ನಟಿ ರಾಗಿಣಿ ದ್ವಿವೇದಿ 
ರಾಜ್ಯ

ಮಂಡ್ಯ: ಕಾವೇರಿ ಹೋರಾಟಕ್ಕೆ ಸ್ಪಂದಿಸದೆ ರೈತರ ಕೆಂಗಣ್ಣಿಗೆ ಗುರಿಯಾದ ನಟಿ ರಾಗಿಣಿ ದ್ವಿವೇದಿ!

ಹೋರಾಟಕ್ಕೆ ಬಾರದೆ ನೇರವಾಗಿ ಚಿತ್ರಮಂದಿರದೊಳಗೆ ತೆರಳಿದ್ದಾರೆ. ಇದರಿಂದ ಸಿಡಿದೆದ್ದ ರೈತರು, ರೈತ ಮುಖಂಡರು ನಟಿ ರಾಗಿಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯ : ಕಾವೇರಿ ಜಲ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಹೋರಾಟ ತೀವ್ರಗೊಂಡಿದೆ. ಆಗಸ್ಟ್ 13 ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ಗೆ ಕನ್ನಡ ಚಿತ್ರೋದ್ಯಮವೂ ಬೆಂಬಲ ವ್ಯಕ್ತಪಡಿಸಿದೆ. ಈ ಮಧ್ಯೆ ನಟಿ ರಾಗಿಣಿ ದ್ವಿವೇದಿ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರೈತರ ಹೋರಾಟಕ್ಕೆ ಸ್ಪಂದಿಸದ ರಾಗಿಣಿ, ನೀರಿನ ಬಗ್ಗೆ ನೋ ಕಾಮೆಂಟ್ಸ್ ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ.

ಹೌದು. ತಮ್ಮ ಸಿನಿಮಾ‘ಸರಕಾರಿ ನ್ಯಾಯ ಬೆಲೆ ಅಂಗಡಿ’ ಪ್ರಚಾರಕ್ಕಾಗಿ ಮಂಡ್ಯದ ಸಂಜಯ ಚಿತ್ರಮಂದಿರಕ್ಕೆ ರಾಗಿಣಿ ಅವರು ಕಾರಿನಲ್ಲಿ ಆಗಮಿಸಿದರು. ಆಗ ಕಾರಿನ ಬಳಿ ಹೋದ ರೈತ ಮುಖಂಡರು, ಕಾರಿನಿಂದ ಇಳಿದು ಕಾವೇರಿ ಹೋರಾಟದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದಾರೆ. ಆದರೆ, ಅವರು ಹೋರಾಟಕ್ಕೆ ಬಾರದೆ ನೇರವಾಗಿ ಚಿತ್ರಮಂದಿರದೊಳಗೆ ತೆರಳಿದ್ದಾರೆ. ಇದರಿಂದ ಸಿಡಿದೆದ್ದ ರೈತರು, ರೈತ ಮುಖಂಡರು ನಟಿ ರಾಗಿಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿಗೆ ನೀರು ಬಿಡುತ್ತಿರುವ ವಿಚಾರಕ್ಕೆ ನಾನು ಫರ್ಸನಲ್ ಆಗಿ ಕಾಮೆಂಟ್ ಮಾಡಲು ಇಷ್ಟಪಡೋದಿಲ್ಲ. ಐ ಥಿಂಕ್ ನೀರು ಇರೋದು ಒಂದು ನ್ಯಾಚರಲ್ ರೀಸೋರ್ಚ್ ಅಂಡ್ ಶುಡ್ ಬಿ ಪ್ರತಿಯೊಬ್ಬರ ನೀರಿನ ಮೇಲೆ ಹಕ್ಕಿದೆ. ಕಾವೇರಿ ವಿವಾದದ ಬಗ್ಗೆ ಮಾತನಾಡುವ ನಾಲೆಡ್ಜ್ ನನಗಿಲ್ಲ. ಹೀಗಾಗಿ ಅದರ ಬಗ್ಗೆ ಏನನ್ನೂ ಕಾಮೆಂಟ್ ಮಾಡುವುದಿಲ್ಲ ಎಂದು ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ. ನಟಿಯ ಈ ನಡೆಯ ವಿರುದ್ಧ ರೈತರು ಕಿಡಿಕಾರುತ್ತಿದ್ದಾರೆ.

ಇನ್ನೂ ಸಿನಿಮಾ ಪ್ರಚಾರಕ್ಕಾಗಿ ಆಗಮಿಸಿದ್ದ ಮಾಜಿ ಸಚಿವ ನಟ ಕುಮಾರ್ ಬಂಗಾರಪ್ಪ, ಕಾವೇರಿ ಹೋರಾಟದಲ್ಲಿ ಭಾಗಿಯಾದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಎಸ್‌ ಬಂಗಾರಪ್ಪ ಅವರ ಶಿಷ್ಯವೆನ್ನುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾಜಿ ಸಿಎಂ ಬಂಗಾರಪ್ಪ ಅವರಂತೆ ಸುಗ್ರೀವಾಜ್ಞೆ ತಂದು ತಮಿಳುನಾಡಿಗೆ ನೀರು ಬಿಡದಿರುವ ದಿಟ್ಟತನ ಪ್ರದರ್ಶಿಸಲಿ ಎಂದು ಒತ್ತಾಯಿಸಿದರು.

ಸದ್ಯಕ್ಕೆ ನಮಗೆ ನೀರು ಸಾಕಾಗುತ್ತಿಲ್ಲವೆಂದ ಮೇಲೆ ತಮಿಳುನಾಡಿಗೆ ಹೇಗೆ ನೀರು ಕೊಡುವುದು ಹೇಳಿ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೇವಲ ಬಾಯಿಮಾತಿಗೆ ನಾನು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಶಿಷ್ಯ ಎಂದರೆ ಸಾಕಾಗುವುದಿಲ್ಲ. ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ತೆಗೆದುಕೊಂಡ ನಿರ್ಣಯ ಪ್ರದರ್ಶಿಸಬೇಕು ಎಂದು ಪುನರುಚ್ಚಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ: ವಲಸೆ ಕಾರ್ಮಿಕ ಸಾವು, ಮತ್ತೊಬ್ಬರಿಗೆ ಗಾಯ

ಇರಾನ್ ವಿದೇಶಾಂಗ ಸಚಿವ- ಎಸ್ ಜೈಶಂಕರ್ ಮಾತುಕತೆ: ಪ್ರಾದೇಶಿಕ ಸಮರದ ಬಗ್ಗೆ ಆತಂಕ, ಹಡಗುಗಳ ಮೇಲೆ ದಾಳಿ ನಡೆಸದಂತೆ ಒತ್ತಾಯ

ಆಗಸ್ಟ್ 1 ರಂದು ಪ್ರಧಾನ ಮಂತ್ರಿ ಮೋದಿ ಆಂಧ್ರಪ್ರದೇಶ ಮೈಸೂರಿಗೆ ಭೇಟಿ; ಅಭಿವೃದ್ಧಿ ಯೋಜನೆಗಳ ಉದ್ಘಾಟನೆ

ಕಾವೇರಿ ಕಿತ್ತಾಟದ ನಡುವೆ ರಾಜ್ಯಕ್ಕೆ ಹವಾಮಾನ ಇಲಾಖೆ ಸಿಹಿ ಸುದ್ದಿ; ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಭಾರೀ ಮಳೆ ಸಾಧ್ಯತೆ!

'ಕರ್ನಾಟಕಕ್ಕೆ ನೀರು ನೀಡಲು ನಮ್ಮ ವಿರೋಧವಿಲ್ಲ.. ಆದ್ರೆ ಮೇಕೆದಾಟು ಬೇಡ": ಕಾವೇರಿ ವಿವಾದ ಕುರಿತು AIADMK ಸಂಸದ ಎಂ. ತಂಬಿದುರೈ