ಕೆಇಎ ಸಾಂದರ್ಭಿಕ ಚಿತ್ರ 
ರಾಜ್ಯ

ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆ: ಎಂಜಿನಿಯರಿಂಗ್ ಪದವೀಧರರಿಗೆ ಅವಕಾಶ ನೀಡುವುದು ಸರಿಯಲ್ಲ- ತಜ್ಞರ ಅಭಿಪ್ರಾಯ!

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಳೆದ ವಾರಾಂತ್ಯದಲ್ಲಿ (ಆಗಸ್ಟ್ 8 ಮತ್ತು 9 ರಂದು) ಕೃಷಿ ಅಧಿಕಾರಿ (AO) ಮತ್ತು ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳ ಪರೀಕ್ಷೆ ನಡೆಸಬೇಕಿತ್ತು.

ಬೆಂಗಳೂರು: ಕೃಷಿ ಅಧಿಕಾರಿ (AO) ಮತ್ತು ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಾಗಿ 'ಬ್ಯಾಚುಲರ್ ಆಫ್ ಎಂಜಿನಿಯರಿಂಗ್' (BE) ಮತ್ತು 'ಬ್ಯಾಚುಲರ್ ಆಫ್ ಟೆಕ್ನಾಲಜಿ' (BTech) ಪದವೀಧರರನ್ನು ಸೇರಿಸುವ ವಿಷಯದಲ್ಲಿ ಉಂಟಾದ ವಿವಾದದಿಂದಾಗಿ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಈ ನೀತಿಯು ಅನಗತ್ಯ ಮಾತ್ರವಲ್ಲದೆ ಅರ್ಹತಾ ಪ್ರಕ್ರಿಯೆಯ ಪಾವಿತ್ರ್ಯತೆ ಹಾಗೂ ಒಟ್ಟಾರೆ ವಿದ್ಯಾರ್ಥಿ ಸಮುದಾಯಕ್ಕೆ ಹಾನಿಕಾರಕವಾಗಿದೆ ಎಂದು ನಗರದ ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಳೆದ ವಾರಾಂತ್ಯದಲ್ಲಿ (ಆಗಸ್ಟ್ 8 ಮತ್ತು 9 ರಂದು) ಕೃಷಿ ಅಧಿಕಾರಿ (AO) ಮತ್ತು ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳ ಪರೀಕ್ಷೆ ನಡೆಸಬೇಕಿತ್ತು.

ಇದಕ್ಕೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಜಿಕೆವಿಕೆಯ (GKVK) ವಿದ್ಯಾರ್ಥಿಗಳಿಂದ ವ್ಯಾಪಕ ಪ್ರತಿಭಟನೆ ನಡೆದಿತ್ತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡಾ ವಿದ್ಯಾರ್ಥಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಪರಿಣಾಮವಾಗಿ ಆಗಸ್ಟ್ 6 ರಂದು, ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿತ್ತು. ಇಲ್ಲಿಯವರೆಗೆ ಹೊಸ ದಿನಾಂಕಗಳ ಬಗ್ಗೆ ಅಥವಾ ಪರಿಷ್ಕೃತ ಪರೀಕ್ಷೆಗಳಲ್ಲಿ BE ಮತ್ತು BTech ವಿದ್ಯಾರ್ಥಿಗಳು ಬರೆಯಲು ಅವಕಾಶ ನೀಡಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು KEA ಅಥವಾ ಉನ್ನತ ಶಿಕ್ಷಣ ಇಲಾಖೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಇದು ಸಂಪೂರ್ಣವಾಗಿ ಹೊಂದಾಣಿಕೆಯಾಗದ ವಿಷಯವಾಗಿದೆ. ಇದು ಅರ್ಹ ಯುವಜನರಲ್ಲಿರುವ ನಿರುದ್ಯೋಗದ ಗಂಭೀರತೆ ಮತ್ತು ಹತಾಶೆಯನ್ನು ಎತ್ತಿ ತೋರಿಸುತ್ತದೆ. ಕೃಷಿ ವಿಷಯದಲ್ಲಿ ಸೂಕ್ತ ಪದವಿ ಹೊಂದಿರದ ಹೊರತು, ಅಭ್ಯರ್ಥಿಗಳು ಈ ವಲಯದಲ್ಲಿ ತಮ್ಮ ಕೆಲಸಕ್ಕೆ ನ್ಯಾಯ ಒದಗಿಸಲು ಸಾಧ್ಯವಿಲ್ಲ," ಎಂದು 'ಪೀಪಲ್ಸ್ ಅಲೈಯನ್ಸ್ ಫಾರ್ ಫಂಡಮೆಂಟಲ್ ರೈಟ್ ಟು ಎಜುಕೇಶನ್' (PAFRE) ನ ಮುಖ್ಯ ಸಂಚಾಲಕ ಪ್ರೊ. ನಿರಂಜನಾರಾಧ್ಯ ವಿ.ಪಿ. ಹೇಳಿದರು.

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಹಾಗೂ ಶಿಕ್ಷಣ ತಜ್ಞೆ ಪ್ರೊ. ಸಬಿಹಾ ಭೂಮಿಗೌಡ, ಎಂಜಿನಿಯರಿಂಗ್ ಹಿನ್ನೆಲೆಯ ಪದವೀಧರರು ಕೃಷಿ ಉಪಕರಣಗಳನ್ನು ಸುಧಾರಿಸಲು ಸಹಾಯ ಮಾಡಬಹುದು, ಆದರೆ ಎಒ (AO) ಅಥವಾ ಎಎಒ (AAO) ಹುದ್ದೆಗೆ ಅವರು ಸೂಕ್ತರಲ್ಲ. ಕೃಷಿಯ ಸಾಂಪ್ರದಾಯಿಕ ವಿಧಾನಗಳು ಸೇರಿದಂತೆ (ಇದನ್ನು ಕೃಷಿ ಪದವೀಧರರು ವಿಶೇಷ ವಿಷಯವಾಗಿ ಅಧ್ಯಯನ ಮಾಡಿರುತ್ತಾರೆ) ಕೃಷಿಯ ಮೂಲಭೂತ ಜ್ಞಾನವಿಲ್ಲದೆ, ಯಾರೂ ಈ ಕೆಲಸಕ್ಕೆ ಅರ್ಥಪೂರ್ಣ ಕೊಡುಗೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ಎಂಜಿನಿಯರಿಂಗ್ ಪದವೀಧರರಿಗೆ ಅವಕಾಶ ನೀಡುವುದು ವಿಶೇಷ ಪರಿಣತಿಯ ಅಗತ್ಯವನ್ನು ದುರ್ಬಲಗೊಳಿಸುವುದಲ್ಲದೆ, ರಾಷ್ಟ್ರಮಟ್ಟದಲ್ಲಿ ಉದ್ಯೋಗದ ಕೊರತೆಯಿರುವಾಗ ಅನಗತ್ಯ ಸ್ಪರ್ಧೆಯನ್ನು ಸೃಷ್ಟಿಸುತ್ತದೆ ಎಂಬ ಅಭಿಪ್ರಾಯವನ್ನು ಈ ಇಬ್ಬರೂ ತಜ್ಞರು ವ್ಯಕ್ತಪಡಿಸಿದ್ದಾರೆ.

ಕೆಇಎ (KEA) ತೆಗೆದುಕೊಂಡಿರುವ ಈ ನಿರ್ಧಾರವು ಕೃಷಿ ಪದವೀಧರರಿಗೆ ಹಾನಿಯನ್ನುಂಟು ಮಾಡುತ್ತದೆ. ಅವರ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳುತ್ತದೆ. ಹೀಗಾದರೆ ವಿವಿಧ ವಿಷಯಗಳನ್ನು ಅಧ್ಯಯನ ಮಾಡುವುದರಲ್ಲಿ ಅರ್ಥವೇನು?" ಎಂದು ಪ್ರೊ. ಭೂಮಿಗೌಡ ಪ್ರಶ್ನಿಸಿದ್ದಾರೆ.

ಪ್ರೊ. ನಿರಂಜನಾರಾಧ್ಯ ಅವರ ಪ್ರಕಾರ, ಬಿಇ (BE) ಮತ್ತು ಬಿಟೆಕ್ (BTech) ವಿದ್ಯಾರ್ಥಿಗಳನ್ನು ಸೇರಿಸುವ ನಿರ್ಧಾರವು ಬಂಡವಾಳಶಾಹಿ ವ್ಯವಸ್ಥೆಯಲ್ಲಿನ ಸಾಮಾನ್ಯ ವಿದ್ಯಮಾನವಾಗಿದೆ. ಅಗ್ಗದ ದರದಲ್ಲಿ ಶ್ರಮಿಕರನ್ನು ಪಡೆಯಲು ಅನಾರೋಗ್ಯಕರ ಸ್ಪರ್ಧೆಯನ್ನು ಸೃಷ್ಟಿಸುವ ಸಲುವಾಗಿ ನಿರುದ್ಯೋಗಿ ಯುವಕರ ಪಡೆಯನ್ನು ಕಾಯ್ದುಕೊಳ್ಳುವುದು ಬಂಡವಾಳಶಾಹಿಯ ಪ್ರಮುಖ ಲಕ್ಷಣವಾಗಿದೆ. ಸಹಜವಾಗಿಯೇ, ಉದ್ಯೋಗದ ಕೊರತೆಯಿರುವುದರಿಂದ ಇಲ್ಲಿ ಸ್ಪರ್ಧೆ ಏರ್ಪಡುತ್ತದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

ಶಾಲೆಗಳಿಗೆ ಯೂಟ್ಯೂಬರ್‌ಗಳು, ಸೋಷಿಯಲ್ ಮೀಡಿಯಾ ಮಂದಿಗೆ ನೋ ಎಂಟ್ರಿ: ಉತ್ತರ ಪ್ರದೇಶ ಸರ್ಕಾರದ ಖಡಕ್ ಆದೇಶ

'ಬಿಜೆಪಿಗೆ ಖುಷಿ ಕೊಡುವ ಹೇಳಿಕೆ ನೀಡಬೇಡಿ': Rahul Gandhi ಕುರಿತ ಕಾಂಗ್ರೆಸ್ ಸಂಸದ ಶಶಿತರೂರ್ ಹೇಳಿಕೆಗೆ KC ವೇಣುಗೋಪಾಲ್ ಖಡಕ್ ವಾರ್ನಿಂಗ್

'Toxic': ಸಿನಿಮಾ ಮಾಡುವುದು ಸುಲಭವಲ್ಲ, ಇಡೀ ಪ್ರಪಂಚದ ವಿರುದ್ಧ ಯುದ್ಧಕ್ಕೆ ಹೋದಂತೆ': ವದಂತಿಗಳ ನಡುವೆ ಆ ವ್ಯಕ್ತಿ ಬಂಡೆಯಂತೆ ನಿಂತರು- ಯಶ್!