂದಿಯಾಗಲಿದೆ; ಮಲ್ಲಿಕಾರ್ಜುನ ಖರ್ಗೆ

'ತಮ್ಮದೇ ಜನರ ಮೇಲೆ ಬಾಂಬ್ ದಾಳಿ': ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ AIRSTRIKE ಕುರಿತು ಭಾರತ ವ್ಯಂಗ್ಯ

ಸೌದಿ-ಪಾಕಿಸ್ತಾನಗಳ ರಕ್ಷಣಾ ಒಪ್ಪಂದವು ಭಾರತಕ್ಕೆ ತಲೆನೋವಾ? (ತೆರೆದ ಕಿಟಕಿ)

ವಿಶ್ವಸಂಸ್ಥೆ ನಿರ್ಣಯಗಳ ಆಧಾರದ ಮೇಲೆ ಕಾಶ್ಮೀರ ಸಮಸ್ಯೆ ಪರಿಹರಿಸಬೇಕು: ಭಾರತದ ವಿರುದ್ಧ ಮತ್ತೆ ಕ್ಯಾತೆ ತೆಗೆದ ಟರ್ಕಿ ಅಧ್ಯಕ್ಷ..!

ಗಾಝಾ ಯುದ್ಧ ನಿಲ್ಲಿಸಿದ್ರೆ ಮಾತ್ರ ಟ್ರಂಪ್'ಗೆ ನೊಬೆಲ್ ಪ್ರಶಸ್ತಿ; ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್

SCROLL FOR NEXT