ಘಟನೆಯ ನಂತರ ಹೋಟೆಲ್ ಸಿಬ್ಬಂದಿ ವಿಡಿಯೋ ಕರೆ ಮೂಲಕ ಸಂತ್ರಸ್ತೆಗೆ ಕ್ಷಮೆಯಾಚಿಸಿದ್ದಾರೆ.  
ರಾಜ್ಯ

ಬೆಂಗಳೂರು: ಅನುಚಿತವಾಗಿ ವರ್ತಿಸಿದ ಫೈವ್ ಸ್ಟಾರ್ ಹೋಟೆಲ್ ಮಸಾಜ್ ಥೆರಪಿಸ್ಟ್ ವಿರುದ್ಧ ಕೆನಡಾ ಮಹಿಳೆ ದೂರು!

ಸೂರ್ಯ ಪ್ರತಾಪ್ ರಾಣಾ ಎಂಬ ವ್ಯಕ್ತಿ ಮಹಿಳೆ ಮೇಲಿನ ದೌರ್ಜನ್ಯದ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರು: ಕೆನಡಾ ಸರ್ಕಾರದ ಪ್ರತಿನಿಧಿ ಎಂದು ಹೇಳಲಾಗುವ 44 ವರ್ಷದ ಕೆನಡಾದ ಪ್ರಜೆಯೊಬ್ಬರು, ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ (ಸಿಬಿಡಿ) ನಲ್ಲಿರುವ ಪಂಚತಾರಾ ಐಷಾರಾಮಿ ಹೋಟೆಲ್‌ನ ಥೆರಪಿಸ್ಟ್ ಬಳಿ ಮಸಾಜ್‌ಗೆ ಹೋಗಿದ್ದಾಗ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದಾರೆ.

ಕೆನಡಾದ ಮಹಿಳೆ ಸಮ್ಮೇಳನದಲ್ಲಿ ಭಾಗವಹಿಸಲೆಂದು ನಗರಕ್ಕೆ ಬಂದಿದ್ದರು. ಸೂರ್ಯ ಪ್ರತಾಪ್ ರಾಣಾ ಎಂಬ ವ್ಯಕ್ತಿ ಮಹಿಳೆ ಮೇಲಿನ ದೌರ್ಜನ್ಯದ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಹೋಟೆಲ್ ಸಿಬ್ಬಂದಿಯೊಂದಿಗೆ ಮಾತನಾಡುವಾಗ ರೆಕಾರ್ಡ್ ಮಾಡಿದ ವಿಡಿಯೋ ಜೊತೆಗೆ ಅವರು ಶುಕ್ರವಾರ ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಘಟನೆಯ ನಿಖರವಾದ ಸ್ಥಳ ಮತ್ತು ಸಂಪರ್ಕ ಸಂಖ್ಯೆಯನ್ನು ಒದಗಿಸುವಂತೆ ಕೋರಿದ್ದಾರೆ.

'ಮಸಾಜ್ ಅವಧಿಯಲ್ಲಿ ಅವರು ಅನುಚಿತವಾಗಿ ವರ್ತಿಸಿದರು. ವೃತ್ತಿಪರ ಮಿತಿಗಳನ್ನು ಮೀರಿದರು. ಒಂದು ಹಂತದಲ್ಲಿ ಬಾಗಿಲು ತೆರೆದುಬಿಟ್ಟರು. ಆಗ ಮೈಮೇಲೆ ಬಟ್ಟೆಗಳು ಇರಲಿಲ್ಲ. ಇದರಿಂದಾಗಿ ತೀವ್ರ ತೊಂದರೆ ಮತ್ತು ಅವಮಾನ ಉಂಟಾಯಿತು. ಈ ಕುರಿತು ಅವರು ಮಾತನಾಡಿದಾಗ, ಮೌನದಿಂದಿರಲು ಬೆದರಿಕೆ ಹಾಕಿದ್ದಾರೆ. ಆಘಾತಕ್ಕೊಳಗಾದ ಅವರು ಸಹಾಯ ಕೋರಿದರು. ಹೋಟೆಲ್ ಮ್ಯಾನೇಜ್‌ಮೆಂಟ್ ಈ ಘಟನೆಯನ್ನು ಮುಚ್ಚಿಹಾಕಲು ಯತ್ನಿಸಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ. ನಾವು ಆರೋಪಿ ಜೊತೆಗೆ ಹೋಟೆಲ್ ಮ್ಯಾನೇಜ್‌ಮೆಂಟ್ ವಿರುದ್ಧ ಮೊಕದ್ದಮೆ ಹೂಡಲಿದ್ದೇವೆ' ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

'ಈ ಘಟನೆ ಎರಡು ದಿನಗಳ ಹಿಂದೆ ನಡೆದಿತ್ತು. ಆರೋಪಿ ವಿರುದ್ಧ ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲವಂತದ ಪ್ರಕರಣ ದಾಖಲಿಸಲಾಗಿದೆ' ಎಂದು ಡಿಸಿಪಿ (ಕೇಂದ್ರ) ಅಕ್ಷಯ್ ಎಂ ಹಕೆ ಹೇಳಿದ್ದಾರೆ.

ತನಿಖೆ ಕುರಿತು ಮಾಹಿತಿ ಹೊಂದಿರುವ ಮತ್ತೊಬ್ಬ ಅಧಿಕಾರಿ, ಹೋಟೆಲ್ ಸಂತ್ರಸ್ತೆಗೆ ₹7 ಸಾವಿರವನ್ನು ಮರುಪಾವತಿಸಿದೆ. ಮಸಾಜ್‌ಗಾಗಿ ₹10,000 ಪಾವತಿಸಿರುವುದಾಗಿ ಸಂತ್ರಸ್ತೆ ಹೇಳಿಕೊಂಡಿದ್ದಾರೆ. ಈ ಸಂಬಂಧ ಯಾರನ್ನೂ ಬಂಧಿಸಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!