ಅಲೋಕ್ ಕುಮಾರ್, ಹೆಚ್ ಡಿ ರೇವಣ್ಣ 
ರಾಜ್ಯ

ಪ್ರಜ್ವಲ್ ಗೆ ಮೊದಲೇ ವಾರ್ನ್ ಮಾಡಿದ್ದೆ, ದರ್ಶನ್ ಸೆಲ್ ನಲ್ಲಿ ಏನೂ ಸಿಕ್ಕಿಲ್ಲ-ಅಲೋಕ್ ಕುಮಾರ್, ಸರ್ಕಾರ ತನಿಖೆ ಮಾಡಲಿ- H D ರೇವಣ್ಣ-Video

ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್​ನಲ್ಲಿ ಮೊಬೈಲ್ ಹೇಗೆ ಬಂತು ಎಂಬ ಬಗ್ಗೆ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿ ವರದಿ ಸಲ್ಲಿಸಲು ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ.

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ವೇಳೆ ಪ್ರಜ್ವಲ್​ ರೇವಣ್ಣ ಬ್ಯಾರಕ್​ನಲ್ಲಿ ಮೊಬೈಲ್ ಮತ್ತು ಪೆನ್ ಡ್ರೈವ್ ಪತ್ತೆಯಾದ ಪ್ರಕರಣ ಸಂಬಂಧ ಜೈಲು ಅಧಿಕಾರಿಗಳ ನಿರ್ಲಕ್ಷ್ಯವಿರುವುದು ಸಾಬೀತಾಗಿದ್ದು, ತನಿಖೆಗೆ ಕಾರಾಗೃಹ ಮತ್ತು ಸುಧಾರಣೆ ಇಲಾಖೆ ಡಿಐಜಿ ಜಿನೇಂದ್ರ ಖನಗಾವಿ ನೇತೃತ್ವದ ತಂಡ ರಚನೆ ಮಾಡಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್​ನಲ್ಲಿ ಮೊಬೈಲ್ ಹೇಗೆ ಬಂತು ಎಂಬ ಬಗ್ಗೆ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿ ವರದಿ ಸಲ್ಲಿಸಲು ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ.

ತನಿಖೆ ನಡೆಸಿ ವರದಿ ನೀಡಲು ಸೂಚನೆ

ಪರಪ್ಪನ ಅಗ್ರಹಾರ ಜೈಲಿನ ಸುತ್ತಮುತ್ತ ಜಾಮರ್ ಅಳವಡಿಸಲಾಗಿದ್ದು, ಸ್ಥಳೀಯರಿಗೆ ಟವರ್​ ಸಿಗದೆ ನಿತ್ಯ ಪರದಾಡುತ್ತಾರೆ. ಹೀಗಿರುವಾಗ ಜೈಲಿನ ಒಳಗೆ ಏರ್​ಟೆಲ್​​ ಕಂಪನಿಯ ಸಿಮ್ ಬಳಕೆಯಾಗುತ್ತಿದೆ. ಅದರಲ್ಲೂ ಆಂಧ್ರಪ್ರದೇಶದ ಏರ್​ಟೆಲ್​​​ ಸಿಮ್​​ಗಳು ಪತ್ತೆಯಾಗಿವೆ, ಈ ಬಗ್ಗೆ ಅನೇಕ ಬಾರಿ ಎಚ್ಚರಿಕೆ ನೀಡಲಾಗಿದ್ದರೂ ಸಿಮ್​​​​​​ಗಳು ಪತ್ತೆ ಆಗುತ್ತಿವೆ. ಹೀಗಾಗಿ ಈ ಕುರಿತು ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ ಎಂದು ರಾಜ್ಯ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಇಷ್ಟೆಲ್ಲಾ ಭದ್ರತೆ ಇದ್ದರೂ ಜೈಲಿನೊಳಗೆ ಹೇಗೆ ಮೊಬೈಲ್​​​ ಹೋಗ್ತಿದೆ? ಇದರಲ್ಲಿ ಅಧಿಕಾರಿಗಳು ಏನಾದರೂ ಭಾಗಿಯಾಗಿದ್ದಾರೆಂಬ ಬಗ್ಗೆ ತನಿಖೆ ನಡೆಸುತ್ತೇವೆ. ಅಧಿಕಾರಿಗಳು ಭಾಗಿಯಾಗಿದ್ದರೆ, ಪ್ರಜ್ವಲ್ ರೇವಣ್ಣಗೆ ಫೋನ್ ತಂದು ಕೊಟ್ಟವರು ಯಾರು? ಎಷ್ಟು ದಿನಗಳಿಂದ ಮೊಬೈಲ್ ಬಳಕೆ ಮಾಡುತ್ತಿದ್ದಾನೆ? ಇದರಲ್ಲಿ ಯಾರೆಲ್ಲಾ ಕೈವಾಡ ಇದೆ ಎಂಬುದರ ಪತ್ತೆಗೂ ಸೂಚಿಸಲಾಗಿದೆ ಎಂದು ತಿಳಿಸಿದರು.

ಪ್ರಜ್ವಲ್ ರೇವಣ್ಣನಿಗೆ ಮೊದಲೇ ಎಚ್ಚರಿಕೆ ನೀಡಿದ್ದೆವು. ಇನ್ನು ನಟ ದರ್ಶನ್ ಸೆಲ್ ನಲ್ಲಿಯೂ ಹುಡುಕಾಟ ನಡೆಸಿದ್ದು ಮೊಬೈಲ್ ಅಥವಾ ಇನ್ನಿತರ ಸಾಧನಗಳು ಪತ್ತೆಯಾಗಿಲ್ಲ ಎಂದರು.

ಸರ್ಕಾರ ತನಿಖೆ ಮಾಡಲಿ-ಹೆಚ್ ಡಿ ರೇವಣ್ಣ

ಪುತ್ರನ ಮೊಬೈಲ್ ಪ್ರಕರಣ ಬಗ್ಗೆ ಇಂದು ವಿಧಾನಸೌಧ ಹೊರಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳಿದಾಗ ಹೆಚ್ ಡಿ ರೇವಣ್ಣ, ಗೃಹ ಇಲಾಖೆಯ ಜವಾಬ್ದಾರಿ ಪ್ರಿಯಾಂಕ್ ಖರ್ಗೆ ಅವರ ಬಳಿ ಇದೆ. ಅವರ ಪಕ್ಷವೇ ಅಧಿಕಾರದಲ್ಲಿದೆ. ಅವರೇ ತನಿಖೆ ನಡೆಸಲಿ ಎಂದಷ್ಟೇ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಪಕ್ಷಗಳ ಗದ್ದಲದಲ್ಲೇ ಅಧಿವೇಶನಕ್ಕೆ ತೆರೆ: ಲೋಕಸಭೆ ಶೇ 19, ರಾಜ್ಯಸಭೆ ಶೇ 39ರಷ್ಟು ಕಲಾಪ ಫಲಪ್ರದ: ಕಿರಣ್ ರಿಜಿಜು ಮಾಹಿತಿ

‘ನನ್ನನ್ನು ಅಸ್ಪೃಶ್ಯನಂತೆ ಕಂಡು ಶುದ್ಧೀಕರಣ ಮಾಡಿದರು’: ಬಿಜೆಪಿ ವಿರುದ್ಧ Mallikarjun Kharge ಕಿಡಿ, ನಡ್ಡಾ ಪ್ರತಿಕ್ರಿಯೆ

'Time To Move On'.. ವಿವಾದ ಮುಂದುವರಿಸುವ ಸಮಯವಲ್ಲ’: ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ಮಹತ್ವದ ಸೂಚನೆ

ಕೆಂಪುಕೋಟೆ ದಾಳಿ ಹಿಂದೆ ಅಲ್-ಖೈದಾ ಕೈವಾಡ; ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವರದಿಯಲ್ಲಿ ಅಧಿಕೃತ ಉಲ್ಲೇಖ...!

OLA, UBER ಆ್ಯಪ್‌ಗಳ 'Advance Tip' ದಂಧೆಗೆ ಕೇಂದ್ರ ಸರ್ಕಾರ ಬ್ರೇಕ್: ಪ್ರಯಾಣಕ್ಕೂ ಮುನ್ನ ಟಿಪ್ ಕೇಳದಂತೆ ಖಡಕ್ ಆದೇಶ..!