ಆರೋಪಿ ಸಮೀರ್ ಮುಲ್ಲಾ 
ರಾಜ್ಯ

ಹುಬ್ಬಳ್ಳಿ: ಮತ್ತಿನ ಔಷಧ ನೀಡಿ ಅತ್ಯಾಚಾರ ಮಾಡಿದ Sameer Mulla: ಸಂತ್ರಸ್ತೆ ಹೇಳಿಕೆ; love jihad ಅಲ್ಲ ಎಂದ ಪೊಲೀಸರು! Video

ಹುಬ್ಬಳ್ಳಿಯಲ್ಲಿ ಜಿಮ್ ತರಬೇತುದಾರನ ಮೇಲಿನ ಹಲ್ಲೆ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ದೊರೆತಿದ್ದು, ಈ ಪ್ರಕರಣದ ಸಂತ್ರಸ್ತ ಯುವತಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡುವ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾರೆ.

ಹುಬ್ಬಳ್ಳಿ: ಹುಬ್ಬಳ್ಳಿ ಜಿಮ್ ಟ್ರೈನರ್ ಲವ್ ಜಿಹಾದ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತಿದ್ದು, ಇದು ಲವ್ ಜಿಹಾದ್ ಅಲ್ಲ.. ಕೌಟುಂಬಿಕ ಕಲಹ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಜಿಮ್ ತರಬೇತುದಾರನ ಮೇಲಿನ ಹಲ್ಲೆ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ದೊರೆತಿದ್ದು, ಈ ಪ್ರಕರಣದ ಸಂತ್ರಸ್ತ ಯುವತಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡುವ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾರೆ.

ಅಜ್ಞಾತ ಸ್ಥಳದಿಂದ ಸಂತ್ರಸ್ತ ಯುವತಿ ವಿಡಿಯೋವೊಂದನ್ನ ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ಸಮೀರ್ ಮುಲ್ಲಾ ಮತ್ತಿನ ಔಷಧ ನೀಡಿ ತನ್ನ ಮೇಲೆ ಅತ್ಯಾಚಾರವೆಸಗಿದ ಎಂದು ಆರೋಪಿಸಿದ್ದಾರೆ.

ಜಿಮ್ ಟ್ರೈನರ್ ಸಮೀರ್ ವಿರುದ್ಧ ರೇಪ್‌ ಆರೋಪ ಮಾಡಿರುವ ಸಂತ್ರಸ್ತೆ ಸಮೀರ್‌ ಅತ್ಯಾಚಾರದ ಬಗ್ಗೆ ಎಳೆಎಳೆಯಾಗಿ ಬಿಟ್ಟಿದ್ದಾರೆ.

ಸಮೀರ್ ಅಕ್ಕ ನನ್ನ ಸ್ನೇಹಿತೆ, ಅವರಿಂದಲೇ ಸಮೀರ್ ಪರಿಚಯ

ಸಮೀರ್‌ ಅಕ್ಕ ತೈಸೀಮ್ ಮುಲ್ಲಾ ನನ್ನ ಸ್ನೇಹಿತೆ ಆಕೆಯಿಂದ ಸಮೀರ್ ಪರಿಚಯವಾಗಿತ್ತು. ತೈಸೀಮ್ ಜೊತೆಗೆ ಸ್ನೇಹಿತೆಯಾಗಿ ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ. ಬರ್ತ್ ಡೇ ಪಾರ್ಟಿ, ವೀಕೆಂಡ್ ಪಾರ್ಟಿಗೆ ಹೋಗಿದ್ದೆವು. ಸಮೀರ್‌ ಸಹ ಅಲ್ಲಿಗೆ ಬಂದಿದ್ದ, ಇದಾದ ಮೇಲೆ ಸಮೀರ್ ಆತ್ಮೀಯನಾದ ಎಂದು ಸಂತ್ರಸ್ತೆ ಹೇಳಿದ್ದಾರೆ.

ಮತ್ತಿನ ಔಷಧ ನೀಡಿ ಅತ್ಯಾಚಾರ, ವಿಡಿಯೋ ರೆಕಾರ್ಡ್

ಅಂತೆಯೇ ಒಂದು ದಿನ ಸಮೀರ್ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಆಗ ನನಗೆ ಮತ್ತು ಜ್ಯೂಸ್‌ನಲ್ಲಿ ಬರುವ ಔಷಧ ಬೆರಸಿ ಕೊಟ್ಟು ನನ್ನ ಮೇಲೆ ಅತ್ಯಾಚಾರ ಮಾಡಿ ವಿಡಿಯೋ ಮಾಡಿಕೊಂಡಿದ್ದ ಎಂದು ಸಂತ್ರಸ್ಥೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಮೀರ್‌ ವಿಡಿಯೋ ಮಾಡಿದ್ದು ನನಗೆ ಗೊತ್ತಿರಲಿಲ್ಲ, ವಿಡಿಯೋ ತೋರಿಸಿದ ಮೇಲೆ ನನಗೆ ಗೊತ್ತಾಯಿತು. ಆ ಮೇಲೆ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ ಮೇಲ್ ಮಾಡಿ ನನಗೆ ಮೋಸ ಮಾಡಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾರೆ.

ಮಾತ್ರವಲ್ಲದೇ ಜಿಮ್ ಗೆ ಬರುವ ಯುವತಿಯ ತಲೆ ಕಡೆಸಿ ಆಕೆಯ ಜೊತೆ ಖಾಸಗಿ ಕ್ಷಣಗಳನ್ನು ಕಳೆದು, ಅದನ್ನು ವಿಡಿಯೋ ಮಾಡಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

love jihad ಅಲ್ಲ ಎಂದ ಪೊಲೀಸರು!

ಇನ್ನು ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು ಇದು ಲವ್ ಜಿಹಾದ್ ಪ್ರಕರಣ ಎಂಬ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಈ ಘಟನೆ ಎರಡು ಕುಟುಂಬಗಳ ನಡುವಿನ ವೈಯಕ್ತಿಕ ಕಲಹದಿಂದ ಉಂಟಾಗಿದ್ದು, ಕೆಲವು ಗುಂಪುಗಳು ಆರೋಪಿಸಿದಂತೆ 'ಲವ್ ಜಿಹಾದ್'ಗೆ ಸಂಬಂಧಿಸಿಲ್ಲ ಎಂದು ಹೇಳಿದ್ದಾರೆ.

"ಎರಡೂ ಸ್ಥಳಗಳಲ್ಲಿ ಸ್ವಲ್ಪ ಘರ್ಷಣೆ ಸಂಭವಿಸಿದೆ. ಆ ವ್ಯಕ್ತಿಯನ್ನು ಈಗ ರಕ್ಷಿಸಲಾಗಿದೆ ಮತ್ತು ಸಣ್ಣಪುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ನಮಗೆ, ಇದು ಕ್ರಿಮಿನಲ್ ಪ್ರಕರಣವಾಗಿದೆ ಮತ್ತು ಅದಕ್ಕೆ ಅನುಗುಣವಾಗಿ ನಾವು ತನಿಖೆ ಮಾಡುತ್ತೇವೆ. ಸ್ವೀಕರಿಸಿದ ದೂರುಗಳ ಆಧಾರದ ಮೇಲೆ ಸೂಕ್ತ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಹೇಳಿದರು.

ಇಬ್ಬರೂ ಸಂಬಂಧದಲ್ಲಿದ್ದರು

ಇನ್ನು ಇದೇ ವಿಚಾರವಾಗಿ ಮಾತನಾಡಿದ ಸಮೀರ್ ಸಹೋದರಿ ತೈಸೀಮ್ ಮುಲ್ಲಾ, 'ತನ್ನ ಸಹೋದರನನ್ನು ಒಂದು ಗುಂಪು ಬಲವಂತವಾಗಿ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಮೀರ್ ಮತ್ತು ಹುಡುಗಿ ಕಳೆದ ಮೂರು ವರ್ಷಗಳಿಂದ ಸಂಬಂಧದಲ್ಲಿದ್ದರು. ಘಟನೆಯ ಮೊದಲು ಇಬ್ಬರ ಫೋಟೋಗಳು ಮತ್ತು ವೀಡಿಯೊಗಳನ್ನು ಗುಂಪಿನಲ್ಲಿ ಪ್ರಸಾರ ಮಾಡಲಾಗಿತ್ತು. ಇದು ಖಂಡಿತಾ ಲವ್ ಜಿಹಾದ್ ಅಲ್ಲ. ನಮ್ಮ ಕುಟುಂಬವು ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ ಎಂದು ಹೇಳಿದರು.

ವಶೀಕರಣ ಮಾಡಿದ್ದಾರೆ

ಇತ್ತ ಸಂತ್ರಸ್ತೆ ತಾಯಿ ರಾಜೇಶ್ವರಿ ಅವರು ಮಾತನಾಡಿ, ತನ್ನ ಮಗಳನ್ನು ಸಮೀರ್ ಮತ್ತು ಅವನ ಕುಟುಂಬವು "ವಶೀಕರಣಗೊಳಿಸಿದೆ ಮತ್ತು ಕಿರುಕುಳ ನೀಡಿದೆ" ಎಂದು ಆರೋಪಿಸಿದ್ದಾರೆ.

ಸಮೀರ್ ತನ್ನ ಮಗಳನ್ನು ದಾರಿ ತಪ್ಪಿಸಿದ್ದಾನೆ. ಅವರ ನಡುವೆ ಯಾವುದೇ ಸಂಬಂಧವಿಲ್ಲ. ಕಳೆದ ನಾಲ್ಕೈದು ದಿನಗಳಿಂದ ಸಮೀರ್ ಮತ್ತು ಆತನ ಕುಟುಂಬದವರು ತಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಜಿಮ್ ಟ್ರೈನರ್ ವಿರುದ್ಧ ಘೋಷಣೆ, ಆಕ್ರೋಶ

ಲವ್‌ ಜಿಹಾದ್‌ ಪ್ರಕರಣ ತೀವ್ರಗೊಳ್ಳುತ್ತಿದ್ದಂತೆ 2 ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಒಂದೆಡೆ ಯುವಕನನ್ನ ಕಿಡ್ನ್ಯಾಪ್‌ ಮಾಡಲಾಗಿದೆ ಎಂದು ಯುವಕನ ಕುಟುಂಬಸ್ಥರು ಯುವತಿ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಮತ್ತೊಂದು ಗುಂಪು ಹುಬ್ಬಳ್ಳಿ ನಗರದ ವಿಕಾಸ ನಗರದಲ್ಲಿರೋ ಯುವತಿ ಮನೆ ಬಳಿ ಗಲಾಟೆ ಮಾಡಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಎರಡು ಕಡೆಯವರು ಕಿಮ್ಸ್‌ಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran-Israel war: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಮಧ್ಯೆ ಭಾರತಕ್ಕೆ 'ಕಚ್ಚಾ ತೈಲ, LNG ಸರಬರಾಜು ಹೆಚ್ಚಿಸಲು ಸಿದ್ಧ': ರಷ್ಯಾ

ಕೊಡಗು: ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ಹೋಗಿದ್ದ ಕೇರಳ ಮೂಲದ ಮಹಿಳೆ ನಾಪತ್ತೆ!

ಕೇಂದ್ರವನ್ನ ಓಲೈಸೋದು ಬಿಟ್ಟು ಬಾಯಿ ಮುಚ್ಚಿಕೊಂಡಿರಿ: ಸಚಿವ ಮುನಿಯಪ್ಪ ವಿರುದ್ಧ KPCC ವಕ್ತಾರ ಲಕ್ಷ್ಮಣ್​​ ಗರಂ!

Covid is Back: Cicada ರೂಪಾಂತರಿ ವೈರಾಣುವಿಗೆ ಮಕ್ಕಳು ಸಿಲುಕದಂತೆ ಎಚ್ಚರ ವಹಿಸಿ! ನೀವು ತಿಳಿಯಬೇಕಾದ ಅಂಶಗಳಿವು...

ತಪ್ಪಿನ ಅರಿವಾಗಿದೆ, ಸರಿಪಡಿಸಿಕೊಳ್ಳೋಣ: ಮುಸ್ತಾಫಿಜುರ್ ವಿವಾದದ ನಂತರ ಬಗ್ಗಿದ ಬಾಂಗ್ಲಾದೇಶ, BCCI ಗೆ ಬೇಡಿಕೊಂಡ BCB

SCROLL FOR NEXT