ಸಂಗ್ರಹ ಚಿತ್ರ 
ರಾಜ್ಯ

ತ್ಯಾಜ್ಯ ವಿಲೇವಾರಿಯಲ್ಲಿ ತೃಪ್ತಿಕರವಾಗಿ ಕೆಲಸ ಮಾಡದ ಗುತ್ತಿಗೆದಾರರ ವಿರುದ್ಧ ಕ್ರಮ: GBA

ಸಮರ್ಪಕವಾಗಿ ಕೆಲಸ ನಿರ್ವಹಿಸದ ಗುತ್ತಿಗೆದಾರರಿಗೆ ಒಪ್ಪಂದ ರದ್ದುಪಡಿಸುವ ನೋಟಿಸ್ ನೀಡಬೇಕು. ರಸ್ತೆಗಳಲ್ಲಿ ಕಸ ಎಸೆಯುವವರ ಮೇಲೆ ಭಾರೀ ದಂಡ ವಿಧಿಸಬೇಕು.

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಘನ ತ್ಯಾಜ್ಯ ನಿರ್ವಹಣಾ ಸಮಸ್ಯೆಗಳ ಹಿನ್ನೆಲೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆ (BSCC) ಆಯುಕ್ತರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಶುಕ್ರವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್‌. ರಮೇಶ್‌ ಅವರು ಕೆಲಸದಲ್ಲಿ ಹಿಂದುಳಿದಿರುವ ಗುತ್ತಿಗೆದಾರರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಆಯುಕ್ತರು, “ಸಮರ್ಪಕವಾಗಿ ಕೆಲಸ ನಿರ್ವಹಿಸದ ಗುತ್ತಿಗೆದಾರರಿಗೆ ಒಪ್ಪಂದ ರದ್ದುಪಡಿಸುವ ನೋಟಿಸ್ ನೀಡಬೇಕು. ರಸ್ತೆಗಳಲ್ಲಿ ಕಸ ಎಸೆಯುವವರ ಮೇಲೆ ಭಾರೀ ದಂಡ ವಿಧಿಸಬೇಕು,” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇದೇ ವೇಳೆ ನಗರದ ಸ್ವಚ್ಛತೆಯನ್ನು ಖಚಿತಪಡಿಸಿಕೊಳ್ಳಲು, ಬೃಹತ್ ತ್ಯಾಜ್ಯ ಉತ್ಪಾದಕರ ಪಟ್ಟಿ ಸಿದ್ಧಪಡಿಸಲು ಆಯುಕ್ತರು ನಿರ್ದೇಶನ ನೀಡಿದರು.

ಇದೇ ವೇಳೆ, ಪ್ರತಿದಿನ ಆಟೋ ಟಿಪ್ಪರ್‌ಗಳು (ATs) ಮತ್ತು ಕಾಂಪ್ಯಾಕ್ಟರ್ ವಾಹನಗಳ ಕಾರ್ಯಕ್ಷಮತೆಯ ಮೇಲೆ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪೌರಕಾರ್ಮಿಕರ ಕಾರ್ಯವನ್ನು ಮೇಲ್ವಿಚಾರಣೆ ಮಾಡುವ ಮಾರ್ಷಲ್‌ಗಳು, ಲಿಂಕ್ ವರ್ಕರ್‌ಗಳು ಮತ್ತು ಮೇಲ್ವಿಚಾರಕರ ಹಾಜರಾತಿ ಹಾಗೂ ಹೊಣೆಗಾರಿಕೆಯನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವಂತೆಯೂ ಸೂಚಿದರು.

ನಗರದಲ್ಲಿ ನಿಷೇಧಿತ ಸಿಂಗಲ್-ಯೂಸ್ ಪ್ಲಾಸ್ಟಿಕ್ ಬಳಕೆ ಇನ್ನೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ, ಕಸದ ರಾಶಿ ಹಾಗೂ ಲೀಚೇಟ್ ಸಮಸ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ಸಿಂಗಲ್-ಯೂಸ್ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮತ್ತು ಅಂಗಡಿಗಳು, ವಾಣಿಜ್ಯ ಸಂಸ್ಥೆಗಳ ಮೇಲೆ ನಿಯಮಿತ ದಾಳಿ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ ನೌಕಾ ದಿಗ್ಬಂಧನ ಮುಂದುವರೆಸಿದರೆ ಹಾರ್ಮುಜ್ ಜಲಸಂಧಿ ಬಂದ್: ಇರಾನ್ ಎಚ್ಚರಿಕೆ, ಇಂಧನ ಮಾರುಕಟ್ಟೆ ಮತ್ತೆ ಅಸ್ಥಿರ..!

RCB vs DC: ಬೆಂಗಳೂರಿನಲ್ಲಿ ಇಂದು IPL; ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ, ವಾಹನ ನಿಲುಗಡೆ ಮಾಹಿತಿ...

ಹಳೆಯ ಮಹಿಳಾ ಮಸೂದೆ ತನ್ನಿ, ಯಾರು ಮಹಿಳಾ ವಿರೋಧಿ ಎಂಬುದನ್ನು ನೋಡೋಣ- ಪ್ರಿಯಾಂಕಾ ಗಾಂಧಿ

BESCOM ಗ್ರಾಹಕರಿಗೆ ವಿದ್ಯುತ್ ಶಾಕ್: ಆದಾಯ ಕೊರತೆ ತುಂಬಲು ಪ್ರತಿ ಯುನಿಟ್‌ಗೆ 56 ಪೈಸೆ ಹೆಚ್ಚಳ..!

ಲೈಂಗಿಕ ಕಿರುಕುಳ-ಮತಾಂತರ ಆರೋಪ: ಉದ್ಯೋಗಿಗಳಿಂದ ಅಧಿಕೃತ ದೂರು ದಾಖಲಾಗಿಲ್ಲ; TCS ಸ್ಪ‍ಷ್ಟನೆ

SCROLL FOR NEXT