ಹೈಕೋರ್ಟ್  
ರಾಜ್ಯ

'ಬೆಂಗಳೂರು ಟ್ರಾಫಿಕ್ ನಿಮಗೆ ತಾಳ್ಮೆಯ ಪಾಠ ಕಲಿಸುತ್ತದೆ': ರೋಡ್ ರೇಜ್ ಪ್ರಕರಣದಲ್ಲಿ ಟೆಕ್ಕಿಗೆ ಬುದ್ದಿಮಾತು ಹೇಳಿದ ಹೈಕೋರ್ಟ್

ನಿಮಗೆ ಸಹನೆ ಇಲ್ಲದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ. ಬೆಂಗಳೂರು ಟ್ರಾಫಿಕ್ ನಿಮಗೆ ತಾಳ್ಮೆ ಸಹನೆಯನ್ನು ಕಲಿಸುತ್ತದೆ. ಯಾವುದೇ ರೋಡ್ ರೇಜ್ ವರ್ತನೆಯನ್ನು ಕ್ಷಮಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಹೇಳಿದರು.

ಬೆಂಗಳೂರು: ರೋಡ್ ರೇಜ್ ಅಥವಾ ರಸ್ತೆಯ ಮೇಲೆ ವಾಹನ ಸವಾರರ ಉದ್ಧಟತನ, ದರ್ಪದ ವರ್ತನೆಗಳನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮೌಖಿಕವಾಗಿ ಸೂಚಿಸಿದ ನಂತರ, ಸಾಫ್ಟ್‌ವೇರ್ ಇಂಜಿನಿಯಪ್ ಒಬ್ಬರು ತಮ್ಮ ಅರ್ಜಿಯನ್ನು ಹಿಂತೆಗೆದುಕೊಂಡ ಪ್ರಕರಣ ನಡೆದಿದೆ.

ನಿಮಗೆ ಸಹನೆ ಇಲ್ಲದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ. ಬೆಂಗಳೂರು ಟ್ರಾಫಿಕ್ ನಿಮಗೆ ತಾಳ್ಮೆ ಸಹನೆಯನ್ನು ಕಲಿಸುತ್ತದೆ. ಯಾವುದೇ ರೋಡ್ ರೇಜ್ ವರ್ತನೆಯನ್ನು ಕ್ಷಮಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಹೇಳಿದರು.

ಏನಾಗಿತ್ತು?

ಈ ಘಟನೆ ಕಳೆದ ವರ್ಷ ಅಕ್ಟೋಬರ್ 26ರಂದು ಎಂಎಸ್ ರಾಮಯ್ಯ ಆಸ್ಪತ್ರೆ ಸಿಗ್ನಲ್ ಸಮೀಪ ನಡೆದಿದೆ. ಕಾರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಮತ್ತು ಅವರ ಮಗು ರಸ್ತೆಗೆ ಬಿದ್ದಿದ್ದರು. ಈ ಅಪಘಾತ ರೋಡ್ ರೇಜ್ ಕಾರಣದಿಂದ ಸಂಭವಿಸಿದೆ ಎಂದು ದೂರು ನೀಡಲಾಗಿತ್ತು.

ಅತಿವೇಗದ ಚಾಲನೆ, ಜೀವಕ್ಕೆ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟುಮಾಡುವ ಕೃತ್ಯಗಳು, ಗಾಯಗೊಂಡವರಿಗೆ ಸಹಾಯ ಮಾಡದಿರುವುದು ಮತ್ತು ಇಂತಹ ಘಟನೆ ನಡೆದಾಗ ವರದಿ ಮಾಡದಿರುವುದಕ್ಕೆ ಸಂಬಂಧಿಸಿದಂತೆ ಮೋಟಾರು ವಾಹನ ಕಾಯ್ದೆಯಡಿ ದಾಖಲಾದ ಪ್ರಕರಣವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು.

ಈ ಪ್ರಕರಣವನ್ನು ಟ್ರಾಫಿಕ್ ಪೊಲೀಸರಿಂದ ಸದಾಶಿವನಗರ ಪೊಲೀಸರಿಗೆ ವರ್ಗಾಯಿಸಿದ ನಂತರ, ಹತ್ಯೆ ಯತ್ನಕ್ಕೆ ಸಂಬಂಧಿಸಿದಂತೆ BNS ಸೆಕ್ಷನ್ 109(1) ನ್ನು ಕೂಡ ಸೇರಿಸಲಾಯಿತು.

ಅರ್ಜಿದಾರರ ಪರ ವಕೀಲರು, ಅರ್ಜಿದಾರನಿಗೆ ಯಾವುದೇ ಉದ್ದೇಶ ಅಥವಾ ಪ್ರೇರಣೆ ಇಲ್ಲ ಎಂದು ಹಾಗೂ ಯಾವುದೇ ದೃಢವಾದ ಹೇಳಿಕೆಗಳಿಲ್ಲದೆ ಹತ್ಯೆ ಯತ್ನ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ವಾದಿಸಿದರು.

ಹೈಕೋರ್ಟ್ ಹೇಳಿದ್ದೇನು?

ಅರ್ಜಿದಾರರ ಪರ ವಕೀಲರು, ‘ನನ್ನ ಕಕ್ಷಿದಾರರಿಗೆ ಯಾವುದೇ ಕೆಟ್ಟ ಉದ್ದೇಶವಿರಲಿಲ್ಲ, ಸುಖಾಸುಮ್ಮನೆ ಕೊಲೆ ಯತ್ನದ ಕೇಸ್ ಹಾಕಲಾಗಿದೆ’ ಎಂದು ವಾದಿಸಿದರು. ಆದರೆ ಇದನ್ನು ಒಪ್ಪದ ನ್ಯಾಯಮೂರ್ತಿಗಳು, ‘ರಸ್ತೆಯ ಮೇಲೆ ನಡೆಯುವ ಜಗಳ ಅಥವಾ ಆವೇಶವೇ ಇಂತಹ ಗಂಭೀರ ಸೆಕ್ಷನ್‌ಗಳನ್ನು ಹಾಕಲು ಕಾರಣವಾಗಬಹುದು. ಸದ್ಯ ತನಿಖೆ ನಡೆಯುತ್ತಿರುವುದರಿಂದ ನಾವು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ತಿಳಿಸಿದರು.

ಅಲ್ಲದೆ, ಚಾರ್ಜ್ ಶೀಟ್ ಸಲ್ಲಿಸಿದ ನಂತರ ಬೇಕಿದ್ದರೆ ಮತ್ತೆ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಸೂಚಿಸಿದರು. ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಸಾಫ್ಟ್‌ವೇರ್ ಇಂಜಿನಿಯರ್ ತನ್ನ ಅರ್ಜಿಯನ್ನು ಹಿಂಪಡೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರು ಜೊತೆ ತಾಯಿ ಸ್ಥದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ