ನಶಾ ಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್, ಅಂಗಾಂಗ ದಾನ ಅಭಿಯಾನ ಕಾರ್ಯಕ್ರಮದಲ್ಲಿ ದಿನೇಶ್ ಗುಂಡೂರಾವ್, ಪರಮೇಶ್ವರ್ ಹಾಗೂ ಬಸವರಾಜ ಹೊರಟ್ಟಿ 
ರಾಜ್ಯ

‘ನಶೆ ಮುಕ್ತ ಕರ್ನಾಟಕ’: ವಿದ್ಯಾರ್ಥಿ ವೀಸಾ ದುರುಪಯೋಗಪಡಿಸಿಕೊಂಡು ಮಾದಕ ಚಟುವಟಿಕೆಯಲ್ಲಿ ಭಾಗಿಯಾಗುವ ವಿದೇಶಿಗರ ವಿರುದ್ಧ ಕಠಿಣ ಕ್ರಮ; ಸರ್ಕಾರ

ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯ ಸಹಕಾರದೊಂದಿಗೆ ಅವಧಿ ಮೀರಿದ ವೀಸಾ ಹೊಂದಿರುವವರನ್ನು ಪತ್ತೆಹಚ್ಚಿ ಗಡಿಪಾರು ಮಾಡಲಾಗುತ್ತದೆ.

ಬೆಂಗಳೂರು: ವಿದ್ಯಾರ್ಥಿ ವೀಸಾಗಳನ್ನು ದುರುಪಯೋಗಪಡಿಸಿಕೊಂಡು ಮಾದಕ ಚಟುವಟಿಕೆಯಲ್ಲಿ ತೊಡಗಿರುವ ವಿದೇಶಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಬುಧವಾರ ಹೇಳಿದ್ದಾರೆ.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ದಿಶಾಭೋದ್‌ ಫೌಂಡೇಶನ್‌, ನಾರ್ಕೋಟಿಕ್ಸ್‌ ಕಂಟ್ರೋಲ್‌ ಬ್ಯೂರೊ ಬುಧವಾರ ಆಯೋಜಿಸಿದ್ದ ನಶಾ ಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್, ಅಂಗಾಂಗ ದಾನ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿ ವೀಸಾಗಳನ್ನು ದುರುಪಯೋಗಪಡಿಸಿಕೊಂಡು ಮಾದಕ ಚಟುವಟಿಕೆಯಲ್ಲಿ ತೊಡಗಿರುವ ವಿದೇಶಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಅಂತಹವರನ್ನು ಗುರುತಿಸಿ ಬಂಧಿಸಲಾಗುತ್ತಿದೆ. ಅವರಿಗೆ ವಸತಿ ಒದಗಿಸುವವರ ಮೇಲೂ ನಿಗಾ ಇದ್ದು, ವಿದ್ಯಾರ್ಥಿಗಳನ್ನು 24x7 ಮೇಲ್ವಿಚಾರಣೆಯಲ್ಲಿ ಇಡಲಾಗಿದೆ. ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯ ಸಹಕಾರದೊಂದಿಗೆ ಅವಧಿ ಮೀರಿದ ವೀಸಾ ಹೊಂದಿರುವವರನ್ನು ಪತ್ತೆಹಚ್ಚಿ ಗಡಿಪಾರು ಮಾಡಲಾಗುತ್ತದೆ ಎಂದು ತಿಳಿಸಿದರು,

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಸಹಪಾಠಿಗಳ ಒತ್ತಡ ಅಥವಾ ಕುತೂಹಲದಿಂದ ಆರಂಭವಾಗುವ ವ್ಯಸನ, ಮುಂದಿನ ಹಂತದಲ್ಲಿ ಗಂಭೀರ ಅವಲಂಬನೆಯಾಗಿ ಪರಿಣಮಿಸುತ್ತದೆ. ಇದನ್ನು ಕೇವಲ ಕಾನೂನು ಮೂಲಕವೇ ತಡೆಹಿಡಿಯಲು ಸಾಧ್ಯವಿಲ್ಲ. ಸಾರ್ವಜನಿಕ ಜಾಗೃತಿ ಹಾಗೂ ಪೋಷಕರ ನಿಗಾವೂ ಅತ್ಯಗತ್ಯವಿದೆ ಎಂದು ಹೇಳಿದರು. ಇದೇ ವೇಳೆ ಕರ್ನಾಟಕದಾದ್ಯಂತ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಈ ಕಾರ್ಯಕ್ರಮವನ್ನು ಜಾರಿಗೆ ತರಬೇಕೆಂದು ಕರೆ ನೀಡಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ಬಿ.ಸಿ. ಭಗವಾನ್ ಮಾತನಾಡಿ, 250 ಕಾಲೇಜುಗಳಿಂದ 40,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಾದಕವಸ್ತು ವಿರೋಧಿ ಅಭಿಯಾನದಲ್ಲಿ ಭಾಗಿಯಾಗಿದ್ದು, 7,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ವಿಶ್ವವಿದ್ಯಾಲಯದ 'ಧಾತ್ರು' ಉಪಕ್ರಮದಡಿಯಲ್ಲಿ ಅಂಗಾಂಗ ದಾನ ಮಾಡುವ ಪ್ರತಿಜ್ಞೆ ಮಾಡಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಾಂಗ್ಲಾದೇಶ ಐತಿಹಾಸಿಕ ಸಂಸತ್ ಚುನಾವಣೆ: ಮತದಾನ ಪ್ರಗತಿಯಲ್ಲಿ, 50 ಲಕ್ಷ ಯುವ ಮತದಾರರು-Video

ರಾಜಕೀಯ ದಂಗೆ, ಶೇಖ್ ಹಸೀನಾ ನಿರ್ಗಮನ ಬಳಿಕ ಇಂದು ಬಾಂಗ್ಲಾದೇಶ ಚುನಾವಣೆ: 51 ಪಕ್ಷಗಳು ಕಣದಲ್ಲಿ, ಭವಿಷ್ಯ ನಿರ್ಧರಿಸುತ್ತಾರೆಯೇ Gen-Z ?

ನಾಳೆಯಿಂದ ಹಂಪಿ ಉತ್ಸವದಲ್ಲಿ ಮೊದಲ ಬಾರಿ ಡ್ರೋನ್ ಪ್ರದರ್ಶನ

ವಿಧಾನಸೌಧಕ್ಕೆ ಚಿನ್ನ-ಹಣ ಬಂದಿದ್ದು ಹೇಗೆ..? ತನಿಖೆಗೆ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ತಂದೆ, ದಂತವೈದ್ಯೆ ತಾಯಿಯನ್ನು ಕೊಂದ ಟೆಕ್ಕಿ!

SCROLL FOR NEXT