ಖಾಸಗಿ ವಿಡಿಯೋ ಇಟ್ಟುಕೊಂಡು ಉದ್ಯಮಿಗೆ ಬ್ಲ್ಯಾಕ್ ಮೇಲ್ 
ರಾಜ್ಯ

ಬೆಂಗಳೂರು: ಖಾಸಗಿ ವಿಡಿಯೋ ಇಟ್ಟುಕೊಂಡು ಉದ್ಯಮಿಗೆ ಬ್ಲ್ಯಾಕ್ ಮೇಲ್; ಸೋಷಿಯಲ್ ಮೀಡಿಯಾ ಇನ್‌ಫ್ಲೂಯನ್ಸರ್‌ ಸಾಧನಾ ಶೆಟ್ಟಿ ವಿರುದ್ಧ ಬಿತ್ತು ಕೇಸ್‌!

ಮಂಗಳೂರಿನ ಸಾಧನಾ ಶೆಟ್ಟಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಬೆಂಗಳೂರು: ಉದ್ಯಮಿಯ ಜತೆಗೆ ಸಲುಗೆಯಿಂದ ಇರುವ ವಿಡಿಯೊಗಳನ್ನು ಸೆರೆ ಹಿಡಿದು 1.50 ಕೋಟಿ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡಿದ್ದ ಸೋಷಿಯಲ್ ಮೀಡಿಯಾ ಇನ್ ಫ್ಲೂಯೆನ್ಸರ್ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಯನಗರ 4 ನೇ ಬ್ಲಾಕ್‌ನಲ್ಲಿರುವ ಸೆಲೆಬ್ರೆಟಿ ಮೇಕಪ್‌ ಕ್ಲಿನಿಕ್‌ ಮಾಲೀಕ ಹಾಗೂ ಉದ್ಯಮಿ ಕಾರ್ತಿಕ್‌ ಪುತಾ (32) ನೀಡಿದ ದೂರಿನನ್ವಯ ಸಾಧನಾ ಶೆಟ್ಟಿ ವಿರುದ್ಧ ಸುಲಿಗೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಅನ್ವಯ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಂಗಳೂರಿನ ಸಾಧನಾ ಶೆಟ್ಟಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಜಯನಗರದ ನಾಲ್ಕನೇ ಬ್ಲಾಕ್‌ನಲ್ಲಿ ಮೇಕಪ್‌ ಕ್ಲಿನಿಕ್‌ ಹಾಗೂ ಹಾಸ್ಪಿಟಲ್‌ ನಡೆಸುತ್ತಿರುವ ಕಾರ್ತಿಕ್‌ಗೆ ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿ ಇನ್‌ಫ್ಲೂಯರ್ಸ್ ಆಗಿರುವ ಸಾಧನಾ ಪರಿಚಯವಾಗಿದ್ದರು.

ಯುವತಿ ಹಲವು ಪ್ರಮೊಷನಲ್‌ ವಿಡಿಯೊಗಳನ್ನು ಮಾಡಿದ್ದರಿಂದ ಜಯನಗರದ ಕೆಫೆಯೊಂದಕ್ಕೆ ಮಾತುಕತೆಗೆ ಉದ್ಯಮಿ ಆಹ್ವಾನಿಸಿದ್ದರು. ಇಬ್ಬರೂ ಪರಸ್ಪರ ಪರಿಚಯ ಮಾಡಿಕೊಂಡಿದ್ದರು. ಅದಾದ ಮೇಲೆ ದೂರುದಾರರ ಜತೆಗೆ ಯುವತಿ ತುಂಬಾ ಸಲುಗೆಯಿಂದ ವರ್ತಿಸಿದ್ದರು.

ಜತೆಗಿದ್ದ ಸಮಯದ ಖಾಸಗಿ ಫೋಟೊ, ವಿಡಿಯೋ ಹಾಗೂ ಸಂಭಾಷಣೆ ರೆಕಾರ್ಡಿಂಗ್‌ ಮುಂದಿಟ್ಟು ನನ್ನ ಪತ್ನಿ ಹಾಗೂ ಕುಟುಂಬ ಸದಸ್ಯರಿಗೆ ಕಳುಹಿಸುವುದಾಗಿ ಬೆದರಿಸುತ್ತಿದ್ದರು. ಜತೆಗೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಮಾಡುವುದಾಗಿ ಹೆದರಿಸಿ 1.5 ಕೋಟಿ ರೂ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ' ಎಂದು ಕಾರ್ತಿಕ್‌ ತಮ್ಮ ದೂರಿನಲ್ಲಿಆರೋಪಿಸಿದ್ದಾರೆ.

ಯುವತಿಯು ಬೆದರಿಕೆಯಿಂದ ಆತಂಕಗೊಂಡಿದ್ದ ಉದ್ಯಮಿ, ಗೂಗಲ್‌ ಹಾಗೂ ಫೋನ್‌ ಪೇ ಮೂಲಕ ಹಂತಹಂತವಾಗಿ 5 ಲಕ್ಷ ವರ್ಗಾವಣೆ ಮಾಡಿದ್ದರು. ಅದಾದ ಮೇಲೆ ನಗದು ರೂಪದಲ್ಲಿ 5 ಲಕ್ಷ ನೀಡಿದ್ದರು. 35 ಸಾವಿರ ಮೌಲ್ಯದ ಚಿನ್ನದ ಉಂಗುರ, 70 ಸಾವಿರ ಮೌಲ್ಯದ ಚಿನ್ನದ ಸರ, 1.50 ಲಕ್ಷ ಮೌಲ್ಯದ ಐ–ಫೋನ್‌ ನೀಡಿದ್ದರು. ಅದಾದ ಮೇಲೂ 1.50 ಕೋಟಿ ನೀಡಿದರಷ್ಟೇ ವಿಡಿಯೊಗಳನ್ನು ಡಿಲಿಟ್‌ ಮಾಡುವುದಾಗಿ ಯುವತಿ ಹೇಳಿದ್ದರು.

ಹಣ ನೀಡಲು ಸಾಧ್ಯವಿಲ್ಲ ಎಂದಾಗ, ದೂರುದಾರರ ಪತ್ನಿ ಹಾಗೂ ಕುಟುಂಬಸ್ಥರಿಗೆ ವಿಡಿಯೊ ಕಳುಹಿಸಿದ್ದರು. ವಿಡಿಯೊ ವೀಕ್ಷಿಸಿದ ಬಳಿಕ, ಉದ್ಯಮಿ ಮನೆಯಲ್ಲಿ ಗಲಾಟೆ ಆರಂಭವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಸಾಧನಾ ಶೆಟ್ಟಿ ಕಾರ್ತಿಕ್ ಅವರ ಕ್ಲಿನಿಕ್ ಗೆ ಪದೇ ಪದೇ ಭೇಟಿ ನೀಡುತ್ತಿದ್ದರು, ಹಣ ಪಾವತಿಸುವಂತೆ ಬೆದರಿಕೆ ಹಾಕಿದ್ದರು. ಡೇಟಾವನ್ನು ತನ್ನ ಮೊಬೈಲ್ ಫೋನ್‌ನಲ್ಲಿ ಸಂಗ್ರಹಿಸಲಾಗಿದೆ, ಅದರ ಕಾಪಿಗಳನ್ನು ಪೆನ್ ಡ್ರೈವ್‌ನಲ್ಲಿ ತನ್ನ ತಾಯಿ ಮತ್ತು ಇತರ ಇಬ್ಬರಿಗೆ ನೀಡಲಾಗಿದೆ ಎಂದು ಹೇಳಿದ್ದರು. ಆಕೆಯ ವಿರುದ್ಧ ಸುಲಿಗೆ ಪ್ರಕರಣ (ಬಿಎನ್‌ಎಸ್ 302(2)) ಮತ್ತು 2000ದ ಐಟಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಂಜಾಬ್: ತಪ್ಪಿದ ಭಾರಿ ಅನಾಹುತ; ಉಗ್ರ ದಾಳಿ ಸಂಚು ವಿಫಲ, 690 ಗ್ರಾಂ IED ಪೊಲೀಸ್ ವಶಕ್ಕೆ

SIR ಪ್ರಕ್ರಿಯೆ ಯಶಸ್ಸು: ಬಿಹಾರ ಚುನಾವಣೆ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಮತ್ತು ಜಪಾನ್‌ಗಳನ್ನು ಮೀರಿಸಿದೆ: CEC ಜ್ಞಾನೇಶ್ ಕುಮಾರ್

ಭಾರತದ ಹೊಸ ಶಕ್ತಿ ಪ್ರದರ್ಶನ: ಜೆಟ್ ಚಾಲಿತ ಸ್ವದೇಶಿ 'ದಿವ್ಯಾಸ್ತ್ರ Mk3' ಮೊದಲ ಪರೀಕ್ಷೆ ಯಶಸ್ವಿ! Video

'Sheikh Hasinaರನ್ನು ಹಸ್ತಾಂತರಿಸಿ'; ಪ್ರಧಾನಿ ತಾರಿಕ್ ರಹಮಾನ್ ಭೇಟಿಗೂ ಮುನ್ನ ಭಾರತಕ್ಕೆ ಬಾಂಗ್ಲಾದೇಶ ಷರತ್ತು!

Cricket: ಆಡಿದ್ದು ಆಸ್ಟ್ರೇಲಿಯಾದಲ್ಲಿ.. ಗೆದ್ದಿದ್ದು ಬಾಂಗ್ಲಾದೇಶ: ಪತನವಾಗಿದ್ದು ಮಾತ್ರ ಪಾಕಿಸ್ತಾನದ ದಾಖಲೆ!