ಮದುವೆಯಾದ ಯುವತಿಗೆ ಮೋಸ (ಸಾಂದರ್ಭಿಕ ಚಿತ್ರ) 
ರಾಜ್ಯ

Love sex aur dhokha: ಪ್ರೀತಿ ನೆಪದಲ್ಲಿ ದೈಹಿಕ ಸಂಬಂಧ, ಹಲ್ಲೆ.. ಗರ್ಭಿಣಿ ಎಂದು ತಿಳಿಯುತ್ತಲೇ ನಾಪತ್ತೆಯಾದ ಭೂಪ!

18 ವರ್ಷದ ಕಾಲೇಜು ವಿದ್ಯಾರ್ಥಿನಿ ಯುವತಿಗೆ ಆರೋಪಿ ಹರೀಶ್ ಎಂಬಾತ ಮೋಸ ಮಾಡಿದ್ದು, ಈ ಸಂಬಂಧ ಸಂತ್ರಸ್ಥ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಬೆಂಗಳೂರು: ಬೆಂಗಳೂರಿನ 18 ವರ್ಷದ ಯುವತಿಯನ್ನು ಪ್ರೀತಿಸುವುದಾಗಿ ನಂಬಿಸಿ, ಲೈಂಗಿಕ ದೌರ್ಜನ್ಯ ಎಸಗಿ, ನಂತರ ಆಕೆಯ ಗರ್ಭವತಿ ಎಂದು ತಿಳಿದ ಕೂಡಲೇ ದುಷ್ಕರ್ಮಿಯೋರ್ವ ಆಕೆಯನ್ನು ಬಿಟ್ಟು ಪರಾರಿಯಾಗಿರುವ ಘಟನೆ ವರದಿಯಾಗಿದೆ.

18 ವರ್ಷದ ಕಾಲೇಜು ವಿದ್ಯಾರ್ಥಿನಿ ಯುವತಿಗೆ ಆರೋಪಿ ಹರೀಶ್ ಎಂಬಾತ ಮೋಸ ಮಾಡಿದ್ದು, ಈ ಸಂಬಂಧ ಸಂತ್ರಸ್ಥ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಮೂಲಗಳ ಪ್ರಕಾರ ಪ್ರೀತಿ ಪ್ರೀತಿ ಎಂದು ಆಕೆ ಹಿಂದೆ ಬಿದ್ದಿದ್ದ ಹರೀಶ್ ಬಳಿಕೆ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದ. ಬಲವಂತವಾಗಿ ಆಕೆಯನ್ನು ಸುಮಾರು 4 ತಿಂಗಳ ಕಾಲ ಲೈಂಗಿಕವಾಗಿ ಬಳಸಿಕೊಂಡ ಆತ ಆಕೆ ಗರ್ಭಿಣಿ ಎಂಬ ವಿಚಾರ ತಿಳಿದ ಕೂಡಲೇ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾನೆ.

ಕಾಲೇಜು ವಿದ್ಯಾರ್ಥಿನಿಯಾಗಿದ್ದಸಂತ್ರಸ್ಥೆಯನ್ನು ಆಕೆಯ ಕಾಲೇಜಿನಿಂದ ಮನೆಗೆ ಬಿಡುವಾಗ ಹರೀಶ್ ಮತ್ತು ಯುವತಿ ನಡುವೆ ಪರಿಚಯವಾಗಿದೆ. ಬಳಿಕ ಸ್ನೇಹವಾಗಿ ಸ್ನೇಹ ಪ್ರೀತಿಗೆ ತಿರುಗಿದೆ. ಇಬ್ಬರೂ ಕಳೆದ ವರ್ಷ ಮೇ ತಿಂಗಳಲ್ಲಿ ವಿವಾಹವಾಗಿದ್ದರು. ಅಂತೆಯೇ ದಂಪತಿಗಳು ದಾಸರಹಳ್ಳಿ ಮೆಟ್ರೋ ನಿಲ್ದಾಣದ ಬಳಿಯ ಮನೆಯೊಂದನ್ನು ಬಾಡಿಗೆಗೆ ಪಡೆದು ಜೀವನ ನಡೆಸಲು ಆರಂಭಿಸಿದ್ದರು.

ಮದುವೆಯಾದ ಹೊಸತರಲ್ಲಿ ಎಲ್ಲವೂ ಸಾಮಾನ್ಯವಾಗಿಯೇ ಇತ್ತ. ಆದರೆ ದಿನಗಳು ಕಳೆದಂತೆ ಹರೀಶನ ವರ್ತನೆ ಕೂಡ ಬದಲಾಯಿತು. ಮನೆಯಲ್ಲಿ ಹರೀಶ್ ಯುವತಿಗೆ ನಿತ್ಯ ಕಿರುಕುಳ ನೀಡುತ್ತಿದ್ದ. ಅಲ್ಲಿ ಆಕೆ ನಿರಂತರ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು.

ಈ ನಡುವೆ ಯುವತಿ ಗರ್ಭಧರಿಸಿದ್ದು ಆಕೆ ನಾಲ್ಕು ತಿಂಗಳ ಗರ್ಭಿಣಿ ಎಂದು ಹರೀಶ್ ಗೆ ಮಾಹಿತಿ ನೀಡಿದ್ದಾಳೆ. ಇದರಿಂದ ಆತಂಕಕ್ಕೊಳಗಾದ ಹರೀಶ್ ಆಕೆಗೆ ಮಾಹಿತಿ ನೀಡದೇ ಮನೆಯಿಂದ ಪರಾರಿಯಾಗಿದ್ದಾನೆ. ಹರೀಶ್ ಗಾಗಿ ಕಾಯುತ್ತಿದ್ದ ಸಂತ್ರಸ್ಥೆ ಕೊನೆಗೆ ಬೇರೆ ದಾರಿ ಕಾಣದೇ ತನ್ನ ತಾಯಿಯ ಮನೆಗೆ ಮರಳಿದಳು.

ಏಪ್ರಿಲ್ 12 ರಂದು ಆಕೆ ಮಗುವಿಗೆ ಜನ್ಮ ನೀಡಿದ್ದು, ಆದರೆ ಆರೋಗ್ಯ ಸಮಸ್ಯೆಗಳಿಂದಾಗಿ ಹೆರಿಗೆಯಾದ ಸ್ವಲ್ಪ ಸಮಯದ ನಂತರ ಮಗು ಸಾವನ್ನಪ್ಪಿತು. ನಂತರ ಮಹಿಳೆ ಹರೀಶ್ ವಿರುದ್ಧ ವಂಚನೆ, ಹಲ್ಲೆ ಮತ್ತು ಮದುವೆ ವಂಚನೆ ಆರೋಪದ ಮೇಲೆ ದೂರು ದಾಖಲಿಸಿದ್ದಾಳೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ ಆರೋಪಿ ಹರೀಶ್ ನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಪ್ರಕರಣದ ಕುರಿತು ತನಿಖೆ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅರಮನೆಯಂತಾದ 'ಕಾಮನ್​ ಮ್ಯಾನ್'​​ ಕೇಜ್ರಿವಾಲ್​ ನಿವಾಸ: ‘Sheesh Mahal 2’ ಎಂದು BJP ಟೀಕೆ; ಮಾನನಷ್ಟ ಮೊಕದ್ದಮೆ ಎಚ್ಚರಿಕೆ ಕೊಟ್ಟ AAP

ಬೆದರಿಕೆ ರಾಜಕಾರಣದ ವಿರುದ್ಧ ಅಂತಿಮವಾಗಿ ಗೆಲ್ಲುವುದು ನ್ಯಾಯವೇ: ಪವನ್ ಖೇರಾ ಬೆನ್ನಿಗೆ ನಿಂತ ಕಾಂಗ್ರೆಸ್

ವಿರಾಟ್ ಕೊಹ್ಲಿ ಸಿಕ್ಸರ್ ಬಾರಿಸುತ್ತಿದ್ದಂತೆಯೇ ಕುಳಿತ್ತಲೇ ಕುಣಿದು ಕುಪ್ಪಳಿಸಿದ ಅನುಷ್ಕಾ ಶರ್ಮಾ! ನೆಟ್ಟಿಗರು ಏನಾಂತರೇ ಗೊತ್ತಾ? Video

ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಕಾಲೇಜು ಲೈಸೆನ್ಸ್ ರದ್ದು ಮಾಡಿ ದಂಡ ವಿಧಿಸಿ: ಸಿಎಂಗೆ ಬ್ರಾಹ್ಮಣ ಮಹಾಸಭೆ ಪತ್ರ

10 ವರ್ಷಗಳ ಪ್ಲ್ಯಾನ್, 2 ಗಂಟೆಗಳಲ್ಲಿ ಪರಾರಿ: ಕಿಮ್ ಕಪಿಮುಷ್ಠಿಯಿಂದ ತಪ್ಪಿಸಿಕೊಂಡ ಫ್ಯಾಮಿಲಿ, ವಿಶ್ವದ ಗಮನ ಸೆಳೆದ ಗ್ರೇಟ್ ಎಸ್ಕೇಪ್ ಸ್ಟೋರಿ..!

SCROLL FOR NEXT