ಹೆಚ್ ಡಿ ಕುಮಾರಸ್ವಾಮಿ  
ರಾಜ್ಯ

'ರೇವಣ್ಣ ಕಾಲಿಗೆ ಚಪ್ಪಲಿನೂ ಹಾಕಲ್ಲ, ಅದೆಷ್ಟು ದೇವಸ್ಥಾನ ಕಟ್ಟಿದ್ದಾನೋ, ಸ್ವಲ್ಪ ಕೋಪ ಜಾಸ್ತಿ ಅವನಿಗೆ': ಹೆಚ್.ಡಿ ಕುಮಾರಸ್ವಾಮಿ

ನಿನ್ನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಉದ್ದನ ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ರೇವಣ್ಣ ಅವರು ದೇವಸ್ಥಾನಕ್ಕೆ ಹೋಗಿ ದೇವರ ಪ್ರಸಾದ ತೆಗೆದುಕೊಳ್ಳುವವರೆಗೆ ಕಾಲಿಗೆ ಚಪ್ಪಲಿನೂ ಹಾಕಲ್ಲ ಎಂದರು.

ಹೊಳೆನರಸೀಪುರ: ನನ್ನ ಅಣ್ಣ ಹೆಚ್ ಡಿ ರೇವಣ್ಣ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ, ಅದೆಷ್ಟು ದೇವಸ್ಥಾನ ಕಟ್ಟಿದ್ದಾರೋ, ಇಡೀ ಹೊಳೆನರಸೀಪುರ ಹಾಸನ ಜಿಲ್ಲೆಯೊಳಗೆ ಸಾಕಷ್ಟು ದೇವಸ್ಥಾನ ಕಟ್ಟಿದ್ದಾರೆ, ದೇವರ ಮೇಲೆ ಅವನಿಗೆ ಅತೀವ ನಂಬಿಕೆ ಎಂದು ಸಹೋದರ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಿನ್ನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಉದ್ದನ ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ರೇವಣ್ಣ ಅವರು ದೇವಸ್ಥಾನಕ್ಕೆ ಹೋಗಿ ದೇವರ ಪ್ರಸಾದ ತೆಗೆದುಕೊಳ್ಳುವವರೆಗೆ ಕಾಲಿಗೆ ಚಪ್ಪಲಿನೂ ಹಾಕಲ್ಲ, ಚಪ್ಪಲಿ ಹಾಕದೆ ಸಾಕಷ್ಟು ಬಾರಿ ವಿಧಾನ ಸೌಧಕ್ಕೂ ಹೋಗಿದ್ದಾರೆ. ಅಷ್ಟು ದೇವರ ಮೇಲೆ ಭಕ್ತಿ ಇಟ್ಟಿದ್ದಾರೆ ಎಂದು ಹೇಳಿದ್ದಾರೆ.

ದೇವರು ಅವರಿಗೆ ಸ್ವಲ್ಪ ಕೋಪ ಕೊಟ್ಟುಬಿಟ್ಟ, ಜನರ ಜೊತೆ ಸ್ವಲ್ಪ ಶಾಂತ ರೀತಿಯಲ್ಲಿ ವರ್ತಿಸುತ್ತಿದ್ದರೆ ಇನ್ನೂ ಎತ್ತರಕ್ಕೆ ಜನರು ತೆಗೆದುಕೊಂಡು ಹೋಗುತ್ತಿದ್ದರು. ಅದೊಂದನ್ನು ಸ್ವಲ್ಪ ಬದಲಾವಣೆ ಮಾಡಿಕೊ ಅಂತೀನಿ, ಅವರು ಮಾಡಿಕೊಳ್ಳಲ್ಲ ಎಂದು ಅಣ್ಣನ ಬಗ್ಗೆ ಗುಣಗಾನ ಮಾಡಿದರು.

ರೇವಣ್ಣ ಹೊರಗೆ ಜನರ ಜೊತೆ ಸ್ವಲ್ಪ ರೇಗೋದು ಸ್ವಲ್ಪ ಬೇಸರವಾಗಬಹುದು, ಆದರೆ ಅವನ ಹೃದಯದಲ್ಲಿ ಶುದ್ಧವಾಗಿದ್ದಾನೆ. ಈ ರಾಜ್ಯ ಮತ್ತು ಹಾಸನ ಜಿಲ್ಲೆಯ ಅಭಿವೃದ್ಧಿಗೆ ದೇವೇಗೌಡರ ಕನಸನ್ನು ನನಸು ಮಾಡುವ ದಿನ ದೂರವಿಲ್ಲ. ಈ ಜಿಲ್ಲೆಯ ಬಗ್ಗೆ ನಮ್ಮ ಬಗ್ಗೆ ವಿಶ್ವಾಸ ಇಡಿ ಎಂದು ಜನತೆಯನ್ನು ಕೇಳಿಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಯುದ್ಧ ಅಂತ್ಯ; ಭಾನುವಾರ ಶಾಂತಿ ಒಪ್ಪಂದಕ್ಕೆ ಸಹಿ, Hormuz ಎಲ್ಲರಿಗೂ ಮುಕ್ತ: ಟ್ರಂಪ್ ಘೋಷಣೆ

1st ODI: Shubman Gill, KL ರಾಹುಲ್ ಸ್ಫೋಟಕ ಬ್ಯಾಟಿಂಗ್; ಆಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 7 ವಿಕೆಟ್ ಭರ್ಜರಿ ಜಯ

1st ODI: 'ಗೌತಮ್ ಗಂಭೀರ್ ಅವರೇ ಹೇಳಿದ್ದು..'; ಭಾರತದ ವಿರುದ್ಧ 2ನೇ ಅತಿ ವೇಗದ ಶತಕ ಹಿಂದಿನ ಗುಟ್ಟು ರಟ್ಟು ಮಾಡಿದ Gurbaz

ಕೊನೆಗೂ 131 ದಿನಗಳ ನಂತರ ಇರಾನ್ ಸರ್ವೋಚ್ಛ ನಾಯಕ ಖಮೇನಿ ಅಂತ್ಯಕ್ರಿಯೆಗೆ ದಿನಾಂಕ ನಿಗದಿ; ಇಲ್ಲಿದೆ ಮಾಹಿತಿ..

1st ODI: ಆಫ್ಘನ್ ವಿರುದ್ಧ ಭರ್ಜರಿ ಬ್ಯಾಟಿಂಗ್; ಕೊಹ್ಲಿ, ಧವನ್ ರೆಕಾರ್ಡ್ ಪತನ; ಈ ದಾಖಲೆ ಮಾಡಿದ ಮೊದಲ ಆಟಗಾರ Shubman Gill

SCROLL FOR NEXT