ನ್ಯಾ. ಸಂತೋಷ್ ಹೆಗ್ಡೆ online desk
ರಾಜ್ಯ

ಕಾರ್ಯಕ್ರಮದ ನಡುವೆ ತೀವ್ರ ಅಸ್ವಸ್ಥ: ಕುಸಿದುಬಿದ್ದ ನ್ಯಾ. ಸಂತೋಷ್ ಹೆಗ್ಡೆ; ಮಣಿಪಾಲ ಆಸ್ಪತ್ರೆಗೆ ದಾಖಲು!

ಅಸ್ವಸ್ಥಗೊಂಡ ಸಂತೋಷ್ ಹೆಗ್ಡೆ ಅವರನ್ನು ಕೂಡಲೇ ಹೈಗ್ರೌಂಡ್ಸ್ ಠಾಣೆಯ ಬಳಿ ಇರುವ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಐಸಿಯು ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು: ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ ನ್ಯಾ. ಸಂತೋಷ್ ಹೆಗ್ಡೆ ಅವರು ವೇದಿಕೆ ಮೇಲಿದ್ದಾಗ ತೀವ್ರ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ.

ಅಸ್ವಸ್ಥಗೊಂಡ ಸಂತೋಷ್ ಹೆಗ್ಡೆ ಅವರನ್ನು ಕೂಡಲೇ ಹೈಗ್ರೌಂಡ್ಸ್ ಠಾಣೆಯ ಬಳಿ ಇರುವ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಐಸಿಯು ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸ್ಕೌಟ್ಸ್& ಗೈಡ್ಸ್ ಆಯುಕ್ತ ಪಿಜಿಆರ್ ಸಿಂಧ್ಯಾ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನ್ಯಾ. ಸಂತೋಷ್ ಹೆಗ್ಡೆ ಭಾಷಣ ಮಾಡುತ್ತಿದ್ದರು. ಭಾಷಣ ಮುಕ್ತಾಯಗೊಳಿಸಿ ಕುಳಿತುಕೊಳ್ಳಬೇಕಾದರೆ ದಿಢೀರ್ ಕುಸಿದು ಬಿದ್ದರು. ತಕ್ಷಣವೇ ವೇದಿಕೆ ಮೇಲಿದ್ದ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಪೀಕರ್ ಯುಟಿ ಖಾದರ್ ಅವರೂ ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಂತೋಷ್ ಹೆಗ್ಡೆ ಅವರು ಅಸ್ವಸ್ಥಗೊಳುತ್ತಿದ್ದಂತೆಯೇ ಖಾದರ್ ಅವರ ಕಾರಿನಲ್ಲಿ ನಿವೃತ್ತ ಲೋಕಾಯುಕ್ತರನ್ನು ಅಸ್ಪತ್ರೆಗೆ ಕರೆದೊಯ್ಯಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದೇ ಮೊದಲು, ಶತ್ರು ರಾಷ್ಟ್ರದ ಪ್ರಾಂತ್ಯದಲ್ಲಿ ಇಬ್ಬರು US ಪೈಲಟ್‌ ರಕ್ಷಣೆ, ಡೊನಾಲ್ಡ್ ಟ್ರಂಪ್!

48 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ನರಕ ಸೃಷ್ಟಿಸುತ್ತೇವೆ: ಅಮೆರಿಕಾ ಬೆದರಿಕೆಗೆ ಕ್ಯಾರೆ ಎನ್ನದ ಇರಾನ್; ಇಸ್ರೇಲ್-ಕುವೈತ್ ಮೇಲೆ ಕ್ಷಿಪಣಿ-ಡ್ರೋನ್ ದಾಳಿ..!

ಹಾವೇರಿ ವಿಶ್ವವಿದ್ಯಾಲಯ: ಗೌರವ ಡಾಕ್ಟರೇಟ್ ಸ್ವೀಕರಿಸಲು ಸಂಸದ ಬಸವರಾಜ ಬೊಮ್ಮಾಯಿ ನಕಾರ!

ಇರಾನ್ ನಲ್ಲಿ ಬೃಹತ್ ಸೇನಾ ಕಾರ್ಯಾಚರಣೆ: ಹಲವು ಮಿಲಿಟರಿ ನಾಯಕರ ಹತ್ಯೆ- ಡೊನಾಲ್ಡ್ ಟ್ರಂಪ್! Video

“ನಮ್ಮನ್ನು ಕೆಣಕದಿರಿ”...: ಕೋಲ್ಕತಾ ಹೆಸರೆತ್ತಿ ಭಾರತಕ್ಕೆ ಪಾಕ್ ಬೆದರಿಕೆ, ಪದೇ ಪದೇ ಯುದ್ಧೋತ್ಸಾಹದ ಮಾತು..!

SCROLL FOR NEXT