ಸಚಿವ ಈಶ್ವರ್ ಖಂಡ್ರೆ 
ರಾಜ್ಯ

ಹಾಸನ ಆನೆ ಕಾರ್ಯಪಡೆಗೆ 10 ಬೈಕ್ ಸೇರಿ 13 ಹೊಸ ವಾಹನಗಳ ಸೇರ್ಪಡೆ! ಇದರ ವಿಶೇಷತೆ ಏನು?

ಬೆಂಗಳೂರು ಮಲ್ಲೇಶ್ವರದ ಅರಣ್ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು, 1 ಸ್ಕಾರ್ಪಿಯೋ, 2 ಕ್ಯಾಂಪರ್ ಹಾಗೂ 10 ದ್ವಿಚಕ್ರವಾಹನಗಳಿಗೆ ಹಸಿರು ನಿಶಾನೆ ತೋರಿ, ತಾವೇ ಬೈಕ್ ಓಡಿಸುವ ಮೂಲಕ ಚಾಲನೆ ನೀಡಿದರು.

ಬೆಂಗಳೂರು: ಆನೆಗಳ ಹಾವಳಿ ಹೆಚ್ಚಿರುವ ಹಾಸನ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಮತ್ತು ಆನೆಗಳನ್ನು ಕಾಡಿಗೆ ಮರಳಿಸಲು ಜಿಲ್ಲಾ ಆನೆ ಕಾರ್ಯಪಡೆಗೆ 13 ಹೊಸ ವಾಹನಗಳು ಸೇರ್ಪಡೆಯಾಗಿದ್ದು, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹಸಿರು ನಿಶಾನೆ ತೋರಿಸಿದರು.

ಬೆಂಗಳೂರು ಮಲ್ಲೇಶ್ವರದ ಅರಣ್ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು, 1 ಸ್ಕಾರ್ಪಿಯೋ, 2 ಕ್ಯಾಂಪರ್ ಹಾಗೂ 10 ದ್ವಿಚಕ್ರವಾಹನಗಳಿಗೆ ಹಸಿರು ನಿಶಾನೆ ತೋರಿ, ತಾವೇ ಬೈಕ್ ಓಡಿಸುವ ಮೂಲಕ ಚಾಲನೆ ನೀಡಿದರು.

ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಇದು ಹೊಸ ಉಪಕ್ರಮವಾಗಿದೆ. ಈ ಎಲ್ಲ ವಾಹನಗಳಿಗೆ ವಾಕಿಟಾಕಿ ಮತ್ತು ಧ್ವನಿವರ್ಧಕ ಅಳವಡಿಸಲಾಗಿದ್ದು ಜಿಲ್ಲಾ ಆನೆ ಕಾರ್ಯಪಡೆ ಸಿಬ್ಬಂದಿ ವಾಹನಗಳಲ್ಲಿ ಗಸ್ತು ಮಾಡುತ್ತಾ, ಆನೆಗಳು ತೋಟ ಅಥವಾ ವಸತಿ ಪ್ರದೇಶಗಳ ಬಳಿ ಬಂದಾಗ ಸ್ಥಳೀಯರಿಗೆ ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ನೀಡುತ್ತಾರೆ ಮತ್ತು ಆನೆಗಳನ್ನು ಕಾಡಿಗೆ ಮರಳಿಸುತ್ತಾರೆ ಎಂದರು.

ಈ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತನ್ನ ಸಿಎಸ್.ಆರ್. ನಿಧಿಯಿಂದ ಅರಣ್ಯ ಇಲಾಖೆಗೆ ನೀಡಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು. ಆನೆ ಕಾರ್ಯಪಡೆ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ–ಇರಾನ್ ನಡುವೆ ಮುಂದುವರೆದ ಶಾಂತಿ ಪ್ರಯತ್ನ: ಪಾಕ್'ನಲ್ಲಿ 2ನೇ ಸುತ್ತಿನ ಸಂಧಾನ ಸಭೆ, ವ್ಯಾನ್ಸ್ ಬದಲು ವಿಟ್ಕಾಫ್, ಕುಶ್ನರ್‌ಗೆ ಜವಾಬ್ದಾರಿ..!

ಪಾಕ್'ನಲ್ಲಿ 2ನೇ ಸುತ್ತಿನ ಸಂಧಾನ ಸಭೆ: ನೇರ ಮಾತುಕತೆಗೆ ಅಮೆರಿಕಾ ಒತ್ತಾಯ, ಇರಾನ್ ನಕಾರ

ಕುದೂರು BDCC ಬ್ಯಾಂಕಿನಲ್ಲಿ ನಕಲಿ ಚಿನ್ನದ ಹಗರಣ: ಮಾಗಡಿಯ ಮಾಜಿ- ಹಾಲಿ ಶಾಸಕರ ಬಹಿರಂಗ ಚರ್ಚೆ! ಚಕ್ರಬಾವಿಯಲ್ಲಿ ನಿಷೇಧಾಜ್ಞೆ ಜಾರಿ!

ಒಳ ಮೀಸಲಾತಿಗೆ ಮೂರು ಸೂತ್ರ: ವಿಶೇಷ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ; ಯಾರಿಗೆ ಎಷ್ಟು?

ಅದಕ್ಕಾಗಿ ನಾನು ತಮನ್ನಾ ಭಾಟಿಯಾ ಕಾಲಿಗೆ ಬೀಳಲು ಸಿದ್ಧ: ಬಾಲಿವುಡ್ ನಟ ಅನ್ನು ಕಪೂರ್

SCROLL FOR NEXT