ಎಂ.ಬಿ ಪಾಟೀಲ್ 
ರಾಜ್ಯ

ಬಿಡದಿ ಯೋಜನೆ ಜೆಡಿಎಸ್‌ನ ಕನಸಿನ ಕೂಸು: ಸಚಿವ ಎಂ.ಬಿ ಪಾಟೀಲ್‌

ಬಿಡದಿ ಟೌನ್‌ಶಿಪ್‌ ಯೋಜನೆ ಕಾರ್ಯಸಾಧ್ಯವಲ್ಲ ಅಥವಾ ಇದರಿಂದ ರೈತರಿಗೆ ತೊಂದರೆಯಾಗುತ್ತದೆ ಎಂದಾದರೆ, 2006ರ ನಂತರ ಹಲವು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಬಿಜೆಪಿ ಹಾಗೂ ಜೆಡಿಎಸ್‌ ಸರ್ಕಾರಗಳು ಅದನ್ನು ಏಕೆ ಕೈಬಿಡಲಿಲ್ಲ?

ವಿಜಯಪುರ: ಬಿಡದಿ ಟೌನ್‌ಶಿಪ್‌ ಯೋಜನೆ ಜೆಡಿಎಸ್‌ ಹಾಗೂ ಅದರ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಕನಸಿನ ಕೂಸು ಎಂದು ಸಚಿವ ಎಂ.ಬಿ. ಪಾಟೀಲ್‌ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್‌ ಯೋಜನೆ ಜೆಡಿಎಸ್‌ ಹಾಗೂ ಅದರ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಕನಸಿನ ಕೂಸು. ಆದರೆ, ಇದೀಗ ಈ ಯೋಜನೆಯನ್ನು ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸುತ್ತಿರುವುದರಿಂದ ಜೆಡಿಎಸ್‌ ವಿರೋಧಿಸುತ್ತಿದೆ ಎಂದು ಆರೋಪಿಸಿದರು.

ಬಿಡದಿ ಟೌನ್‌ಶಿಪ್‌ ಯೋಜನೆ ಕಾರ್ಯಸಾಧ್ಯವಲ್ಲ ಅಥವಾ ಇದರಿಂದ ರೈತರಿಗೆ ತೊಂದರೆಯಾಗುತ್ತದೆ ಎಂದಾದರೆ, 2006ರ ನಂತರ ಹಲವು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಬಿಜೆಪಿ ಹಾಗೂ ಜೆಡಿಎಸ್‌ ಸರ್ಕಾರಗಳು ಅದನ್ನು ಏಕೆ ಕೈಬಿಡಲಿಲ್ಲ?

2006ರ ನಂತರ ರಾಜ್ಯದಲ್ಲಿ ಹಲವು ಬಿಜೆಪಿ ಮುಖ್ಯಮಂತ್ರಿಗಳು ಅಧಿಕಾರದಲ್ಲಿದ್ದರು. ಎಚ್‌.ಡಿ. ಕುಮಾರಸ್ವಾಮಿ ಅವರೂ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಯೋಜನೆ ರೈತರಿಗೆ ಒಳ್ಳೆಯದಲ್ಲ ಎಂದಾದರೆ ಅದನ್ನು ಆಗಲೇ ಹಿಂಪಡೆಯಲು ಅವರಿಗೆ ಏನು ಅಡ್ಡಿಯಾಗಿತ್ತು? ಅವರು ಏಕೆ ಸುಮ್ಮನಿದ್ದರು?” ಎಂದು ಪ್ರಶ್ನಿಸಿದರು.

ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ರಾಜಕೀಯ ಲಾಭಕ್ಕಾಗಿ ರೈತರನ್ನು ರಾಜ್ಯ ಸರ್ಕಾರದ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಿಡದಿ ಯೋಜನೆಗಾಗಿ ರೈತರ ಜಮೀನನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ಜೆಡಿಎಸ್‌ ಪಾದಯಾತ್ರೆ ನಡೆಸುತ್ತಿರುವುದು, ಈ ಹೋರಾಟ ರೈತರ ಹಿತಾಸಕ್ತಿಗಿಂತ ರಾಜಕೀಯ ಲಾಭಕ್ಕಾಗಿ ನಡೆಯುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾವು ನಮ್ಮ ರೈತರನ್ನು ರಕ್ಷಿಸಬೇಕು, ನ್ಯಾಯಾಲಯದ ತೀರ್ಪನ್ನೂ ಪಾಲಿಸಬೇಕು: CWRC ಆದೇಶಕ್ಕೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ನಾನು ಸೇರಿದಂತೆ ಎಲ್ಲರೂ ಸರ್ಕಾರಿ ನೌಕರರೇ; ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ, ಡಬಲ್ ಬಿಲ್ ಮಾಡುವವರನ್ನು ಮಟ್ಟ ಹಾಕುವೆ: CM ಡಿಕೆಶಿ ಎಚ್ಚರಿಕೆ

'ನಾನೀಗ ಪೆಟ್ಟು ತಿಂದ ಹುಲಿಯಂತಾಗಿದ್ದೇನೆ; ನೋಡ್ತಿರಿ ನೀವು...': ಖಾತೆ ಬಗ್ಗೆ ಸಚಿವ ಬಿ.ನಾಗೇಂದ್ರ ಸ್ಫೋಟಕ ಹೇಳಿಕೆ - Video

‘ಕನಿಷ್ಠ ಸರಿಯಾಗಿ ಬಟ್ಟೆ ಹಾಕಿಕೊಳ್ಳಿ’: ಅರೆಬೆತ್ತಲಾಗಿ ಮಹಿಳೆಯರಿಂದ ಅರ್ಜಿ ಸ್ವೀಕರಿಸಿದ AAP ಶಾಸಕನ ವಿರುದ್ಧ ಸಿಎಂ ರೇಖಾ ಗುಪ್ತಾ ಗರಂ! Video

ನಿಮ್ಮ ಜೊತೆಗಿದ್ದವರು ಯಾರು?: ರಾಹುಲ್ ಗಾಂಧಿ ರಜಾ ಫೋಟೋ ಬಗ್ಗೆ ಕೇಂದ್ರ ಸಚಿವರ ಪ್ರಶ್ನೆ, ಕಾಂಗ್ರೆಸ್ ಕೆಂಡಮಂಡಲ!