ಮಂತ್ರಾಲಯ ಛತ್ರಕ್ಕೆ ಉಪ ಲೋಕಾಯುಕ್ತ ಭೇಟಿ 
ರಾಜ್ಯ

ಮಂತ್ರಾಲಯದಲ್ಲಿರುವ ಕರ್ನಾಟಕ ಛತ್ರದ ದುಸ್ಥಿತಿ ಕಂಡು ಹೌಹಾರಿದ ಉಪ ಲೋಕಾಯುಕ್ತ: ಸ್ವಯಂಪ್ರೇರಿತ ದೂರು ದಾಖಲು!

ರಾಜ್ಯ ಸರ್ಕಾರಿ ವಸತಿ ನಿಲಯವಾದ ಕರ್ನಾಟಕ ರಾಜ್ಯ ಛತ್ರದಲ್ಲಿನ ಶೋಚನೀಯ ಪರಿಸ್ಥಿತಿ ಕಂಡು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಂಗಳೂರು: ಮಂತ್ರಾಲಯವು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ತುಂಗಭದ್ರಾ ನದಿಯ ದಡದಲ್ಲಿರುವ ಪ್ರಸಿದ್ಧ ಪುಣ್ಯಕ್ಷೇತ್ರವಾಗಿದೆ. ಇದು ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನವಿರುವ ಪವಿತ್ರ ಸ್ಥಳವಾಗಿದ್ದು, ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ.

ಆದರೆ ಮಂತ್ರಾಲಯಕ್ಕೆ ಭೇಟಿ ನೀಡುವ ಭಕ್ತರಿಗಾಗಿ ನಿರ್ಮಿಸಿರುವ ರಾಜ್ಯ ಸರ್ಕಾರಿ ವಸತಿ ನಿಲಯವಾದ ಕರ್ನಾಟಕ ರಾಜ್ಯ ಛತ್ರದಲ್ಲಿನ ಶೋಚನೀಯ ಪರಿಸ್ಥಿತಿ ಕಂಡು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರ ನಿರ್ದೇಶನದ ಮೇರೆಗೆ, ರಾಯಚೂರು ಲೋಕಾಯುಕ್ತ ಪೊಲೀಸರು ರಾಯಚೂರು ವ್ಯಾಪ್ತಿಗೆ ಬರುವ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರಿಗೆ ವರದಿ ಸಲ್ಲಿಸಿದ್ದಾರೆ.

40 ನಾನ್-ಎಸಿ ಮತ್ತು 10 ಎಸಿ ಕೊಠಡಿಗಳು ಸೇರಿ ಒಟ್ಟು 50 ಕೊಠಡಿಗಳನ್ನು ಹೊಂದಿರುವ ಛತ್ರದಲ್ಲಿ ಸ್ವಚ್ಛತೆ, ಬಿಸಿನೀರು ಮತ್ತು ಕುಡಿಯುವ ನೀರಿನಂತಹ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಕಟ್ಟಡದ ಸುತ್ತಲಿನ ಕೊಳಚೆ ನೀರು ದುರ್ವಾಸನೆ ಬೀರುತ್ತಿದ್ದು, ಸೊಳ್ಳೆಗಳ ಸಂತಾನೋತ್ಪತ್ತಿ ಕೇಂದ್ರವಾಗಿದೆ.

ನ್ಯಾಯಮೂರ್ತಿ ಫಣೀಂದ್ರ ಅವರು ಸರ್ಕಾರಿ ವಸತಿ ನಿಲಯದ ಕಳಪೆ ಸ್ಥಿತಿಯನ್ನು ಗಮನಕ್ಕೆ ತಂದ ನಂತರ ಭಕ್ತರು ಲೋಕಾಯುಕ್ತ ಅಧಿಕಾರಿಗಳೊಂದಿಗೆ ತಮ್ಮ ಸಂಕಷ್ಟದ ಕಥೆ ಹಂಚಿಕೊಂಡರು. ಫೆಬ್ರವರಿ 24 ರಂದು ಲೋಕಾಯುಕ್ತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಛತ್ರ ವ್ಯವಸ್ಥಾಪಕ ಆಂಜನೇಯಲು ಗೈರಾಗಿದ್ದರು.

ತಿಂಗಳಿಗೆ ರೂ. 15,000 ನಿರ್ವಹಣಾ ವೆಚ್ಚವು ಛತ್ರದ ನಿರ್ವಹಣೆಗೆ ಸಾಕಾಗುವುದಿಲ್ಲ. ಗೀಸರ್‌ಗಳು ಕಾರ್ಯನಿರ್ವಹಿಸದ ಕಾರಣ ಸೌರ ಫಲಕಗಳ ಅಳವಡಿಕೆಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಲೋಕಾಯುಕ್ತ ಪೊಲೀಸರಿಗೆ ತಿಳಿಸಲಾಯಿತು. ರಾಜ್ಯದ ಮುಜರಾಯಿ ಇಲಾಖೆಯ ನಿಷ್ಕ್ರಿಯತೆಯೇ ಈ ದಯನೀಯ ಸ್ಥಿತಿಗೆ ಕಾರಣ ಎಂದು ಲೋಕಾಯುಕ್ತ ಪೊಲೀಸ್ ವರದಿಯಲ್ಲಿ ತಿಳಿಸಲಾಗಿದೆ.

ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ವ್ಯವಸ್ಥಾಪಕ ಆಂಜನೇಯಲು ಮತ್ತು ಸಹಾಯಕ ನರಸನಗೌಡ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದು ದುರಾಡಳಿತ ಎಂದು ಪರಿಗಣಿಸಿದ ಉಪ ಲೋಕಾಯುಕ್ತರು ತಮ್ಮ ಪೊಲೀಸ್ ವರದಿಯೊಂದಿಗೆ ದೂರಿನ ಪ್ರತಿಯನ್ನು ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಆಯುಕ್ತ ಶರತ್ ಬಿ, ಮತ್ತು ರಾಯಚೂರು ಉಪ ಆಯುಕ್ತರು ಮತ್ತು ಮುಜರಾಯಿ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಳುಹಿಸಲು ಸೂಚಿಸಿದ್ದಾರೆ. ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

ಪ್ರಮುಖ ಪ್ರಶ್ನೆಗಳು

ಏಪ್ರಿಲ್ 28 ರೊಳಗೆ ಕರ್ನಾಟಕ ರಾಜ್ಯ ಛತ್ರದ ವ್ಯವಸ್ಥಾಪಕರು ತಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಉಪಲೋಕಾಯುಕ್ತರು ಕೋರಿದ್ದಾರೆ

  • ನಿರ್ವಹಣಾ ನಿಧಿಯ ಮೊತ್ತ ಎಷ್ಟು?

  • ಅದರಲ್ಲಿ ಎಷ್ಟು ಹಣ ಖರ್ಚು ಮಾಡಲಾಗಿದೆ?

  • ಎಷ್ಟು ಬಾಡಿಗೆ ಸಂಗ್ರಹಿಸಲಾಗಿದೆ?

  • ಕೋಣೆಗಳನ್ನು ಕಾಯ್ದಿರಿಸುವ ವಿಧಾನ ಏನು?

  • ಛತ್ರದಲ್ಲಿ ತಂಗುವ ಭಕ್ತರಿಗೆ ಉಚಿತ ಊಟ ಅಥವಾ ಉಪಹಾರ ನೀಡಲಾಗುತ್ತಿದೆ?

  • ಕಾಣಿಕೆ ರೂಪದಲ್ಲಿ ಭಕ್ತರಿಂದ ಸಂಗ್ರಹಿಸಲಾದ ಮೊತ್ತ, ಯಾವುದಾದರೂ ಇದ್ದರೆ ಎಷ್ಟು?

  • ಭಕ್ತರಿಗೆ ಊಟ/ಉಪಹಾರಕ್ಕಾಗಿ ಸರ್ಕಾರದಿಂದ ಎಷ್ಟು ಅನುದಾನವನ್ನು ಸ್ವೀಕರಿಸಲಾಗಿದೆ ಮತ್ತು ಖರ್ಚು ಮಾಡಲಾಗಿದೆ? ಎಂಬ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಯೋತ್ಪಾದನೆ ಕೊನೆಗೊಳಿಸಿ ನಂತರ ಸಿಂಧೂ ಜಲ ಒಪ್ಪಂದದ ಬಗ್ಗೆ ಮಾತುಕತೆ: ಪಾಕಿಸ್ತಾನಕ್ಕೆ ಭಾರತ ಸ್ಪಷ್ಟ ಸಂದೇಶ

ರಾಮಮಂದಿರಕ್ಕೆ ನಾನು ಕೊಟ್ಟ 1.11 ಲಕ್ಷ ದೇಣಿಗೆ ಹಣ ವಾಪಸ್‌ ಕೊಡಿ, ಇಲ್ಲ ಕೋರ್ಟಿಗೆ ಹೋಗ್ತೀನಿ: ದಿಗ್ವಿಜಯ್ ಸಿಂಗ್

ಭಾರತದಲ್ಲಿ ಇದ್ದಿದ್ದರೆ ಈ ಕೊಳಕು ವ್ಯವಸ್ಥೆಯಲ್ಲಿ ಎಂದಿಗೂ ನಾನು CEO ಆಗುತ್ತಿರಲಿಲ್ಲ: ಇಂದ್ರಾ ನೂಯಿ

ಅಸ್ವಸ್ಥ ಬಾಲಕಿಯನ್ನು ಬೆನ್ನಿಗೆ ಕಟ್ಟಿಕೊಂಡು 6 ಕಿ.ಮೀ ನಡೆದು, ಆಸ್ಪತ್ರೆಗೆ ಸೇರಿಸಿದ ಶಿಕ್ಷಕಿ! Video

ಟೂರಿಸ್ಟ್ ವೀಸಾ ಪುನರಾರಂಭ: ತೀವ್ರ ಬೇಡಿಕೆ, ಬಾಂಗ್ಲಾದೇಶದಲ್ಲಿ ಮತ್ತಷ್ಟು ವೀಸಾ ಸೇವೆ ಹೆಚ್ಚಿಸಲು ಭಾರತ ಮುಂದು!