ಸಾಂದರ್ಭಿಕ ಚಿತ್ರ 
ರಾಜ್ಯ

ಗದಗ ರೈತನಿಗೆ ಬಂಪರ್: ಕ್ವಿಂಟಾಲ್ ಮೆಣಸಿನಕಾಯಿಗೆ ಬರೋಬ್ಬರೀ 74 ಸಾವಿರ ಬೆಲೆ!

ಅವರು ಕಾಶ್ಮೀರ ಡಬ್ಬಾ ವಿಧದ ಮೆಣಸಿನಕಾಯಿಯನ್ನು ಬೆಳೆದಿದ್ದಾರೆ, ಹಸುವಿನ ಸಗಣಿಯನ್ನು ಮಾತ್ರ ಗೊಬ್ಬರವಾಗಿ ಬಳಸುತ್ತಿದ್ದರು.

ಗದಗ: ಲಕ್ಕುಂಡಿ ಗ್ರಾಮದ ರೈತನೊಬ್ಬ ತಾನು ಬೆಳೆದ ಮೆಣಸಿನಕಾಯಿ ಕೊಯ್ಲಿಗೆ ಕ್ವಿಂಟಾಲ್‌ಗೆ 74,099 ರೂ. ಗಳ ಅಚ್ಚರಿಯ ಬೆಲೆಯನ್ನು ಗಳಿಸಿದ್ದಾರೆ.

ಚಂದ್ರು ಚಬರಭಾವಿ ತಾವು ಬೆಳೆದ ಮೆಣಸಿನಕಾಯಿ ಬೆಳೆಗೆ ಉತ್ತಮ ಬೆಲೆ ಪಡೆದುಕೊಂಡಿದ್ದಾರೆ. ಮೆಣಸಿನಕಾಯಿಯ ಅಸಾಧಾರಣ ಗುಣಮಟ್ಟ ಹಾಗೂ ಬಳಸಿದ ಸಾವಯವ ಕೃಷಿ ವಿಧಾನಗಳಿಂದಾಗಿ ಈ ಗಮನಾರ್ಹ ಬೆಲೆ ಪಡೆದುಕೊಂಡಿದ್ದಾರೆ.

ಅವರು ಕಾಶ್ಮೀರ ಡಬ್ಬಾ ವಿಧದ ಮೆಣಸಿನಕಾಯಿಯನ್ನು ಬೆಳೆದಿದ್ದಾರೆ, ಹಸುವಿನ ಸಗಣಿಯನ್ನು ಮಾತ್ರ ಗೊಬ್ಬರವಾಗಿ ಬಳಸುತ್ತಿದ್ದರು. ಸಾಮಾನ್ಯವಾಗಿ, ಮೆಣಸಿನಕಾಯಿ ಬೆಲೆಗಳು ಕ್ವಿಂಟಾಲ್‌ಗೆ 35,000 ರಿಂದ 50,000 ರೂ.ಗಳ ನಡುವೆ ಇರುತ್ತದೆ ಉತ್ತಮ ಬೆಲೆ ಬೇಕೇಂದರೆ ಫಸಲು ಉತ್ತಮ ಗುಣಮಟ್ಟ ಇರಬೇಕಾಗಿರುತ್ತದೆ.

ಕಳೆದ ಎರಡು ವರ್ಷಗಳಲ್ಲಿ ಗರಿಷ್ಠ ಮಟ್ಟದ ಬೆಲೆ ಇದಾಗಿದೆ. ಜನವರಿ 2023 ರಲ್ಲಿ, ಕೊಟುಮಚಗಿಯ ರೈತ ಶರಣಪ್ಪ 70,499 ರೂ.ಗಳನ್ನು ಪಡೆದಿದ್ದರು, ಆದರೆ ಚಂದ್ರು ಈಗ ತಮ್ಮ ಬೆಳೆಗೆ 74,099 ರೂ. ಬೆಲೆ ಪಡೆದಿದ್ದಾರೆ. ತಮ್ಮ ಬೆಳೆಗೆ ದಾಖಲೆಯ ಬೆಲೆ ಸಿಕ್ಕಿದ್ದಕ್ಕೆ ಲಕ್ಕುಂಡಿಯ ಜನರಿಗೆ ಸಿಹಿತಿಂಡಿಗಳನ್ನು ವಿತರಿಸಿದರು.

ಈ ಹಿಂದೆ, 2020 ರಲ್ಲಿ ರೈತನೊಬ್ಬ ಕ್ವಿಂಟಲ್ ಮೆಣಸಿನಕಾಯಿಗೆ ದಾಖಲಾದ ಅತ್ಯಧಿಕ ಬೆಲೆ 41,101 ರೂ.ಗಳಾಗಿದ್ದು. ನವೆಂಬರ್ 2022 ರಲ್ಲಿ, ಮಾರುಕಟ್ಟೆ ಬೆಲೆಗಳು ಸುಮಾರು 45,000 ರೂ ಗಳಿಸಿದ್ದರು. ಆದರೆ 2023 ರಲ್ಲಿ, ಹಲವಾರು ರೈತರು ವರದಿ ಮಾಡಿದಂತೆ, ಅವು 70,499 ರೂ.ಗೆ ಮಾರಾಟವಾಗಿತ್ತು ಎನ್ನಲಾಗಿದೆ.

ಹಾವೇರಿ, ಧಾರವಾಡ ಮತ್ತು ಗದಗ ಪ್ರದೇಶಗಳಲ್ಲಿ ಬೆಳೆಯುವ ಬ್ಯಾಡಗಿ ಮೆಣಸಿನಕಾಯಿಗೆ ಗಣನೀಯ ಮಾರುಕಟ್ಟೆ ಬೇಡಿಕೆಯಿದೆ. ನಾನು ಉತ್ತಮ ಬೆಲೆಯನ್ನು ನಿರೀಕ್ಷಿಸಿದ್ದೆ, ಆದರೆ ಅಂತಹ ದಾಖಲೆಯ ಮೊತ್ತವನ್ನು ಎಂದಿಗೂ ಊಹಿಸಿರಲಿಲ್ಲ.

ಈ ಹಣದ ಬಳಕೆಗೆ ನಾನು ಇನ್ನೂ ಒಂದು ಯೋಜನೆಯನ್ನು ರೂಪಿಸಿಲ್ಲ, ಆದರೆ ನಾನು ಅದನ್ನು ವಿವೇಚನೆಯಿಂದ ಬಳಸಲು ಉದ್ದೇಶಿಸಿದ್ದೇನೆ, ವಿಶೇಷವಾಗಿ ಸತತ ಬೆಳೆ ನಷ್ಟಗಳನ್ನು ಸಹಿಸಿಕೊಂಡ ನಂತರ ನನಗೆ ಉತ್ತಮ ಬೆಲೆ ಸಿಕ್ಕಿದೆ. ನನ್ನ ಸ್ನೇಹಿತರು ಸಿಹಿತಿಂಡಿಗಳನ್ನು ತಂದರು, ಮತ್ತು ನಾವು ನನ್ನ ಬೆಳೆಗೆ ಪೂಜೆ ಸಲ್ಲಿಸಿದೆವು ಎಂದು ಚಂದ್ರು ಚಾಬರಭಾವಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

India-US ವ್ಯಾಪಾರ ಒಪ್ಪಂದ 'ಮೇಕ್ ಇನ್ ಇಂಡಿಯಾ' ಬಲಪಡಿಸುತ್ತದೆ, ಉದ್ಯೋಗಗಳನ್ನು ಸೃಷ್ಟಿಸುತ್ತದೆ: ಪ್ರಧಾನಿ ಮೋದಿ

India-US ಮಧ್ಯಂತರ ವ್ಯಾಪಾರ ಒಪ್ಪಂದ; ಭಾರತದ ಮೇಲಿನ ಸುಂಕ ಶೇ.18ಕ್ಕೆ ಇಳಿಕೆ

ICC Men’s T20 World Cup 2026: ಸತತ 2ನೇ ಬಾರಿಗೆ ಯಾವ ತಂಡವೂ ಟ್ರೋಫಿ ಗೆದ್ದಿಲ್ಲ; ಅಸಾಧ್ಯವಾದುದ್ದನ್ನು ಸಾಧಿಸುತ್ತಾ ಭಾರತ?

ತಿರುಪತಿ ಲಡ್ಡು ತಯಾರಿಕೆ ತುಪ್ಪದಲ್ಲಿ ‘ಬಾತ್‌ರೂಮ್ ಕ್ಲೀನಿಂಗ್ ಕೆಮಿಕಲ್ಸ್’ ಬಳಕೆ: ಚಂದ್ರಬಾಬು ನಾಯ್ಡು

ಬರಾಕ್‌ ಒಬಾಮಾ ದಂಪತಿಗಳ ಕೋತಿಗೆ ಹೋಲಿಸಿದ ಟ್ರಂಪ್‌; ಆಕ್ರೋಶ ಬೆನ್ನಲ್ಲೇ ಪೋಸ್ಟ್‌ ಡಿಲೀಟ್‌, ಕ್ಷಮೆಯಾಚನೆಗೆ ನಕಾರ

SCROLL FOR NEXT