ಎಂಕೆ ಸ್ಟಾಲಿನ್ 
ರಾಜ್ಯ

ಚುನಾವಣೆ ಹೊಸ್ತಿಲಲ್ಲೇ TN ಮಹಿಳೆಯರಿಗೆ ಬಂಪರ್: 1.31 ಕೋಟಿ ಖಾತೆಗಳಿಗೆ 5 ಸಾವಿರ ಜಮೆ; ಮತ್ತೆ ಅಧಿಕಾರಕ್ಕೆ ಬಂದರೆ 2 ಸಾವಿರ - ಸಿಎಂ ಸ್ಟಾಲಿನ್

ಚುನಾವಣೆ ಹೊಸ್ತಿಲಲ್ಲೇ ತಮಿಳುನಾಡಿನ 1.31 ಕೋಟಿ ಮಹಿಳೆಯ ಬ್ಯಾಂಕ್ ಖಾತೆಗಳಿಗೆ ಸಿಎಂ ಸ್ಟಾಲಿನ್ ಸರ್ಕಾರ 5,000 ರೂ. ಜಮೆ ಮಾಡಿದ್ದು ಮತ್ತೆ ಅಧಿಕಾರಕ್ಕೆ ಬಂದರೆ 2 ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದೆ.

ಚೆನ್ನೈ: ಚುನಾವಣೆ ಹೊಸ್ತಿಲಲ್ಲೇ ಕಲೈಗ್ನಾರ್ ಮಹಿಳಾ ಹಕ್ಕುಗಳ ಯೋಜನೆಯಡಿ ತಮಿಳುನಾಡಿನ 1.31 ಕೋಟಿ ಮಹಿಳೆಯ ಬ್ಯಾಂಕ್ ಖಾತೆಗಳಿಗೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸರ್ಕಾರ 5,000 ರೂಪಾಯಿ ವರ್ಗಾವಣೆ ಮಾಡಿದ್ದು ಮತ್ತೆ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವುದಾಗಿ ಡಿಎಂಕೆ ಸರ್ಕಾರ ಘೋಷಿಸಿದೆ. ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ಕಂತುಗಳಿಗಾಗಿ 3,000 ರೂಪಾಯಿಯನ್ನು ಈಗಾಗಲೇ ವಿತರಿಸಲಾಗಿದೆ. ಇದಲ್ಲದೆ, 2,000 ಅನ್ನು ಬೇಸಿಗೆ ವಿಶೇಷ ಪ್ಯಾಕೇಜ್ ಆಗಿ ನೀಡಲಾಗಿದ್ದು ಒಟ್ಟಾರೆ ಪ್ರತಿಯೊಬ್ಬ ಫಲಾನುಭವಿ ಮಹಿಳೆ ಒಟ್ಟು 5,000 ರೂಪಾಯಿ ಪಡೆದಿದ್ದಾರೆ.

ಚುನಾವಣೆಯನ್ನು ಉಲ್ಲೇಖಿಸಿ ಕೆಲವರು ಯೋಜನೆಯ ಹಣವನ್ನು ತಡೆಹಿಡಿಯಲು ಬಯಸಿದ್ದರು. ಆದರೆ ಮಹಿಳೆಯರಿಗೆ ಯಾವುದೇ ಅನಾನುಕೂಲವಾಗದಂತೆ ತಮ್ಮ ಸರ್ಕಾರವು ಹಣವನ್ನು ಮೊದಲೇ ವರ್ಗಾಯಿಸಿದೆ ಎಂದು ಸಿಎಂ ಸ್ಟಾಲಿನ್ ಹೇಳಿದರು. ದ್ರಾವಿಡ ಮುನ್ನೇತ್ರ ಕಳಗಂ (DMK) ಮತ್ತೆ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ನೀಡಲಾಗುತ್ತಿದ್ದ 1,000 ಮಾಸಿಕ ಸಹಾಯಧನವನ್ನು 2,000ಕ್ಕೆ ಹೆಚ್ಚಿಸಲಾಗುವುದು ಎಂದು ಸ್ಟಾಲಿನ್ ಭರವಸೆ ನೀಡಿದರು.

ತಮಿಳುನಾಡು ವಿಧಾನಸಭೆಯಲ್ಲಿ ಒಟ್ಟು 234 ಸ್ಥಾನಗಳಿದ್ದು 2026ರಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಸ್ಟಾಲಿನ್ ಅವರ ಪಕ್ಷ ಕೊನೆಯ ಬಾರಿಗೆ 2021ರಲ್ಲಿ ಬಹುಮತ ಗಳಿಸಿತು. ಚುನಾವಣೆಯಲ್ಲಿ ಸೋಲುವ ಭಯದಿಂದ ಸ್ಟಾಲಿನ್ ಈ ನಡೆ ಕೈಗೊಂಡಿದ್ದಾರೆ ಎಂದು ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್ ಆರೋಪಿಸಿದರು. ರಾಜ್ಯ ಸರ್ಕಾರವು ಅನಗತ್ಯವಾಗಿ ಕೇಂದ್ರ ಸರ್ಕಾರವನ್ನು ದೂಷಿಸುತ್ತಿದೆ ಎಂದು ಸೌಂದರರಾಜನ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಪ್ಸ್ಟೀನ್ ದಾಖಲೆಗಳ ಉಲ್ಲೇಖ, ಹರ್ದೀಪ್ ಪುರಿ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆ: ಮಾರ್ಚ್ 9 ರವರೆಗೆ ಲೋಕಸಭೆ, ರಾಜ್ಯಸಭೆ ಕಲಾಪ ಮುಂದೂಡಿಕೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯಗಳಿಗಷ್ಟೇ ತಾತ್ವಿಕ ಒಪ್ಪಿಗೆ, ಸಂಭ್ರಮಾಚರಣೆಗೆ ಬ್ರೇಕ್?: ಪರಮೇಶ್ವರ ಹೇಳಿದ್ದೇನು?

T20 World Cup 2026: ಆಸ್ಟ್ರೇಲಿಯಾ ವಿರುದ್ಧ ಜಿಂಬಾಬ್ವೆಗೆ ಜಯ; 19 ವರ್ಷಗಳಲ್ಲಿ ಮೊದಲ ಬಾರಿಗೆ ಕಾಂಗರೂಗಳನ್ನು ಸೋಲಿಸಿದ ಚೆವ್ರಾನ್‌ಗಳು!

T20 WC: 19 ವರ್ಷಗಳ ನಂತರ ಆಸೀಸ್ ಅನ್ನು ಸೋಲಿಸಿ ಜಿಂಬಾಬ್ವೆ ಮತ್ತೆ ಇತಿಹಾಸ ಸೃಷ್ಟಿ: 3ನೇ ಸ್ಥಾನಕ್ಕೆ ಕುಸಿದ Australia!

ಅಣೆಕಟ್ಟು ಸುರಕ್ಷತೆಯಲ್ಲಿ ಕರ್ನಾಟಕ ದೇಶಕ್ಕೆ ಮಾದರಿ; ಕೇಂದ್ರ ಅನುಮತಿ ಕೊಟ್ಟರೆ ಮೇಕೆದಾಟು, UKP ಯೋಜನೆ ಜಾರಿ: ಡಿ.ಕೆ ಶಿವಕುಮಾರ್

SCROLL FOR NEXT