ರಣದೀಪ್ ಸುರ್ಜೇವಾಲಾ 
ರಾಜ್ಯ

ಅಚ್ಛೇ ದಿನ್ ಭರವಸೆ ನೀಡಿದ್ರು, ಈಗ ದುಬಾರಿ ದರ್ಬಾರ್ ಆಗಿದೆ: ಕೇಂದ್ರ ಸರ್ಕಾರದ ವಿರುದ್ಧ ಸುರ್ಜೇವಾಲಾ ವಾಗ್ದಾಳಿ

ಮೋದಿ ಸರಕಾರವು ಇತ್ತೀಚೆಗೆ ವಾಣಿಜ್ಯ ವಿಮಾನಯಾನ ದರಗಳ ಮೇಲಿನ ಮಿತಿಯನ್ನು ತೆಗೆದುಹಾಕಿದ್ದು, ಇದು ಬೆಲೆ ಏರಿಕೆಯ ಅಲೆ ಎಬ್ಬಿಸಿದೆ. ಮಾರ್ಚ್ ತಿಂಗಳಲ್ಲೇ ವಿಮಾನ ದರಗಳಲ್ಲಿ ಶೇ.10ರಿಂದ 15ರಷ್ಟು ಏರಿಕೆಯಾಗಿದೆ.

ಬೆಂಗಳೂರು: ಕೇಂದ್ರದ ಮೋದಿ ನೇತೃತ್ವದ ಸರಕಾರ ಮತ್ತು ಬಿಜೆಪಿಯು ಕರ್ನಾಟಕ ರಾಜ್ಯದ ಹಾಗೂ ಭಾರತ ದೇಶದ ಜನರು ಹಿಂದೆಂದೂ ಕಾಣದ ರೀತಿಯಲ್ಲಿ ಜೇಬುಗಳ್ಳತನವನ್ನು ಆರಂಭಿಸಿದೆ. ಬಿಜೆಪಿ ಅಚ್ಚೇ ದಿನ್ ಭರವಸೆ ನೀಡಿತು. ಆದರೆ, ಇದೀಗ ನಮಗೆ ನೀಡಿದ್ದು ದುಬಾರಿ ದರ್ಬಾರ್ ಆಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಬುಧವಾರ ಜಂಟಿ ಪತ್ರಿಕಾ ಹೇಳಿಕೆ ನೀಡಿದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಮತ ಕೇಳುವ ಮೊದಲು ಸಾಮಾನ್ಯ ಜನರಿಗೆ ಉತ್ತರ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ ಗಳ ಬೆಲೆಯನ್ನು 200 ರೂ.ಹೆಚ್ಚಿಸಲಾಗಿದೆ, ಇದರಿಂದ ಒಂದು ಸಿಲಿಂಡರ್ ಬೆಲೆ 2 ಸಾವಿರ ರೂ.ದಾಟಿದೆ. ಕೇವಲ 45 ದಿನಗಳಲ್ಲಿ 3 ಬಾರಿ ಏರಿಕೆಯಾಗಿದೆ.

ಮಾರ್ಚ್ ತಿಂಗಳಲ್ಲೇ ಗೃಹಬಳಕೆಯ ಸಿಲಿಂಡರ್ ಬೆಲೆಗಳು ಎರಡು ಬಾರಿ ಏರಿಕೆಯಾಗಿ, ಪ್ರತಿ ಸಿಲಿಂಡರ್‌ಗೆ 913 ರೂ.ತಲುಪಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯು, ಶೀಘ್ರದಲ್ಲೇ ಗೃಹಬಳಕೆಯ ಸಿಲಿಂಡರ್ ಬೆಲೆ ಏರಿಕೆಯಾಗುವುದರ ಮುನ್ಸೂಚನೆಯಾಗಿದೆ. ಇದಲ್ಲದೆ, ಎಲ್‍ಪಿಜಿ ತೀವ್ರ ಅಭಾವದಿಂದಾಗಿ ಜನರು ದುಪ್ಪಟ್ಟು ದರ ನೀಡಿ ಸಿಲಿಂಡರ್ ಖರೀದಿಸುವಂತಾಗಿರುವುದನ್ನು ಮರೆಯಬಾರದು ಎಂದು ಟೀಕಿಸಿದ್ದಾರೆ.

ಇಂದಿನಿಂದ ಟೋಲ್ ತೆರಿಗೆಯನ್ನು ಹೆಚ್ಚಿಸಲಾಗಿದೆ. ಕರ್ನಾಟಕವೊಂದರಲ್ಲೇ 2026-27ರಲ್ಲಿ 5 ಸಾವಿರ ಕೋಟಿ ರೂ.ಟೋಲ್ ಸಂಗ್ರಹವಾಗುವ ನಿರೀಕ್ಷೆಯಿದೆ ಮತ್ತು ದೇಶಾದ್ಯಂತ 80 ಸಾವಿರ ಕೋಟಿ ರೂ. ಲೂಟಿಯಾಗುತ್ತಿದೆ.

ಮೋದಿ ಸರಕಾರವು ಇತ್ತೀಚೆಗೆ ವಾಣಿಜ್ಯ ವಿಮಾನಯಾನ ದರಗಳ ಮೇಲಿನ ಮಿತಿಯನ್ನು ತೆಗೆದುಹಾಕಿದ್ದು, ಇದು ಬೆಲೆ ಏರಿಕೆಯ ಅಲೆ ಎಬ್ಬಿಸಿದೆ. ಮಾರ್ಚ್ ತಿಂಗಳಲ್ಲೇ ವಿಮಾನ ದರಗಳಲ್ಲಿ ಶೇ.10ರಿಂದ 15ರಷ್ಟು ಏರಿಕೆಯಾಗಿದೆ. ದೆಹಲಿ ವಿಮಾನ ಇಂಧನ ದರ ಕಿ.ಲೋ.ಲೀಟರ್‍ 2 ಲಕ್ಷ ರೂ.ದಾಟಿದೆ. ಇದರ ನೇರ ಹೊರೆ ಗ್ರಾಹಕರ ಮೇಲೆ ಬೀಳಲಿದ್ದು, ಟಿಕೆಟ್ ದರ ಶೇ.25ರಷ್ಟು ಹೆಚ್ಚಳವಾಗಲಿದೆ ಎಂದು ಅವರುಗಳು ಎಚ್ಚರಿಸಿದ್ದಾರೆ.

ಹೊಸ ರೈಲ್ವೆ ಟಿಕೆಟ್ ರದ್ದತಿ ನಿಯಮಗಳು, ಎಟಿಎಂ ಹಿಂಪಡೆಯುವಿಕೆ ಶುಲ್ಕಗಳು, ಷೇರು ಮಾರುಕಟ್ಟೆ ವಹಿವಾಟು ತೆರಿಗೆ ಹೆಚ್ಚಳ ಮತ್ತು ಎಸಿಗಳು, ರೆಫ್ರಿಜರೇಟರ್‌ಗಳು, ಖಾದ್ಯ ತೈಲ ಮತ್ತು ಸಿಮೆಂಟ್‌ನಂತಹ ಸರಕುಗಳ ಬೆಲೆ ಏರಿಕೆಯ ಬಗ್ಗೆ ನಾಯಕರು ಕೇಂದ್ರ ಸರ್ಕಾರವನ್ನು ಟೀಕಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್