ರಾಹುಲ್ ಗಾಂಧಿ 
ರಾಜ್ಯ

ಖರ್ಗೆ ವೇದಿಕೆ ಶುದ್ಧೀಕರಣ ಘಟನೆ: ರಾಹುಲ್ ಗಾಂಧಿ ವಿರುದ್ಧ FIR ಸಂವಿಧಾನದ ಮೇಲಿನ ದಾಳಿ- ಸಚಿವ ಪರಮೇಶ್ವರ್

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ನೀಡಿದ ಸ್ಥಳ ಶುದ್ಧೀಕರಿಸಿದ್ದವರಿಗೆ ಶಿಕ್ಷಿಸಬೇಕು ಎಂದು ಹೇಳಿದ್ದ ರಾಹುಲ್ ಗಾಂಧಿ ವಿರುದ್ಧ ಉತ್ತರಾಖಂಡ ಪೊಲೀಸರು ಎಫ್‌ಐಆರ್ ದಾಖಲಿಸಿರುವುದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ನೀಡಿದ ಸ್ಥಳ ಶುದ್ಧೀಕರಿಸಿದ್ದವರಿಗೆ ಶಿಕ್ಷಿಸಬೇಕು ಎಂದು ಹೇಳಿದ್ದ ರಾಹುಲ್ ಗಾಂಧಿ ವಿರುದ್ಧ ಉತ್ತರಾಖಂಡ ಪೊಲೀಸರು ಎಫ್‌ಐಆರ್ ದಾಖಲಿಸಿರುವುದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಇದು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಮೇಲೆ ನಡೆದಿರುವ ಗಂಭೀರ ದಾಳಿ. ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ವಿರುದ್ಧ ಧ್ವನಿ ಎತ್ತಿದ ನಾಯಕರನ್ನೇ ಪ್ರಕರಣದಲ್ಲಿ ಸಿಲುಕಿಸುವ ಮೂಲಕ ಬಿಜೆಪಿ ಸರ್ಕಾರ ತನ್ನ ನಿಜವಾದ ಮನಸ್ಥಿತಿಯನ್ನು ಬಹಿರಂಗಪಡಿಸಿದೆ ಎಂದು ಡಿಸಿಎಂ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.

ಉತ್ತರಾಖಂಡ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾರ್ವಜನಿಕ ಸಭೆಯ ಬಳಿಕ ಆ ಜಾಗ ‘ಶುದ್ಧೀಕರಣ’ ಮಾಡಲಾಗಿತ್ತು. ದೇಶದ ಪ್ರಮುಖ ದಲಿತ ನಾಯಕರೊಬ್ಬರು ಭೇಟಿ ನೀಡಿದ ನಂತರ ಇಂತಹ ಕೃತ್ಯ ನಡೆದಿರುವುದು ಸಾಮಾನ್ಯ ಸಂಗತಿಯಲ್ಲ. ಇದು ನಮ್ಮ ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಜಾತಿ ತಾರತಮ್ಯದ ಮನೋಭಾವದ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಜಾತಿ ತಾರತಮ್ಯ ನಡೆಸಿದವರ ವಿರುದ್ಧ ಬಿಜೆಪಿ ಸರ್ಕಾರ ಕ್ರಮಕೈಗೊಳ್ಳುವ ಬದಲು, ಅದನ್ನು ಪ್ರಶ್ನಿಸಿದ ರಾಹುಲ್ ಗಾಂಧಿ ವಿರುದ್ಧವೇ ಎಫ್‌ಐಆರ್ ದಾಖಲಿಸಿದೆ. ಇದಕ್ಕಿಂತ ವಿಪರ್ಯಾಸ ಮತ್ತೇನಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ಕರ್ನಾಟಕ ಕಾಂಗ್ರೆಸ್ ಸರ್ಕಾರದ ಹಲವು ವೈಫಲ್ಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಸೆ.1ರಿಂದ ಲಿಂಗಸುಗೂರಿನಿಂದ ಪಾದಯಾತ್ರೆ ನಡೆಸಲು ಮುಂದಾಗಿದೆ. ವಿರೋಧ ಪಕ್ಷವಾಗಿ ಬಿಜೆಪಿ ಪಾದಯಾತ್ರೆ ಕೈಗೊಳ್ಳಲು ಸ್ವತಂತ್ರವಾಗಿದೆ. ಆದರೆ ವಿಧಾನಸಭೆಯಲ್ಲಿ ಸರ್ಕಾರದ ವೈಫಲ್ಯದ ಆರೋಪಗಳನ್ನು ಪ್ರಶ್ನೆ ಎತ್ತಬೇಕು. ಅದನ್ನು ಬಿಟ್ಟು ಬೀದಿಯಲ್ಲಿ ಮಾಡಿದರೆ ಏನು ಮಾಡೋಕಾಗುತ್ತೆ ಎಂದರು. ಅವರು ಪಾದಯಾತ್ರೆ ಮಾಡಲಿ ಆದರೆ ಯಾವ ವೈಫಲ್ಯ? ಎಂಬುದನ್ನು ಅವರು ವಿಧಾನಸಭೆಯಲ್ಲಿ ಹೇಳಬೇಕು. ಅದನ್ನು ಬಿಟ್ಟು ಬೀದಿಯಲ್ಲಿ ಹೋರಾಟ ಮಾಡುವ ಮೂಲಕ ಜನರಿಗೆ ಮಂಕು ಬೂದಿ ಎರಚುವ ಕೆಲಸ ಮಾಡಲಿದೆ ಎಂದು ಪರಮೇಶ್ವರ್ ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇರಾನ್ ಸಂಘರ್ಷದ ನಡುವೆಯೂ ಭಾರತದ GDP ಶೇ.7.8ರಷ್ಟು ಬೆಳವಣಿಗೆ: ಪ್ರಧಾನಿ ಮೋದಿ ಮೆಚ್ಚುಗೆ!

‘ಮೋದಿ ನನ್ನ ಜೀವನ ನರಕ ಮಾಡಿದ್ದಾರೆ, ಹೇಡಿ’: ಕಣ್ಣೀರಿಟ್ಟು ಪ್ರಧಾನಿ ಕ್ಷಮೆ ಕೇಳಿದ್ದ ಹುಡುಗಿ ಯೂಟರ್ನ್; ಮತ್ತೊಂದು ವಿಡಿಯೋ!

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ರೂಪಿಕಾ; 'ಚೆಲುವಿನ ಚಿಲಿಪಿಲಿ' ಮನಗೆದ್ದ ಹುಡುಗ ಯಾರು?

ಐದು ವರ್ಷದ ಬಳಿಕ RCB ಸ್ಟಾರ್ ಆಟಗಾರನಿಗೆ ಗುಡ್ ನ್ಯೂಸ್; ಮತ್ತೆ ಟೀಂ ಇಂಡಿಯಾಗೆ ಕೃನಾಲ್ ಪಾಂಡ್ಯ ಎಂಟ್ರಿ?

ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆ ಇರಾನ್ ಅಧ್ಯಕ್ಷ-ಮೋದಿ ಮಹತ್ವದ ಭೇಟಿ