ಅಶ್ವಿನಿ ತಿಮ್ಮಾರೆಡ್ಡಿ 
ರಾಜ್ಯ

ರಾಯಚೂರು: ಬಾವಿಯಲ್ಲಿ ದಲಿತ ಯುವತಿ ಶವ ಪತ್ತೆ; ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ!

ದುಷ್ಕರ್ಮಿಗಳು ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ, ಬಳಿಕ ಶವವನ್ನು ಬಾವಿಗೆ ಎಸೆದಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಯಚೂರು: ರಾಯಚೂರು ಜಿಲ್ಲೆಯ ಸಿರ್ವಾರ್ ತಾಲ್ಲೂಕಿನ ಹೊಕ್ರಾನಿ ಗ್ರಾಮದ ಬಾವಿಯಲ್ಲಿ ಗುರುವಾರ ದಲಿತ ಯುವತಿಯ ಶವ ಪತ್ತೆಯಾಗಿದ್ದು, ಆಕೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಮೃತ ಯುವತಿಯನ್ನು ಹೊಕ್ರಾನಿ ಗ್ರಾಮದ ಅಶ್ವಿನಿ ತಿಮ್ಮಾರೆಡ್ಡಿ(22) ಎಂದು ಗುರುತಿಸಲಾಗಿದ್ದು, ಆಕೆ ಇತ್ತೀಚೆಗೆ ಪದವಿ ಮುಗಿಸಿದ್ದಳು.

ಬುಧವಾರ ಸಂಜೆ ಬಯಲು ಶೌಚಕ್ಕೆ ಹೋಗಿದ್ದ ಯುವತಿ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ, ನಂತರ ಕುಟುಂಬಸ್ಥರು ಆಕೆಯನ್ನು ಹುಡುಕಾಡಿದರೂ ಸಿಕ್ಕಿರಲಿಲ್ಲ. ಆದರೆ ಇಂದು ಬೆಳಗ್ಗೆ ಆಕೆಯ ಶವ ಬಾವಿಯಲ್ಲಿ ಪತ್ತೆಯಾಗಿದೆ.

ದುಷ್ಕರ್ಮಿಗಳು ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ, ಬಳಿಕ ಶವವನ್ನು ಬಾವಿಗೆ ಎಸೆದಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ.

ಈ ಸಂಬಂಧ ಸಿರ್ವಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ: ತಮ್ಮದೇ ಸರ್ಕಾರದ ವಿರುದ್ಧ ತಿರುಗಿಬಿದ್ದ ರವಿಕುಮಾರ್ ಗಣಿಗ; ರೈತರಿಂದ ಪ್ರತಿಭಟನೆ, ಹೆದ್ದಾರಿ ತಡೆದು ಆಕ್ರೋಶ

ಕನ್ವರ್ ಯಾತ್ರೆಯ ವೇಳೆ ಮಹಿಳೆಯರು ಟ್ರಕ್ ಮೇಲೆ ನೃತ್ಯ ಮಾಡಿದ್ದು; ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ, Video!

ಪ್ರತಿಪಕ್ಷಗಳು ರಾಜೀನಾಮೆಗೆ ಆಗ್ರಹಿಸುತ್ತಿರುವ ಮಧ್ಯೆ ಸಚಿವ ಬಿ. ನಾಗೇಂದ್ರಗೆ ಬಿಗ್ ರಿಲೀಫ್: ಹೈಕೋರ್ಟ್ ಮಹತ್ವದ ಆದೇಶ

ಮಹಿಳಾ ಪೊಲೀಸ್ ಅಧಿಕಾರಿಯ ಅರೆಬೆತ್ತಲೆ ವಿಡಿಯೋ ವೈರಲ್; ಬೆಚ್ಚಿಬಿದ್ದ ಪೊಲೀಸ್ ಇಲಾಖೆ, ಸೂತ್ರಧಾರಿಗಳ ಹೆಸರು ಬಹಿರಂಗ!

ಹಾಡಹಗಲೇ ಪಾಕಿಸ್ತಾನದ 'TikTok Star ಆಯೇಷಾ ಗಿಲಾಮಾನಾ' ಗುಂಡೇಟಿಗೆ ಬಲಿ! ವಿಡಿಯೋ ವೈರಲ್