

ಇಸ್ಲಾಮಾಬಾದ್: “ನಮ್ಮನ್ನು ಕೆಣಕದಿರಿ”, ನೀವು ಮಾಡುವ ಯಾವುದೇ ರೀತಿಯ ಪ್ರಚೋದನೆ ಕೋಲ್ಕತ್ತಾವನ್ನು ಗುರಿಯಾಗಿಸಬಹುದು ಎಂದು ಭಾರತಕ್ಕೆು ಪಾಕಿಸ್ತಾನ ಬೆದರಿಕೆ ಹಾಕಿದ್ದು, ಪದೇ ಪದೇ ಗೊಡ್ಡು ಬೆದರಿಕೆಗಳನ್ನಾಕಿ, ಯುದ್ಧೋತ್ಸಾಹದ ಮಾತುಗಳನ್ನಾಡುತ್ತಿದೆ.
ಸಿಯಾಲ್ಕೋಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು, ಭಾರತ ಮತ್ತೆ ಯಾವುದೇ ರೀತಿಯ ಸೇನಾ ಕಾರ್ಯಾಚರಣೆ ನಡೆಸಲು ಯತ್ನನಡೆಸಿದ್ದೇ ಆದರೆ, ಪಾಕಿಸ್ತಾನದ ಪ್ರತಿಕ್ರಿಯೆಯು ಕೇವಲ ಗಡಿಭಾಗಕ್ಕೆ ಸೀಮಿತವಾಗದೆ ಕೋಲ್ಕತಾದವರೆಗೆ ತಲುಪಲಿದೆ ಎಂದು ಗೊಡ್ಡು ಬೆದರಿಕೆ ಹಾಕಿದ್ದಾರೆ.
ಮುಂದಿನ ಸಂಘರ್ಷವು ಕೇವಲ 200-250 ಕಿ.ಮೀ ವ್ಯಾಪ್ತಿಗೆ ಸೀಮಿತವಾಗಿರುವುದಿಲ್ಲ, ನಾವು ಭಾರತದ ಭೂಪ್ರದೇಶದ ಆಳಕ್ಕೆ ನುಗ್ಗಿ ದಾಳಿ ಮಾಡುತ್ತೇವೆಂದು ಹೇಳಿದ್ದಾರೆ.
ಸ್ಥಳೀಯ ಕಾರ್ಯಕರ್ತರು ಅಥವಾ ಭಾರತದಲ್ಲಿರುವ ಪಾಕಿಸ್ತಾನಿ ಬಂಧಿತರನ್ನು ಬಳಸಿಕೊಂಡು ಭಾರತ ದಾಳಿಗೆ ಸಂಚು ರೂಪಿಸುತ್ತಿದೆ ಎಂದು ಖ್ವಾಜಾ ಆಸಿಫ್ ಅವರು ಆರೋಪಿಸಿದ್ದಾರೆ. ಈ ಗಂಭೀರ ಆರೋಪಗಳಿಗೆ ಯಾವುದೇ ದೃಢವಾದ ಸಾಕ್ಷ್ಯವನ್ನು ನೀಡಿಲ್ಲ.
2025ಪ ಏಪ್ರಿಲ್‌ನಲ್ಲಿ ನಡೆದ ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು. ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು "ಪಾಕಿಸ್ತಾನವು ಯಾವುದೇ ದುಸ್ಸಾಹಸಕ್ಕೆ ಕೈಹಾಕಿದರೆ ಭಾರತದ ಕ್ರಮವು ನಿರ್ಣಾಯಕವಾಗಿರುತ್ತದೆ ಎಂದು ಎಚ್ಚರಿಸಿದ್ದರು
Advertisement