ವಿಧಾನಸೌಧ 
ರಾಜ್ಯ

ವಿಧಾನಸೌಧಕ್ಕೆ ಚಿನ್ನ-ಹಣ ಬಂದಿದ್ದು ಹೇಗೆ..? ತನಿಖೆಗೆ ರಾಜ್ಯ ಸರ್ಕಾರ ಆದೇಶ

ವಿಧಾನಸೌಧದ ಪ್ರವೇಶ ದ್ವಾರಗಳಿಂದ ಬ್ಯಾಗ್ ನ್ನು ಹೇಗೆ ತೆಗೆದುಕೊಂಡು ಹೋಗಲಾಯಿತು? ಯಾವ ದ್ವಾರದ ಮೂಲಕ ಒಳಗೆ ತೆಗೆದುಕೊಂಡು ಹೋಗಿದ್ದಾರೆ. ಅದರಲ್ಲಿಯೂ ಸಚಿವರ ಕಚೇರಿಗೆ ಬ್ಯಾಗ್ ಹೋಗುತ್ತದೆ ಎಂದರೆ ಪತ್ತೆ ಹಚ್ಚಬೇಕಲ್ವಾ?

ಬೆಂಗಳೂರು: ವಿಧಾನಸೌಧದ ಸಚಿವರ ಕಚೇರಿ ಬಳಿ ಚಿನ್ನಾಭರಣ ಕಳ್ಳತನ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಆದರೆ ಭದ್ರತೆ ನಡುವೆಯೂ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಬರಲು ಹೇಗೆ ಸಾಧ್ಯ ಎಂಬುದರ ಕುರಿತು ಪ್ರಶ್ನೆಗಳು ಮೂಡಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.

ಸದಾಶಿವನಗರದ ನಿವಾಸದ ಮುಂದೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಅವರು, ವಿಧಾನಸೌಧದ ಪ್ರವೇಶ ದ್ವಾರಗಳಿಂದ ಬ್ಯಾಗ್ ನ್ನು ಹೇಗೆ ತೆಗೆದುಕೊಂಡು ಹೋಗಲಾಯಿತು? ಯಾವ ದ್ವಾರದ ಮೂಲಕ ಒಳಗೆ ತೆಗೆದುಕೊಂಡು ಹೋಗಿದ್ದಾರೆ. ಅದರಲ್ಲಿಯೂ ಸಚಿವರ ಕಚೇರಿಗೆ ಬ್ಯಾಗ್ ಹೋಗುತ್ತದೆ ಎಂದರೆ ಪತ್ತೆ ಹಚ್ಚಬೇಕಲ್ವಾ? ಹೀಗಾಗಿ ತನಿಖೆಗೆ ಆದೇಶಿಸಲಾಗಿದ್ದು, ಇಂದು ಅಥವಾ ನಾಳೆ ವರದಿ ಕೈ ಸೇರಲಿದೆ. ಆ ವರದಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಳ್ಳತನವಾಗಿರುವುದು ಗಂಭೀರವಾದ ವಿಚಾರ. ಆದರೆ, ಬೆಲೆಬಾಳುವ ವಸ್ತು ವಿಧಾನಸೌಧದ ಒಳಗೆ ಹೋಗಿರುವುದು ಮತ್ತಷ್ಟು ಗಂಭೀರ ವಿಚಾರವಾಗಿದೆ. ಯಾರಿಗಾದರೂ ಕೊಡಲು ಹೋಗಿದ್ದರೋ ಅಥವಾ ಇನ್ನೇನಾದಪೂ ಇದೆಯೋ ಎಂಬುದು ಪೊಲೀಸರ ತನಿಖೆಯ ಮೂಲಕ ಬೆಳಕಿಗೆ ಬರತ್ತದೆ ಎಂದು ತಿಳಿಸಿದರು.

ಶಾಸಕ ಬೈರತಿ ಬಸವರಾಜ್ ಅವರಿಗೆ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ಕೊಲೆ ಪ್ರಕರಣ ಸಂಬಂಧ ಸಲ್ಲಿಸಲಾಗಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಅವರಾಗಿಯೇ ಬಂದು ಸರೆಂಡರ್ ಆದರೆ ಒಳ್ಳೆಯದು. ಇಲ್ಲವಾದ್ರೆ ಪೊಲೀಸರು ಬಂಧಿಸಲು ಶೋಧ ನಡೆಸುತ್ತಾರೆ ಎಂದು ಹೇಳಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್​ ಆಡಲು ಅನುಮತಿ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಿವೃತ್ತ ನ್ಯಾ. ಕುನ್ಹಾ ಸಮಿತಿಯ ವರದಿಯಲ್ಲಿ ನೀಡಲಾಗಿದ್ದ ಶಿಫಾರಸುಗಳು ಅನುಷ್ಠಾನವಾಗಿದೆಯಾ ಎಂಬುದರ ಕುರಿತು ಪರಿಶೀಲಿಸಲಾಗುವುದು. ಇದಕ್ಕಾಗಿಯೇ ಸಮಿತಿ ರಚಿಸಲಾಗಿದೆ. ಈ ಬಗ್ಗೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಅಲ್ಪಾವಧಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಂಡಿದ್ದರೆ ಮಾತ್ರ ಅನುಮತಿ ನೀಡುವ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಕಾಲ್ತುಳಿತದಲ್ಲಿ ಅಮಾನತು ಆಗಿದ್ದ ಪೊಲೀಸ್ ಅಧಿಕಾರಿಗಳನ್ನು ಬೇರೆ ಕಡೆಗೆ ವರ್ಗಾಯಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.

ಫೆಬ್ರುವರಿ 4ರಂದು ದೂರುದಾರ ಕೆಲಸ ನಿಮಿತ್ತ ವಿಧಾನಸೌಧದ 3ನೇ ಮಹಡಿಯಲ್ಲಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಕಚೇರಿಗೆ ಬಂದಿದ್ದರು. ಭೇಟಿಗೆ ಸಚಿವರು ಸಿಗದ ಕಾರಣ ವಾಪಸ್ ಆಗಿದ್ದರು. ಈ ವೇಳೆ, ತೆಗೆದುಕೊಂಡು ಬಂದಿದ್ದ ಚೀಲವನ್ನು ಮರೆತು ಹೋಗಿದ್ದರು. ಮಾರನೇ ದಿನ ವಿಧಾನಸೌಧಕ್ಕೆ ಬಂದು ನೋಡಿದಾಗ ಕೈ ಚೀಲ ಕಾಣೆಯಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ತಮಗೆ ಗೊತ್ತಿಲ್ಲ ಎಂದು ಕಚೇರಿ ಸಿಬ್ಬಂದಿ ಉತ್ತರಿಸಿದ್ದರು. ಚೀಲದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ ಹಾಗೂ ನಗದಿರುವ ವಿಚಾರ ತಿಳಿಸಿ ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ಕಾರ್ಯಪ್ರವೃತ್ತರಾದ ಪೊಲೀಸರು ವಿಧಾನಸೌಧ ಕಾರಿಡಾರ್​ನ ಸಿಸಿಟಿವಿ ಪರಿಶೀಲಿಸಿದಾಗ ಸಿಬ್ಬಂದಿಯು ಸಚಿವರ ಕಚೇರಿಯ ಬಾಗಿಲಿಗೆ ಬೀಗ ಹಾಕಿದ ಬಳಿಕ ಇಡಲಾಗಿದ್ದ ಕೈ ಚೀಲ ತೆಗೆದುಕೊಂಡು ಹೋಗುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ತನಿಖೆ ಚುರುಕುಗೊಳಿಸಿ ಸಿಬ್ಬಂದಿಯನ್ನು ಬಂಧಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಮುಹೂರ್ತ ಫಿಕ್ಸ್; ಹೀಗಿದೆ ನಾಡಹಬ್ಬದ ವೇಳಾ ಪಟ್ಟಿ...

ಆರ್ ಎಸ್ಎಸ್ ಸಭೆ ನಡೆದಾಗಲೆಲ್ಲಾ ಅನೇಕ ಅನಾಹುತಗಳಾಗಿವೆ- ಬಿಕೆ ಹರಿಪ್ರಸಾದ್

2029ರ ಲೋಕಸಭೆ ಚುನಾವಣೆಯಿಂದಲೇ 'ಒಂದು ರಾಷ್ಟ್ರ–ಒಂದು ಚುನಾವಣೆ' ಜಾರಿ ಸಾಧ್ಯತೆ: JPC ಮುಖ್ಯಸ್ಥ ಪಿ.ಪಿ. ಚೌಧರಿ

ಮೊದಲ ಮಹಿಳಾ ಟೆಸ್ಟ್ ಪಂದ್ಯ: ಲಾರ್ಡ್ಸ್ ನಲ್ಲಿ ಅಪರೂಪದ ದಾಖಲೆ ಬರೆದ ಸ್ಮೃತಿ ಮಂಧಾನಾ! ಆಕರ್ಷಕ ಅರ್ಧಶತಕ

ಸುಪ್ರೀಂಕೋರ್ಟ್ ನಲ್ಲಿ ಹೈಡ್ರಾಮ: ಕೋರ್ಟ್ ಹಾಲ್ ನಲ್ಲಿ ಕಾಗದ ಪತ್ರ ಎಸೆದು, CJI ನಿಂದಿಸಿದ ದೂರುದಾರ!