ಸಿದ್ದರಾಮಯ್ಯ ಸಚಿವ ಸಂಪುಟ ಸಭೆ 
ರಾಜ್ಯ

ದಸರಾ ಹಬ್ಬಕ್ಕೆ ರಾಜ್ಯ ಸರ್ಕಾರ ಗಿಫ್ಟ್: 39 ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ; ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾಗೂ ಸ್ಥಾನ..!

ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್‌ ಅವರು ಬುಧವಾರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಶಿವಲೀಲಾ ವಿನಯ್‌ ಕುಲಕರ್ಣಿ ಅವರನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಬೆಂಗಳೂರು: ಸಾಕಷ್ಟು ಹಗ್ಗಜಗ್ಗಾಟ ಬಳಿಕ ರಾಜ್ಯ ಸರ್ಕಾರ ಕೊನೆಗೂ ಬಹುನಿರೀಕ್ಷಿತ ನಿಗಮ-ಮಂಡಳಿಗಳ ಮತ್ತು ಪ್ರಾಧಿಕಾರಗಳ ಅಧ್ಯಕ್ಷರ ಪಟ್ಟಿಯನ್ನು ಬುಧನಾರ ಬಿಡುಗಡೆ ಮಾಡಿದ್ದು, ಯೋಗೀಶ್‌ಗೌಡ ಕೊಲೆ ಪ್ರಕರಣದ ಆರೋಪದಡಿ ಜೈಲು ಸೇರಿರುವ ವಿನಯ್ ಕುಲಕರ್ಣಿಯವರ ಪತ್ನಿ ಶಿವಲೀಲಾ ಕುಲಕರ್ಣಿಯವರಿಗೂ ಸ್ಥಾನ ನೀಡಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್‌ ಅವರು ಬುಧವಾರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಶಿವಲೀಲಾ ವಿನಯ್‌ ಕುಲಕರ್ಣಿ ಅವರನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಈ ಮಂಡಳಿಗೆ ಈ ಹಿಂದೆ ವಿನಯ್‌ ಕುಲಕರ್ಣಿ ಅವರೂ ಅಧ್ಯಕ್ಷರಾಗಿದ್ದರು.

ಜೈವಿಕ ವೈವಿಧ್ಯತೆ ಮಂಡಳಿಯ ಅಧ್ಯಕ್ಷರಾಗಿ ವಡ್ನಾಳ್ ಜಗದೀಶ್ ಅವರನ್ನು ನೇಮಕ ಮಾಡಿದ್ದರೆ, ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಜೈನ್ ಅವರನ್ನು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ದೃಢೀಕರಣ ಸಂಸ್ಥೆಗೆ ಅಧ್ಯಕ್ಷರಾಗಿ ನೇಮಿಸಲಾಗಿದೆ.

ಪಿ ರಘು ಅವರನ್ನು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗಕ್ಕೆ ಮತ್ತು ಮಾಜಿ ಶಾಸಕ ಎಸ್‌ಜಿ ನಂಜಯ್ಯನಮಠಅವರನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಿಸಲಾಗಿದೆ.

ಎಂ.ಎಸ್.ಮುತ್ತುರಾಜ್ (ಸವಿತಾ ಸಮಾಜ ಅಭಿವೃದ್ಧಿ ನಿಗಮ), ನಂಜಪ್ಪ (ಮಡಿವಾಳ ಮಾಚಿದೇವ), ವಿಶ್ವಾಸ ದಾಸ್ (ಗಾಣಿಗ), ಮರಿಯೋಜಿ ರಾವ್ (ಮರಾಠ), ಮಹೇಶ್ (ಕಾಡುಗೊಲ್ಲ), ಶ್ರೀನಿವಾಸ ವೇಲು (ಕುಂಬಾರ), ಮತ್ತು ಧರ್ಮಣ್ಣ ಉಪ್ಪಾರ- ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರಾಗಿ ನೇಮಿಸಲಾಗಿದೆ.

ಅಧ್ಯಕ್ಷರ ಪಟ್ಟಿ ಇಂತಿದೆ...

  • ಪಿ.ರಘು - ಸಫಾಯಿ ಕರ್ಮಚಾರಿ ಆಯೋಗ

  • ಅರುಣ್‌ ಪಾಟೀಲ್‌ - ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ

  • ಶಿವಲೀಲಾ ವಿನಯ್‌ ಕುಲಕರ್ಣಿ - ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

  • ವಡ್ನಾಳ್‌ ಜಗದೀಶ್‌ - ಜೀವವೈವಿಧ್ಯ ಮಂಡಳಿ

  • ಮುರಳಿ ಅಶೋಕ್‌ - ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ

  • ಡಾ.ಮೂರ್ತಿ - ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ

  • ಮಲ್ಲಿಕಾರ್ಜುನ್‌ - ಮಾಜಿ ಸೈನಿಕರ ಕಲ್ಯಾಣ ಮಂಡಳಿ

  • ಡಾ.ಬಿ.ಸಿ.ಮುದ್ದುಗಂಗಾಧರ್‌ - ಮಾವು ಅಭಿವೃದ್ಧಿ ನಿಗಮ

  • ಶರ್ಲೆಟ್‌ ಪಿಂಟೋ - ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

  • ಮರಿಯೋಜಿ ರಾವ್‌ - ಮರಾಠ ಅಭಿವೃದ್ಧಿ ನಿಗಮ

  • ಎಂ.ಎ.ಗಫೂರ್‌ - ಕರಾವಳಿ ಅಭಿವೃದ್ಧಿ ಪ್ರಾಧಿಕಾರ

  • ಕೆ. ಹರೀಶ್‌ ಕುಮಾರ್‌ - ಮೆಸ್ಕಾಂ

  • ಎನ್‌. ಸಂಪಂಗಿ - ಕರ್ನಾಟಕ ವೇರ್‌ಹೌಸಿಂಗ್‌ ಕಾರ್ಪೊರೇಷನ್‌

  • ವೈ. ಸಯೀದ್‌ ಅಹ್ಮದ್‌ -ದೇವರಾಜ ಅರಸು ಟ್ರಕ್‌ ಟರ್ಮಿನಲ್‌

  • ಮಹೇಶ್‌ - ಕಾಡುಗೊಲ್ಲಅಭಿವೃದ್ಧಿ ನಿಗಮ

  • ಮಂಜಪ್ಪ - ಬಯಲುಸೀಮೆ ಅಭಿವೃದ್ಧಿ ಮಂಡಳಿ, ಚಿತ್ರದುರ್ಗ

  • ಧರ್ಮಣ್ಣ ಉಪ್ಪಾರ - ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ

  • ಅಗಾ ಸುಲ್ತಾನ್‌ - ಕೇಂದ್ರ ಪರಿಹಾರ ಸಮಿತಿ

  • ಎಸ್‌.ಜಿ. ನಂಜಯ್ಯನಮಠ - ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ

  • ಆಂಜನಪ್ಪ - ಬೀಜ ಅಭಿವೃದ್ಧಿ ನಿಗಮ ನಿಯಮಿತ

  • ನೀಲಕಂಠ ಮುಳ್ಗೆ - ಕಲ್ಯಾಣ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ

  • ಬಾಬು ಹೊನ್ನಾ ನಾಯ್ಕ್‌ - ಕಾಡಾ, ಭೀಮರಾಯನಗುಡಿ, ಕಲಬುರಗಿ

  • ಯುವರಾಜ್‌ ಕದಂ - ಮಲಪ್ರಭಾ ಮತ್ತು ಘಟಪ್ರಭಾ ಯೋಜನೆ ಕಾಡಾ, ಬೆಳಗಾವಿ

  • ಅನಿಲ್‌ ಕುಮಾರ್‌ ಜಾಮಬಾರ್‌ - ತೊಗರಿಬೇಳೆ ಅಭಿವೃದ್ಧಿ ನಿಗಮ, ಕಲಬುರಗಿ

  • ಪ್ರವೀಣ್‌ ಹರ್ವಾಲ್‌ - ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿ (ಜೆಸ್ಕಾಂ)

  • ಮಂಜುನಾಥ ಪೂಜಾರಿ - ನಾರಾಯಣ ಗುರು ಅಭಿವೃದ್ಧಿ ನಿಗಮ

  • ಸೈಯದ್‌ ಮೊಹಮೂದ್‌ ಚಿಸ್ಟಿ - ಬೇಳೆಕಾಳುಗಳ ಅಭಿವೃದ್ಧಿ ಮಂಡಳಿ ನಿಯಮಿತ, ಕಲಬುರಗಿ

  • ಎಂ.ಎಸ್‌. ಮುತ್ತುರಾಜ್‌ - ಸವಿತಾ ಸಮಾಜ ಅಭಿವೃದ್ಧಿ ನಿಗಮ

  • ನಂಜಪ್ಪ - ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ

  • ವಿಶ್ವಾಸ್‌ ದಾಸ್‌ - ಗಾಣಿಗ ಅಭಿವೃದ್ಧಿ ನಿಗಮ

  • ಆರ್‌.ಎಸ್‌. ಸತ್ಯನಾರಾಯಣ - ರಾಜ್ಯ ಮದ್ಯಪಾನ ಸಂಯಮ ಮಂಡಳಿ

  • ಗಂಗಾಧರ್‌ - ರೇಷ್ಮೆ ಮಾರುಕಟ್ಟೆ ಮಂಡಳಿ ಲಿಮಿಟೆಡ್‌

  • ಶಿವಪ್ಪ -ಹಾಸನ ನಗರಾಭಿವೃದ್ಧಿ ಪ್ರಾಧಿಕಾರ

  • ಬಿ.ಎಸ್‌. ಕವಲಗಿ -ನಿಂಬೆ ಅಭಿವೃದ್ಧಿ ಮಂಡಳಿ

  • ಡಾ. ಶ್ರೀನಿವಾಸ ವೇಲು - ಕುಂಬಾರ ಅಭಿವೃದ್ಧಿ ನಿಗಮ

  • ಟಿ.ಎಂ. ಶಹೀದ್‌ ಥೆಕ್ಕಿಲ್‌ - ರಾಜ್ಯ ಕನಿಷ್ಠ ವೇತನ ಮಂಡಳಿ

  • ಚೇತನ್‌ ಕೆ. ಗೌಡ - ಕೈಮಗ್ಗ ಅಭಿವೃದ್ಧಿ (ಪವರ್‌ಲೂಮ್‌) ಮಂಡಳಿ

  • ಶರಣಪ್ಪ ಸಲಾದ್‌ಪುರ್‌ -ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಅಭಿವೃದ್ಧಿ ಮಂಡಳಿ

  • ಲಾವಣ್ಯ ಬಲ್ಲಾಳ್‌ ಜೈನ್‌ -ರಾಜ್ಯ ಬೀಜ ಮತ್ತು ಸಾವಯವ ದೃಢೀಕರಣ ಸಂಸ್ಥೆ

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಚರ್ಚೆ ನಡೆಸಿ ಪಟ್ಟಿ ಅಂತಿಮಗೊಳಿಸಿ ಕೆ.ಸಿ. ವೇಣುಗೋಪಾಲ್‌ ಅವರಿಗೆ ಸಲ್ಲಿಸಿದ್ದರು. ಅವರು ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಟ್ಟಿ ರವಾನಿಸಿದ್ದರು.

ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಪಟ್ಟಿಗೆ ಅನುಮೋದನೆ ನೀಡಿದ ಬಳಿಕ, ಪಟ್ಟಿಯನ್ನು ಕೆ.ಸಿ. ವೇಣುಗೋಪಾಲ್‌ ಅವರು ಮುಖ್ಯಮಂತ್ರಿಗಳಿಗೆ ರವಾನಿಸಿದ್ದಾರೆ.

ಬಿಹಾರ ಪ್ರವಾಸದಿಂದ ಮುಖ್ಯಮಂತ್ರಿ ಹಿಂದಿರುಗಿದ ತಕ್ಷಣ ಅವರ ಸೂಚನೆಯಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ನೇಮಕಾತಿ ಆದೇಶ ಹೊರಡಿಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮತ ಎಣಿಕೆ ನಿಯಮ ಪರಿಷ್ಕರಿಸಿದ ಚುನಾವಣಾ ಆಯೋಗ; ಬಿಹಾರ ಚುನಾವಣೆಯಿಂದಲೇ ಜಾರಿ

ಶೀಘ್ರದಲ್ಲೇ ಕರ್ನಾಟಕ ಪೊಲೀಸ್ ಟೋಪಿಗಳು ಬದಲಾಗುತ್ತೆ: ಡಿಜಿ-ಐಜಿಪಿ ಸಲೀಮ್

Trump-Shehbaz Sharif Meeting: ಪಾಕ್ ಪ್ರಧಾನಿ ಜೊತೆಗೆ ಏನಿದು ಡೊನಾಲ್ಡ್ ಟ್ರಂಪ್ 'ರಹಸ್ಯ ಮಾತುಕತೆ'!

GST reforms: ಗ್ರಾಹಕರಿಗೆ ಜಿಎಸ್‌ಟಿ ಪ್ರಯೋಜನಗಳ ವರ್ಗಾವಣೆ; ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ಹೇಳಿದ್ದೇನು?

ಮೈಸೂರಿನಲ್ಲಿ SL ಭೈರಪ್ಪ ಸ್ಮಾರಕ ನಿರ್ಮಾಣ: ಅಂತಿಮ ದರ್ಶನ ಬಳಿಕ CM ಸಿದ್ದರಾಮಯ್ಯ ಘೋಷಣೆ; Video

SCROLL FOR NEXT