ಸಾಂದರ್ಭಿಕ ಚಿತ್ರ 
ರಾಜ್ಯ

'ನೋಡಿ ಅಂತಿಮಗೊಳಿಸಿದ ಮನೆ ಅರ್ಧಗಂಟೆಯಲ್ಲೇ ಬೇರೊಬ್ಬರ ಪಾಲು': ಬೆಂಗಳೂರು ಬಾಡಿಗೆ ಮನೆ ಹುಡುಕಿ ಹೈರಾಣಾದ ಯುವತಿ!

ಯುವತಿಯೊಬ್ಬಳು ನೋಡಿಕೊಂಡು ಹೋದ ಮನೆ ಅರ್ಧಗಂಟೆಯಲ್ಲೇ ಮತ್ತೊಬ್ಬರ ಪಾಲಾಗಿದೆ. ಇದು ಬೆಂಗಳೂರಿನ ಬಾಡಿಗೆ ಮನೆ ಮಾರುಕಟ್ಟೆಯ ಸ್ಪರ್ಧಾತ್ಮಕತೆಯನ್ನು ತೋರಿಸುತ್ತಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ದೇಶದಲ್ಲೇ ಅತೀ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಅಗ್ರಗಣ್ಯವಾಗಿದ್ದು, ಇಲ್ಲಿ ಬಾಡಿಗೆ ಮೆನ ಹುಡುಕುವುದು ದುಸ್ತರವೇ ಸರಿ..

ಈ ಮಾತಿಗೆ ಇಂಬು ಎಂಬಂತೆ ಮತ್ತೊಂದು ಉದಾಹರಣೆ ದೊರೆತಿದ್ದು, ಯುವತಿಯೊಬ್ಬಳು ಅರ್ಧಗಂಟೆ ಮುಂಚೆ ನೋಡಿಕೊಂಡು ಹೋದ ಮನೆ ಇದೀಗ ಮತ್ತೊಬ್ಬರ ಪಾಲಾಗಿದೆ. ಇದು ಬೆಂಗಳೂರಿನ ಬಾಡಿಗೆ ಮನೆ ಮಾರುಕಟ್ಟೆಯ ಸ್ಪರ್ಧಾತ್ಮಕತೆಯನ್ನು ತೋರಿಸುತ್ತಿದೆ.

Instagram ನಲ್ಲಿ @namma_rants ಎಂಬ ಬಳಕೆದಾರ ಯುವತಿ ತನ್ನ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ತಾವು ಅಂತಿಮಗೊಳಿಸಿದ ಮನೆಯನ್ನು ಕೇವಲ ಅರ್ಧಗಂಟೆಯಲ್ಲೇ ಹೇಗೆ ಕಳೆದುಕೊಳ್ಳಬೇಕಾಯಿತು ಎಂಬುದನ್ನು ವಿವರಿಸಿದ್ದಾರೆ. ಅಂತೆಯೇ ನಗರದ ಸ್ಪರ್ಧಾತ್ಮಕ ಬಾಡಿಗೆ ಮಾರುಕಟ್ಟೆಯ ಸವಾಲುಗಳನ್ನು ಎತ್ತಿ ತೋರಿಸಿದ್ದಾರೆ.

ವೀಡಿಯೊದಲ್ಲಿ, ಆಕೆ ಇತ್ತೀಚೆಗೆ ಬೆಂಗಳೂರಿಗೆ ತೆರಳಿದ್ದೆ. ಮನೆಗಾಗಿ ಸಕ್ರಿಯವಾಗಿ ಹುಡುಕುತ್ತಿದ್ದೆ. ಸಂಭಾವ್ಯ ಮನೆಯನ್ನು ಕಳೆದುಕೊಳ್ಳುವುದು ತನ್ನ ಜೀವನದಿಂದ ಯಾರನ್ನಾದರೂ ಕಳೆದುಕೊಳ್ಳುವುದಕ್ಕಿಂತ ಹೆಚ್ಚು ನೋವಿನಿಂದ ಕೂಡಿರುತ್ತದೆ ಎಂದು ಆಕೆ ಮನೆ ಹುಡುಕುವುದು ಸಾಹಸವೇ ಸರಿ ಎಂದು ಹೇಳಿದ್ದಾರೆ.

ಸುಮಾರು ಒಂದು ತಿಂಗಳಿನಿಂದ ಸಂಪೂರ್ಣವಾಗಿ ಸುಸಜ್ಜಿತವಾದ 1BHK ಗಾಗಿ ಹುಡುಕುತ್ತಿದ್ದೆ. ಬಹಳ ಸಮಯದ ನಂತರ, ನಾನು ಇಷ್ಟಪಡುವ ಮನೆ ಅಲ್ಲದಿದ್ದರೂ ಅದಕ್ಕೆ ಹತ್ತಿರವಾದ ಮನೆಯನ್ನು ಕೊನೆಗೂ ಹುಡುಕಿಕೊಂಡೆ. ಆದರೆ ಅನೇಕ ವಿಷಯಗಳಲ್ಲಿ ನಾನು ರಾಜಿ ಮಾಡಿಕೊಳ್ಳಬೇಕಾಯಿತು. ಈ ಪೈಕಿ ಬಾಡಿಗೆ ಕೂಡ ಒಂದು ಆಗಿತ್ತು ಎಂದು ಹೇಳಿದ್ದಾರೆ.

ಅಡ್ವಾನ್ಸ್ ಮಾಡಲು ಬರುತ್ತೇನೆ ಎಂದರೆ ಮನೆಯೇ ಬೇರೆಯವರ ಪಾಲು

ಇನ್ನು ಆ ಯುವತಿ ಮನೆ ಮಾಲೀಕರ ಬಹುತೇಕ ಎಲ್ಲಾ ಷರತ್ತುಗಳಿಗೆ ಒಪ್ಪಿಕೊಂಡಿರುವುದಾಗಿ ಮತ್ತು ಒಪ್ಪಂದವನ್ನು ಅಂತಿಮಗೊಳಿಸಲು ಕೇವಲ ಒಂದು ಗಂಟೆ ಸಮಯ ಕೇಳಿದ್ದರು. ಸುಮಾರು ಒಂದು ಗಂಟೆಯ ನಂತರ ಅವರು ಠೇವಣಿ ಪಾವತಿಸಲು ಸಿದ್ಧರಿರುವುದಾಗಿ ಹೇಳಲು ಕರೆ ಮಾಡಿದಾಗ, ಮಾಲೀಕರು ಮನೆಯನ್ನು ಬೇರೆಯವರಿಗೆ ಬಾಡಿಗೆಗೆ ನೀಡಲಾಗಿದೆ ಎಂದು ತಿಳಿಸಿದರು.

ಆ ಮನೆಯನ್ನು ತಾನು ಸ್ವಲ್ಪ ಸಮಯದ ಹಿಂದೆಯೇ ನೋಡಿದ್ದರೂ, ಮನೆಯ ಮಾಲೀಕರು ಬೇರೊಬ್ಬರು ಈಗಾಗಲೇ ಠೇವಣಿ ಪಾವತಿಸಿ ಅದನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದರು ಎಂದು ಅವರು ವಿವರಿಸಿದರು.

ಆಘಾತ

ಇನ್ನು ತಾನು ನೋಡಿ ಫೈನಲ್ ಮಾಡಿದ್ದ ಮನೆ ಬೇರೊಬ್ಬರ ಪಾಲಾದ ಕುರಿತು ಯುವತಿ ಆಘಾತ ವ್ಯಕ್ತಪಡಿಸಿದ್ದು, ಈ ಘಟನೆಯು ತನಗೆ ತುಂಬಾ ದುಃಖ ತಂದಿದೆ. ಬೆಳಿಗ್ಗೆಯಿಂದ ತಾನು ಅಸಮಾಧಾನಗೊಂಡಿದ್ದೇನೆ ಮತ್ತು ತನ್ನ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸಲು ಕಷ್ಟಪಡುತ್ತಿದ್ದೇನೆ. ಮರುದಿನ ಮತ್ತೆ ಮನೆ ಹುಡುಕಲು ಪ್ರಾರಂಭಿಸಬೇಕಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಯುವತಿಯ ಈ ಪೋಸ್ಟ್ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ವ್ಯಾಪಕ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

DIG ಸೋಮಶೇಖರ್ ಕಾಮಕಾಂಡ ಬಟಾಬಯಲು: ಅಪರಾಧಿ ಪತ್ನಿಗೆ ವಿಡಿಯೋ ಕಾಲ್; ಬೆತ್ತಲಾಗುವಂತೆ ಒತ್ತಡ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!