'ಮಂಕಿಮ್ಯಾನ್'; ಜ್ಯೋತಿರಾಜ್ ಹಾಗೂ ನಿವೇದಿತಾ  
ರಾಜ್ಯ

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ 'ಮಂಕಿಮ್ಯಾನ್'; ಜ್ಯೋತಿರಾಜ್ ಕೈ ಹಿಡಿಯುತ್ತಿರುವ ಯುವತಿ ಯಾರು ಗೊತ್ತಾ?

ಜ್ಯೋತಿರಾಜ್ ಅವರು ಈ ಹಿಂದೆ 2019 ರಲ್ಲಿ ಜೋಗ ಜಲಪಾತದಲ್ಲಿ ಕಾಣೆಯಾದವರನ್ನು ಹುಡುಕಲು ಫಾಲ್ಸ್​ಗೆ ಇಳಿದು ಕಾಣೆಯಾಗಿದ್ದರಿಂದ ಅವರ ಮದುವೆ ಮುರಿದು ಬಿದ್ದಿತ್ತು.

ಚಿತ್ರದುರ್ಗ: ಏಳುಸುತ್ತಿನ ಕೋಟೆಯೇ ಇರಲಿ, ಜೋಗದ ಗುಂಡಿಯೇ ಇರಲಿ ಯಾವುದೇ ವಸ್ತುವಿಲ್ಲದೇ, ಬರಿಗೈನಲ್ಲಿ ಕೋಟೆ, ಕೊತ್ತಲಗಳನ್ನು, ಗುಂಡಿ ಬೆಟ್ಟಗಳನ್ನು ಸರಸರನೆ ಹತ್ತಿ ಇಳಿಯುವ ಚಿತ್ರದುರ್ಗದ ‘ಮಂಕಿಮ್ಯಾನ್’ ಖ್ಯಾತಿಯ ಜ್ಯೋತಿರಾಜ್ ಅವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಜ್ಯೋತಿರಾಜ್ ಅವರು ಈ ಹಿಂದೆ 2019 ರಲ್ಲಿ ಜೋಗ ಜಲಪಾತದಲ್ಲಿ ಕಾಣೆಯಾದವರನ್ನು ಹುಡುಕಲು ಫಾಲ್ಸ್​ಗೆ ಇಳಿದು ಕಾಣೆಯಾಗಿದ್ದರಿಂದ ಅವರ ಮದುವೆ ಮುರಿದು ಬಿದ್ದಿತ್ತು. ಇದೀಗ ಆರೇಳು ವರ್ಷಗಳ ಬಳಿಕ ಜ್ಯೋತಿರಾಜ್ 'ನಿವೇದಿತಾ' ಎಂಬವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ. ಸದ್ಯ ಎರಡು ಕುಟುಂಬದಲ್ಲಿ ಖುಷಿ ಮನೆ ಮಾಡಿದ್ದು, ಸ್ವತಃ ಮದುವೆಗೆ ಬನ್ನಿ ಎಂದು ಅಭಿಮಾನಿಗಳಿಗೆ, ಜನ ಸಾಮಾನ್ಯರಿಗೆ ಕೋತಿರಾಜ್ ಮನವಿ ಮಾಡಿದ್ದಾರೆ.

ಜ್ಯೋತಿರಾಜ್ ಅವರು ತಮ್ಮ ಮದುವೆಯ ಕುರಿತು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ‘ಎಲ್ಲರಿಗೂ ನಮಸ್ಕಾರ. ಬರುವ 23 ಹಾಗೂ 24 ರಂದು ನನ್ನ ಮದುವೆ ಇದೆ. ಕರ್ನಾಟಕದ ಜನತೆ ನಮಗೆ ಆಶೀರ್ವಾದ ಮಾಡಿ. ನಾನು ನಂಬಿದ ದೈವ ಅಮ್ಮ ಏಕನಾತೇಶ್ವರಿ, ಈಕೆ ಕುಣಿಸಿದಂಗೆ ಕುಣಿಯುತ್ತಿದ್ದೇನೆ’ ಎಂದು ಎಲ್ಲರನ್ನು ಮದುವೆಗೆ ಆಹ್ವಾನಿಸಿದ್ದಾರೆ.

ಜ್ಯೋತಿರಾಜ್ ಕೈ ಹಿಡಿಯುತ್ತಿರುವ ಈ ನಿವೇದಿತಾ ಯಾರು?

ಜ್ಯೋತಿರಾಜ್ ಅವರ ಜೋತೆ ನಿವೇದಿತಾ ಅವರ ಮದುವೆ ನಿಶ್ಚಯವಾಗಿದೆ. ನಿವೇದಿತಾ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ನಿವಾಸಿ. ಪದವಿ ಪಡೆದಿರುವ ನಿವೇದಿತಾ ಅವರೇ ಜ್ಯೋತಿರಾಜ್ ಜೊತೆ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ.

ಇದೇ ಆಗಸ್ಟ್​ 22, ಶನಿವಾರ ಹಾಗೂ ಆಗಸ್ಟ್ 23 ಭಾನುವಾರದಂದು ಚಿತ್ರದುರ್ಗದ ವೈಭವ ಗಾರ್ಡನ್​ನಲ್ಲಿ ಜ್ಯೋತಿರಾಜ್ ಹಾಗೂ ನಿವೇದಿತಾ ಮದುವೆ ಸಮಾರಂಭ ನಡೆಯಲಿದೆ.

ಜ್ಯೋತಿರಾಜ್ ಸಾಹಸಕ್ಕೆ ನಿವೇದಿತಾ ಫಿದಾ!

ಜ್ಯೋತಿರಾಜ್ ಭಾವೀ ಪತ್ನಿ ನಿವೇದಿತಾ ಅವರಿಗೆ ಜ್ಯೋತಿರಾಜ್ ಮಾಡೋ ಸಾಹಸಗಳು ಇಷ್ಟವಂತೆ. ಅವರ ಸಾಹಸ ಪ್ರವೃತ್ತಿಯನ್ನು ಮೆಚ್ಚಿಯೇ ಜ್ಯೋತಿರಾಜ್ ಜೊತೆ ಮದುವೆ ಮಾಡಿಕೊಳ್ಳಲು ನಿವೇದಿತಾ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇನ್ನು ನಮ್ಮ ಕುಟುಂಬಸ್ಥರು ತಮಿಳುನಾಡಿನಲ್ಲಿ ಮದುವೆ ಆಗಲು ಒತ್ತಾಯಿಸಿದ್ದರು. ಆದರೆ, ನಾನು ಕನ್ನಡಿಗನಾಗಿ, ಚಿತ್ರದುರ್ಗದಲ್ಲೇ ಮದುವೆ ಆಗುತ್ತಿದ್ದೇನೆ ಅಂತ ಜ್ಯೋತಿರಾಜ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್​​ಗೆ ED ಶಾಕ್​: ಮನೆ, ಕಚೇರಿ ಸೇರಿದಂತೆ 13ಕ್ಕೂ ಹೆಚ್ಚು ಕಡೆ ದಾಳಿ

‘Dimagi Naxal’ ವಿವಾದ: ‘ಕಾಂಗ್ರೆಸ್‌ ಮಾವೋವಾದಿ ಪಕ್ಷವಾಗಿ ಬದಲಾಗುತ್ತಿದೆ’: ಕಿರಣ್‌ ರಿಜಿಜು ವಾಗ್ದಾಳಿ

‘ಅಲ್ಲಿ ಪ್ರತಿ ಮತದಾರನಿಗೂ photo ID’ಯಿದೆ: ಭಾರತದ ಚುನಾವಣಾ ವ್ಯವಸ್ಥೆ ಕೊಂಡಾಡಿದ ಟ್ರಂಪ್, ಅಮೆರಿಕಾ ಮತದಾನ ವ್ಯವಸ್ಥೆ ಬದಲಾವಣೆಗೆ ಪಟ್ಟು, SAVE America Act ಜಾರಿಗೆ ಆಗ್ರಹ..!

ಜಿಲ್ಲಾವಾರು ಕಾಂಗ್ರೆಸ್ ಶಾಸಕರೊಂದಿಗೆ ನಿಯಮಿತ ಸಭೆಗೆ ಸಿಎಂ ಡಿಕೆ. ಶಿವಕುಮಾರ್‌ ನಿರ್ಧಾರ..!

ಜಂತರ್ ಮಂತರ್‌ ಪ್ರತಿಭಟನೆ ಎಫೆಕ್ಟ್: ಮೋದಿ ಬೆಂಬಲಿಸಲು ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದ ಪೊಲೀಸ್‌ ಕಾನ್‌ಸ್ಟೆಬಲ್‌!