ಧ್ರುವ ಸರ್ಜಾ 
ರಾಜ್ಯ

LPG Crisis: ಹೃದಯ ಶ್ರೀಮಂತಿಕೆ ಮೆರೆದ ಧ್ರುವ ಸರ್ಜಾ; ಆಟೋ ಚಾಲಕರಿಗೆ 25 ಲಕ್ಷ ರೂ ನೆರವು; ಸರ್ಕಾರಕ್ಕೆ ಆಕ್ಷನ್‌ ಪ್ರಿನ್ಸ್‌ ಹೇಳಿದ್ದೇನು?

ದಿನದ ದುಡಿಮೆ ನಂಬಿ ಜೀವನ ನಡೆಸುವ ಆಟೋ ಚಾಲಕರ ಕಷ್ಟಕ್ಕೆ ಮಿಡಿದ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅವರು ಆಟೋ ಚಾಲಕರ ಸಂಘಕ್ಕೆ 25 ಲಕ್ಷ ನೆರವು ನೀಡುವ ಮೂಲಕ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ.

ಬೆಂಗಳೂರು: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಪರಿಣಾಮ ರಾಜಧಾನಿ ಬೆಂಗಳೂರು ಸೇರಿದಂತೆ ದೇಶಾದ್ಯಂತ ಆಟೋ ಎಲ್ ಪಿಜಿ ಕೊರತೆ ಎದುರಾಗಿದೆ. ಬೆಂಗಳೂರಿನಲ್ಲಿ ಎಲ್‌ಪಿಜಿ ಗ್ಯಾಸ್ ಸಿಗದೆ ಆಟೋ ಚಾಲಕರು ಪರದಾಡುತ್ತಿದ್ದಾರೆ.

ದಿನದ ದುಡಿಮೆ ನಂಬಿ ಜೀವನ ನಡೆಸುವ ಆಟೋ ಚಾಲಕರ ಕಷ್ಟಕ್ಕೆ ಮಿಡಿದ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅವರು ಆಟೋ ಚಾಲಕರ ಸಂಘಕ್ಕೆ 25 ಲಕ್ಷ ನೆರವು ನೀಡುವ ಮೂಲಕ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ.

ನಮ್ಮ ಸಮಾಜದ ಸಾರಿಗೆ ವ್ಯವಸ್ಥೆಯಲ್ಲಿ ಆಟೋ ಚಾಲಕರ ಪಾತ್ರ ಬಹಳ ದೊಡ್ಡದು. ಇವರನ್ನ ದೇಶದ ಬೆನ್ನೆಲುಬು ಎಂದು ಕರೆದ ನಟ ಧ್ರುವ ಸರ್ಜಾ, ಪ್ರಸ್ತುತ ಅವರು ಎದುರಿಸುತ್ತಿರುವ ಎಲ್‌ಪಿಜಿ ಬಿಕ್ಕಟ್ಟಿನ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆದಿದ್ದಾರೆ.

ಆಕ್ಷನ್‌ ಪ್ರಿನ್ಸ್‌ ಹೇಳಿದ್ದೇನು?

ʻಎಲ್ರಿಗೂ ನಮಸ್ಕಾರ ನಾನು ನಿಮ್ಮ ಧ್ರುವ ಸರ್ಜಾ. ಆಟೋ ಚಾಲಕರು ನಮ್ಮ ದೇಶದ ಬೆನ್ನೆಲುಬು. ಅವರು ದಿನವೂ ದುಡಿಯುವುದು ತಮ್ಮ ಕುಟುಂಬಕ್ಕೆ ಅಷ್ಟೇ ಅಲ್ಲ. ಸಾರ್ವಜನಿಕವಾಗಿಯೂ ಸಾಕಷ್ಟು ಒಳ್ಳೆಯ ಕೆಲಸಗಳನ್ನ ಮಾಡಿಕೊಂಡು ಬಂದಿದ್ದಾರೆ. ಆದರೆ, ಇವತ್ತು ಅವರು ತಮ್ಮ ಕುಟುಂಬವನ್ನ ಸಾಕೋದಕ್ಕೂ ಭಾರೀ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಯಾಕೆಂದರೆ, ಎಲ್ಲಿಯೂ ಎಲ್‌ಪಿಜಿ ಗ್ಯಾಸ್‌ ಸಿಕ್ತಿಲ್ಲ. ಎಲ್ಲಾ ಕಡೆ ಆಟೋಗಳು ನಿಂತೋಗಿವೆ. ಗ್ಯಾಸ್‌ ಸಿಕ್ಕಿದ್ರೂ, ಒಂದಕ್ಕೆ ಡಬಲ್‌ ರೇಟ್‌ ಇದೆ. ಇನ್ಯಾವಾಗ ಅವರು ಗ್ಯಾಸ್‌ ಹಾಕಿಸಿ, ಡ್ಯೂಟಿ ಮಾಡಿ, ಹೆಂಡತಿ ಮಕ್ಕಳನ್ನ ಸಾಕ್ತಾರೆ? ನನ್ನ ಮನವಿ – ಕೇಂದ್ರ ಸರ್ಕಾರಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ. ನಾವು ಆ ಪಕ್ಷ, ಈ ಪಕ್ಷ ಅಂತ ಮಾತಾಡೋದು ಬೇಡ. ನೀವೆಲ್ಲ ಹಿರಿಯರಿದ್ದೀರಿ. ತಿಳಿದವರಿದ್ದೀರಿ. ಇದನ್ನ ಆದಷ್ಟು ಬೇಗ, ಬಗೆಹರಿಸಿ ಎಂದುʼ ನಟ ಮನವಿ ಮಾಡಿದ್ದಾರೆ.

ವಿಡಿಯೋ ಮಾಡಿ ಮನವಿ ಮಾಡಿದ ಧ್ರುವ ಸರ್ಜಾ, ಆಟೋ ಚಾಲಕರ ಕಷ್ಟಕ್ಕೆ ಹೆಗಲಾಗಲು 25 ಲಕ್ಷ ರೂಪಾಯಿಗಳ ನೆರವು ನೀಡಿದ್ದಾರೆ. ಈ ಹಣವು ಸಂಕಷ್ಟದಲ್ಲಿರುವ ಚಾಲಕರ ಕುಟುಂಬಗಳಿಗೆ ಹಾಗೂ ಅವರ ಮಕ್ಕಳಿಗೆ ನೆರವಾಗಲಿ ಎಂಬ ಆಶಯ ಅವರದ್ದು. ನಟನ ಈ ಸಾಮಾಜಿಕ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

SIR ಗೆ ಆಕ್ಷೇಪ; ಪಶ್ಚಿಮ ಬಂಗಾಳ ಚುನಾವಣೆ ರದ್ದತಿಗೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್; ವಿರೋಧಿಗಳಿಗೆ ತೀವ್ರ ಹಿನ್ನಡೆ!

ಸರ್ಕಾರಿ ಗೌರವಗಳೊಂದಿಗೆ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ

ಧಾರವಾಡದಲ್ಲಿ ಕಾಂಗ್ರೆಸ್ ಮುಖಂಡನ ಹತ್ಯೆ: 9 ಮಂದಿ ಬಂಧನ; ಕೊಲೆಗೆ ನಿಜವಾದ ಕಾರಣ ಬಿಚ್ಚಿಟ್ಟ ಪೊಲೀಸರು

ಗರ್ಭಕೋಶವನ್ನೇ ಕೈಯಿಂದ ಕಿತ್ತು ಬಿಸಾಕೋಣ ಅನಿಸಿತ್ತು; ವಿಪರೀತ ಮೂಡ್ ಸ್ವಿಂಗ್ಸ್: 'ಆ' ದಿನಗಳ ಭೀಕರತೆ ಬಿಚ್ಚಿಟ್ಟ ನಟಿ ಐಶ್ವರ್ಯಾ!

ಗಲ್ಫ್ ದೇಶಗಳ ಯಾವುದೇ ಬಂದರು ಸುರಕ್ಷಿತವಾಗಿರುವುದಿಲ್ಲ'; ಅಮೆರಿಕದ ಕ್ರಮ 'ಕಡಲ್ಗಳ್ಳತನ'ಕ್ಕೆ ಸಮ: ಇರಾನ್ ಖಡಕ್ ವಾರ್ನಿಂಗ್

SCROLL FOR NEXT