ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 19 ಶಾಸಕರು 
ರಾಜ್ಯ

ನೂತನ ಸಚಿವರಿಗೆ ಸರ್ಕಾರಿ ನಿವಾಸ, ಕಾರು ಹಂಚಿಕೆ ಮಾಡಿ ಆದೇಶ; ನಿಮ್ಮ ಜಿಲ್ಲೆಯ ಮಿನಿಸ್ಟರ್ ಮನೆ ಎಲ್ಲಿದೆ? ಇಲ್ಲಿದೆ ವಿವರ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು(ಡಿಪಿಎಆರ್‌) ಸಚಿವರುಗಳು ಹಾಗೂ ಜನಪ್ರತಿನಿಧಿಗಳಿಗೆ ಅಧಿಕೃತ ಸರ್ಕಾರಿ ವಾಹನಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು: ರಾಜ್ಯ ಸರ್ಕಾರ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹಾಗೂ ಪ್ರಮುಖ 10 ಸಚಿವರಿಗೆ ಬೆಂಗಳೂರು ನಗರದಲ್ಲಿ ಅಧಿಕೃತ ಸರ್ಕಾರಿ ನಿವಾಸ(ಬಂಗಲೆ) ಹಾಗೂ 19 ನೂತನ ಸಚಿವರಿಗೆ ಅಧಿಕೃತ ಸರ್ಕಾರಿ ಕಾರು ಹಂಚಿಕೆ ಮಾಡಿ ಮಂಗಳವಾರ ಆದೇಶ ಹೊರಡಿಸಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು(ಡಿಪಿಎಆರ್‌) ಸಚಿವರುಗಳು ಹಾಗೂ ಜನಪ್ರತಿನಿಧಿಗಳಿಗೆ ಅಧಿಕೃತ ಸರ್ಕಾರಿ ವಾಹನಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಕುಮಾರ ಕೃಪಾ ಅತಿಥಿ ಗೃಹದ ವಿಶೇಷಾಧಿಕಾರಿಗಳಿಗೆ ಈ ಕುರಿತು ನಿರ್ದೇಶನ ನೀಡಲಾಗಿದೆ.

ಬೆಂಗಳೂರಿನ ಸದಾಶಿವನಗರ, ಸ್ಯಾಂಕಿ ರಸ್ತೆ ಹಾಗೂ ಜಯಮಹಲ್ ಬಡಾವಣೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ 10 ಸಚಿವರಿಗೆ ಸರ್ಕಾರಿ ಅಧಿಕೃತ ನಿವಾಸಗಳನ್ನು ಹಂಚಿಕೆ ಮಾಡಲಾಗಿದೆ.

ಸಚಿವರಿಗೆ ಸರ್ಕಾರಿ ನಿವಾಸ ಹಂಚಿಕೆ

ಡಾ. ಜಿ. ಪರಮೇಶ್ವರ (ಉಪಮುಖ್ಯಮಂತ್ರಿಗಳು) - ಸದಾಶಿವನಗರ, RMV 2ನೇ ಹಂತ, ಬೆಂಗಳೂರು

ಎನ್. ಚೆಲುವರಾಯಸ್ವಾಮಿ - ನಂ.3, ಕುಮಾರ ಕೃಷ್ಣ ದಕ್ಷಿಣಿ, ಬೆಂಗಳೂರು

ಬಿ.ಝೆಡ್. ಜಮೀರ್ ಅಹಮದ್ ಖಾನ್ - ನಂ.30, ಸ್ಯಾಂಕಿ ರಸ್ತೆ, ಬೆಂಗಳೂರು

ಶಿವರಾಜ್ ಎಸ್. ತಂಗಡಗಿ - ನಂ. ಬಿ-2, ಜಯಮಹಲ್, ಜಯಮಹಲ್ ಬಡಾವಣೆ, ಬೆಂಗಳೂರು

ಲಕ್ಷ್ಮಣ ಸವದಿ - ನಂ.3, ಜಯಮಹಲ್, ಜಯಮಹಲ್ ಬಡಾವಣೆ, ಬೆಂಗಳೂರು

ಸಂತೋಷ್ ಲಾಡ್ - ನಂ.3, ಸದಾ ಸಚಿವರ ನಿವಾಸ, ಸ್ಯಾಂಕಿ ರಸ್ತೆ, ಬೆಂಗಳೂರು

ಪಿ.ಎಂ. ನರೇಂದ್ರ ಸ್ವಾಮಿ - ನಂ.5, ಜಯಮಹಲ್, ಜಯಮಹಲ್ ಬಡಾವಣೆ, ಬೆಂಗಳೂರು

ಬೈರತಿ ಸುರೇಶ್ - ನಂ.2, ಕೇಶವ್ ರಸ್ತೆ, ಬೆಂಗಳೂರು

ಕೆ.ಎನ್. ಶಿವಲಿಂಗೇಗೌಡ - ನಂ.1, ಜಯಮಹಲ್, ಜಯಮಹಲ್ ಬಡಾವಣೆ, ಬೆಂಗಳೂರು

ಬಸವಂತಪ್ಪ - ನಂ.ಬಿ-6, ಜಯಮಹಲ್, ಜಯಮಹಲ್ ಬಡಾವಣೆ, ಬೆಂಗಳೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇವ್ರು ಊರುಬಿಟ್ಟು ಊರಿಗೆ ಬಂದು ಆಸ್ತಿ ಮಾಡಬಹುದು, ನಾವು ಮಾಡ್ಬಾರ್ದ? ಪಾರ್ಟ್-2ನಲ್ಲಿ ಏನಿದೆ ಅಂತ ಗೊತ್ತು: HDK ಆರೋಪಕ್ಕೆ CM ಡಿಕೆಶಿ ತಿರುಗೇಟು

'ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡ'; ಟರ್ಕಿಗೆ ಭಾರತ ಖಡಕ್ ಎಚ್ಚರಿಕೆ, ಆಗಿದ್ದೇನು?

11 ದಿನಗಳ ಹಿಂದಷ್ಟೇ ನಾಪತ್ತೆಯಾಗಿದ್ದ ನವವಿವಾಹಿತೆ ಕೆರೆಯಲ್ಲಿ ಶವವಾಗಿ ಪತ್ತೆ, ಪೊಲೀಸ್ ತನಿಖೆ!

ಬರದಿಂದ ಕೆಂಗೆಟ್ಟ ಕರ್ನಾಟಕಕ್ಕೆ ಕೇಂದ್ರದ ನೆರವಿನ ನಿರೀಕ್ಷೆ: ಅಕ್ಟೋಬರ್ 3 ರಿಂದ ಕೇಂದ್ರ ತಂಡದ ಸಮೀಕ್ಷೆ- ಎಚ್.ಡಿ ಕುಮಾರಸ್ವಾಮಿ

ರಷ್ಯಾಗೆ ಮರ್ಮಾಘಾತ; ಪರಮಾಣು ಸಾಮರ್ಥ್ಯದ ಯುದ್ಧವಿಮಾನ ಪತನ-ಬೆಂಕಿಗಾಹುತಿ, 6 ಮಂದಿ ಸಜೀವ ದಹನ, ಓರ್ವ ಪಾರು! Video