ಸಕಲೇಶಪುರ ಶಾಸಕ ಸಿಮೆಂಟ್ ಮಂಜು ವಂದೇ ಭಾರತ್ ಪ್ರಾಯೋಗಿಕ ಸಂಚಾರಕ್ಕೆ ಬುಧವಾರ ಚಾಲನೆ ನೀಡಿದರು. 
ರಾಜ್ಯ

ಶಿರಾಡಿಘಾಟ್‌ನಲ್ಲಿ Vande Bharat ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ..!

ನೈಋತ್ಯ ರೈಲ್ವೆಯ ಎಂಜಿನಿಯರ್‌ಗಳನ್ನು ಒಳಗೊಂಡ ತಾಂತ್ರಿಕ ತಂಡವು ಹಳಿಯನ್ನು ಪರಿಶೀಲಿಸಿ, ಘಾಟ್‌ ಮಾರ್ಗದಲ್ಲಿ ರೈಲಿನ ವೇಗ ಹಾಗೂ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಿತು.

ಹಾಸನ: ಶಿರಾಡಿಘಾಟ್‌ ಮಾರ್ಗದ ಸಕಲೇಶಪುರ-ಕುಕ್ಕೆ ಸುಬ್ರಹ್ಮಣ್ಯ ಜಂಕ್ಷನ್‌ ನಡುವೆ ವಂದೇ ಭಾರತ್‌ ರೈಲಿನ ಪ್ರಾಯೋಗಿಕ ಸಂಚಾರವನ್ನು ಬುಧವಾರ ಯಶಸ್ವಿಯಾಗಿ ನಡೆಸಲಾಯಿತು.

ಘಾಟ್‌ ಪ್ರದೇಶದ ತಿರುವುಗಳಲ್ಲಿ ರೈಲಿನ ನಿಯಂತ್ರಣಕ್ಕೆ ನೆರವಾಗುವ ಸ್ವಯಂಚಾಲಿತ ತುರ್ತು ಬ್ರೇಕಿಂಗ್‌ ವ್ಯವಸ್ಥೆಯನ್ನು ರೈಲಿನಲ್ಲಿ ಅಳವಡಿಸಲಾಗಿದೆ.

ಮಂಗಳೂರು ಮೂಲಕ ಬೆಂಗಳೂರು-ಮಡಗಾಂವ್‌ ಸಂಪರ್ಕ ಕಲ್ಪಿಸುವ ವಂದೇ ಭಾರತ್‌ ರೈಲು ಸೇವೆ ಆರಂಭವಾದರೆ, ವಿಶೇಷವಾಗಿ ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಾಣಿಜ್ಯ ಚಟುವಟಿಕೆ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.

ನೈಋತ್ಯ ರೈಲ್ವೆಯ ಎಂಜಿನಿಯರ್‌ಗಳನ್ನು ಒಳಗೊಂಡ ತಾಂತ್ರಿಕ ತಂಡವು ಹಳಿಯನ್ನು ಪರಿಶೀಲಿಸಿ, ಘಾಟ್‌ ಮಾರ್ಗದಲ್ಲಿ ರೈಲಿನ ವೇಗ ಹಾಗೂ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಿತು.

ಈ ಮಾರ್ಗದಲ್ಲಿ 52 ಸುರಂಗಗಳು ಹಾಗೂ ತೀವ್ರ ತಿರುವುಗಳು ಇದ್ದು, ಲೋಕೋ ಪೈಲಟ್‌ಗಳಿಗೆ ಇದು ಪ್ರಮುಖ ಸವಾಲಾಗಿದೆ.

ಸಕಲೇಶಪುರ ಜಂಕ್ಷನ್‌ನಲ್ಲಿ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿದ ಸಕಲೇಶಪುರ ಶಾಸಕ ಸಿಮೆಂಟ್‌ ಮಂಜು, ವಂದೇ ಭಾರತ್‌ ರೈಲು ಭಾರತಕ್ಕೆ ಹೆಮ್ಮೆಯ ವಿಚಾರ ಎಂದರು.

ಯಾವುದೇ ಅಡೆತಡೆಗಳಿದ್ದರೂ ಅವುಗಳನ್ನು ನಿವಾರಿಸಿ ಆದಷ್ಟು ಬೇಗ ಪ್ರಯಾಣಿಕರ ಸೇವೆ ಆರಂಭಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದರು.

ಬೆಂಗಳೂರು-ಮಂಗಳೂರು ನಡುವೆ ನಿಯಮಿತ ವಂದೇ ಭಾರತ್‌ ರೈಲು ಸೇವೆ ಆರಂಭಿಸುವಂತೆ ಸ್ಥಳೀಯರು ಕೂಡ ರೈಲ್ವೆ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Hormuz ಜಲಸಂಧಿಯಲ್ಲಿ ಅಮೆರಿಕಕ್ಕೆ ಬಿಗ್ ಶಾಕ್: ಯುಎಸ್ ಮಿಲಿಟರಿಯ ಮತ್ತೊಂದು ಅತ್ಯಾಧುನಿಕ ‘Kingfish’ Drone Iran ವಶಕ್ಕೆ..!

'ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್' ಕಿಚ್ಚ ಸುದೀಪ್? ಚರ್ಚೆಗೆ ಗ್ರಾಸವಾಯ್ತು ಬಿಗ್ ಬಾಸ್ ಹೇಳಿಕೆ!

ಮಧ್ಯಪ್ರಾಚ್ಯ ಸಂಘರ್ಷ: ಮಧ್ಯಾವಧಿ ಚುನಾವಣೆಗೂ ಮುನ್ನ ಇರಾನ್ ಮೇಲೆ ಅಮೆರಿಕ ದಾಳಿ?: ಟ್ರಂಪ್ ಸ್ಫೋಟಕ ಹೇಳಿಕೆ..!

ಗ್ರಾಹಕರಿಗೆ ಗುಡ್‌ನ್ಯೂಸ್: ಪ್ರಸ್ತಾವಿತ ಬ್ಯಾಂಕ್ ಮುಷ್ಕರ ಮುಂದೂಡಿಕೆ, IBA- UFBU ಮಾತುಕತೆ ಬಳಿಕ ಮಹತ್ವದ ನಿರ್ಧಾರ

BDA 100ನೇ 'ಓಪನ್ ಹೌಸ್' ಸಭೆ: ನಿವಾಸಿಗಳಿಂದ ಉತ್ತಮ ಪ್ರತಿಕ್ರಿಯೆ!