ರಾಜ್ಯ

ಕಲುಷಿತ ನೀರು: ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ಜಲಮಾಲಿನ್ಯ ಗಮನಾರ್ಹ ಇಳಿಕೆ

ರಾಸಾಯನಿಕ ಮಾಲಿನ್ಯ ಪ್ರಕರಣಗಳು 2023-24ರಲ್ಲಿ 24,917 ಇದ್ದವು; 2024-25ರಲ್ಲಿ 17,261ಕ್ಕೆ ಇಳಿಕೆಯಾಗಿ, 2025-26ರಲ್ಲಿ (ಇಲ್ಲಿಯವರೆಗೆ) 10,911ಕ್ಕೆ ಇಳಿಕೆಯಾಗಿದೆ.

ಮಂಗಳೂರು: ಕರ್ನಾಟಕದ ಕುಡಿಯುವ ನೀರಿನ ಮಾಲಿನ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಾಕಷ್ಟು ಇಳಿಕೆಯಾಗಿದೆ ಎಂದು ಫೆಬ್ರವರಿ 12ರಂದು ಕೇಂದ್ರ ಜಲಶಕ್ತಿ ಸಚಿವಾಲಯ ಲೋಕಸಭೆಯಲ್ಲಿ ಮಂಡಿಸಿದ ಮಾಹಿತಿಯಲ್ಲಿ ತಿಳಿಸಲಾಗಿದೆ.

ರಾಸಾಯನಿಕ ಮಾಲಿನ್ಯ ಪ್ರಕರಣಗಳು 2023-24ರಲ್ಲಿ 24,917 ಇದ್ದವು; 2024-25ರಲ್ಲಿ 17,261ಕ್ಕೆ ಇಳಿಕೆಯಾಗಿ, 2025-26ರಲ್ಲಿ (ಇಲ್ಲಿಯವರೆಗೆ) 10,911ಕ್ಕೆ ಇಳಿಕೆಯಾಗಿದೆ. ಬ್ಯಾಕ್ಟೀರಿಯಾ ಮಾಲಿನ್ಯವು ಇನ್ನಷ್ಟು ತೀವ್ರವಾಗಿ ಇಳಿಕೆಯಾಗಿದೆ — 2023-24ರಲ್ಲಿ 4,670 ಇದ್ದದ್ದು, 2024-25ರಲ್ಲಿ 2,574ಕ್ಕೆ ಇಳಿದು, 2025-26ರಲ್ಲಿ ಇದುವರೆಗೆ ಕೇವಲ 452 ಪ್ರಕರಣಗಳು ಮಾತ್ರ ದಾಖಲಾಗಿವೆ.

ಮಾಲಿನ್ಯಗಳ ಪ್ರಕಾರ ಜಿಲ್ಲಾವಾರು ಪರಿಶೀಲನೆ ಮಾಡಿದಾಗ, ಸುಧಾರಣೆ ಕಂಡಿದ್ದರೂ ಕೆಲವು ಜಿಲ್ಲೆಗಳಲ್ಲಿ ಸಮಸ್ಯೆಗಳು ಮುಂದುವರಿದಿರುವುದು ಕಂಡುಬರುತ್ತದೆ. 2023-24ರಲ್ಲಿ ನೈಟ್ರೇಟ್ ಮತ್ತು ಫ್ಲೋರೈಡ್ ಮಾಲಿನ್ಯ ವ್ಯಾಪಕವಾಗಿತ್ತು. ನೈಟ್ರೇಟ್ ಮಾಲಿನ್ಯ ಹೆಚ್ಚು ಕಂಡುಬಂದ ಜಿಲ್ಲೆಗಳು: ಚಿಕ್ಕಬಳ್ಳಾಪುರ (563), ಚಿತ್ರದುರ್ಗ (504), ವಿಜಯಪುರ (340), ಮಂಡ್ಯ (316) ಮತ್ತು ತುಮಕೂರು (300). ಫ್ಲೋರೈಡ್ ಪ್ರಮಾಣ ಚಿತ್ರದುರ್ಗ (437), ಚಿಕ್ಕಬಳ್ಳಾಪುರ (389), ರಾಯಚೂರು (320) ಮತ್ತು ತುಮಕೂರು (211) ಜಿಲ್ಲೆಗಳಲ್ಲಿ ಹೆಚ್ಚು ಕಂಡುಬಂದಿತ್ತು.

ಸೂಕ್ಷ್ಮಜೀವ ಮಾಲಿನ್ಯ ಬೆಂಗಳೂರು ನಗರ (E. coli 338; ಒಟ್ಟು ಕೊಲಿಫಾರ್ಮ್ 444), ಚಿಕ್ಕಬಳ್ಳಾಪುರ (E. coli 404; ಒಟ್ಟು ಕೊಲಿಫಾರ್ಮ್ 838), ಮಂಡ್ಯ (E. coli 48; ಒಟ್ಟು ಕೊಲಿಫಾರ್ಮ್ 483) ಮತ್ತು ಹಾಸನ (E. coli 81; ಒಟ್ಟು ಕೊಲಿಫಾರ್ಮ್ 182) ಜಿಲ್ಲೆಗಳಲ್ಲಿ ಗಮನಾರ್ಹವಾಗಿತ್ತು.

2025-26ರ ಮಾಹಿತಿಯು ರಾಸಾಯನಿಕ ಹಾಗೂ ಬ್ಯಾಕ್ಟೀರಿಯಾ ಸಂಬಂಧಿತ ಗುಣಮಟ್ಟದ ವ್ಯತ್ಯಾಸಗಳಲ್ಲಿ ಇನ್ನಷ್ಟು ವೇಗವಾದ ಇಳಿಕೆಯನ್ನು ತೋರಿಸುತ್ತದೆ. ನೈಟ್ರೇಟ್‌ ಮಾದರಿಗಳ ಒಟ್ಟು ಸಂಖ್ಯೆ 2023-24ರಲ್ಲಿ 4,003 ಇತ್ತದು, 2024-25ರಲ್ಲಿ 3,129ಕ್ಕೆ ಇಳಿದು, 2025-26ರಲ್ಲಿ ಇದುವರೆಗೆ 2,224ಕ್ಕೆ ಕಡಿಮೆಯಾಗಿದೆ. ಫ್ಲೋರೈಡ್ ಪ್ರಕರಣಗಳು 2,269ರಿಂದ 1,647ಕ್ಕೆ ಮತ್ತು ನಂತರ 1,169ಕ್ಕೆ ಇಳಿಕೆಯಾಗಿದೆ.

ಬ್ಯಾಕ್ಟೀರಿಯಾ ಮಾಲಿನ್ಯದಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಈ ವರ್ಷ ಇದುವರೆಗೆ ರಾಜ್ಯದಲ್ಲಿ E. coli ಪ್ರಕರಣಗಳು 315ಕ್ಕೆ ಮತ್ತು ಒಟ್ಟು ಕೊಲಿಫಾರ್ಮ್ 333ಕ್ಕೆ ಇಳಿದಿವೆ. ಆದಾಗ್ಯೂ, ಕೆಲವು ಜಿಲ್ಲೆಗಳಲ್ಲಿ ಸಮಸ್ಯೆ ಇನ್ನೂ ಮುಂದುವರಿದಿದೆ. 2025-26ರಲ್ಲಿ ನೈಟ್ರೇಟ್ ಮಟ್ಟ ಮಂಡ್ಯ (336), ವಿಜಯಪುರ (264), ಕೊಪ್ಪಳ (285), ಬೆಳಗಾವಿ (230), ಚಿತ್ರದುರ್ಗ (214) ಮತ್ತು ಚಿಕ್ಕಬಳ್ಳಾಪುರ (212) ಜಿಲ್ಲೆಗಳಲ್ಲಿ ಹೆಚ್ಚು ಕಂಡುಬಂದಿದೆ.

ಫ್ಲೋರೈಡ್ ಮಾಲಿನ್ಯ ಚಿತ್ರದುರ್ಗ (241), ವಿಜಯಪುರ (171), ರಾಯಚೂರು (125) ಮತ್ತು ತುಮಕೂರು (100) ಜಿಲ್ಲೆಗಳಲ್ಲಿ ಮುಂದುವರಿದಿದೆ. ಒಟ್ಟಾರೆ ಪ್ರಮಾಣ ಕಡಿಮೆಯಾಗಿದ್ದರೂ, ಸೂಕ್ಷ್ಮಜೀವ ಮಾಲಿನ್ಯ ಬೀದರ (E. coli 48; ಕೊಲಿಫಾರ್ಮ್ 48), ಕಲಬುರಗಿ (64; 64), ಯಾದಗಿರಿ (53; 55) ಮತ್ತು ರಾಯಚೂರು (45; 45) ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದೆ.

ಇನ್ನೊಂದೆಡೆ, ದಕ್ಷಿಣ ಕನ್ನಡ, ಉಡುಪಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲವು ಭಾಗಗಳಲ್ಲಿ ಇತ್ತೀಚಿನ ವರ್ಷದ ಮಾಹಿತಿಯ ಪ್ರಕಾರ ಬಹುತೇಕ ಎಲ್ಲಾ ಮಾನದಂಡಗಳಲ್ಲಿ ಮಾಲಿನ್ಯ ಅತಿ ಕಡಿಮೆ ಅಥವಾ ಅಲ್ಪ ಪ್ರಮಾಣದಲ್ಲಿದೆ. ಬೆಂಗಳೂರು ನಗರದಲ್ಲಿ 2023-24ರಲ್ಲಿ ಹೆಚ್ಚಿನ ಸೂಕ್ಷ್ಮಜೀವ ಮಾಲಿನ್ಯ ಕಂಡುಬಂದಿದ್ದರೂ, 2024-25ರಲ್ಲಿ ಅದು ಕಡಿಮೆಯಾಗಿದ್ದು, 2025-26ರಲ್ಲಿ ಬಹುತೇಕ ಅಲ್ಪ ಮಟ್ಟಕ್ಕೆ ಇಳಿದಿದೆ. ಈ ವರ್ಷ ಕೆಲವೇ ರಾಸಾಯನಿಕ ಮಾನದಂಡಗಳಲ್ಲಿ ಮಾತ್ರ ವ್ಯತ್ಯಾಸ ವರದಿಯಾಗಿದೆ.

2024-25ರಲ್ಲಿ ಒಟ್ಟಾರೆ ಎಲ್ಲಾ ಮಾದರಿ ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ. ಆದಾಗ್ಯೂ, ಕೆಲವು ಜಿಲ್ಲೆಗಳಲ್ಲಿ ನೈಟ್ರೇಟ್ ಮಟ್ಟ ಇನ್ನೂ ಹೆಚ್ಚು ಇದೆ — ಚಿಕ್ಕಬಳ್ಳಾಪುರ (382), ವಿಜಯಪುರ (359), ಕೊಪ್ಪಳ (349), ಮಂಡ್ಯ (373), ಬೆಳಗಾವಿ (302) ಮತ್ತು ತುಮಕೂರು (198). ಫ್ಲೋರೈಡ್ ಮಾಲಿನ್ಯ ತುಮಕೂರು (248) ಮತ್ತು ಚಿತ್ರದುರ್ಗ (252) ಜಿಲ್ಲೆಗಳಲ್ಲಿ ಮುಂದುವರಿದಿದೆ. ಒಟ್ಟಾರೆ ಮಟ್ಟದಲ್ಲಿ ಕಡಿಮೆಯಾದರೂ, ಸೂಕ್ಷ್ಮಜೀವ ಮಾಲಿನ್ಯ ಮಂಡ್ಯ (E. coli 201), ಕೊಪ್ಪಳ (196), ಮೈಸೂರು (235) ಮತ್ತು ಕೋಲಾರ (E. coli 380) ಜಿಲ್ಲೆಗಳಲ್ಲಿ ಇನ್ನೂ ಕಂಡುಬರುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 World Cup, IND vs Pak: ಇಶಾನ್ ಕಿಶಾನ್ ಬ್ಯಾಟಿಂಗ್ ಅಬ್ಬರ; ಸ್ಪಿನ್ ಮೋಡಿಗೆ ಪಾಕ್ ತತ್ತರ, ಭಾರತಕ್ಕೆ 61 ರನ್ ಗೆಲುವು!

T20 World Cup 2026: ಸೂಪರ್ 8 ಹಂತಕ್ಕೆ ಭಾರತ ಲಗ್ಗೆ; ದೇಶಾದ್ಯಂತ ಸಂಭ್ರಮಾಚರಣೆ, ಗಣ್ಯರ ಶುಭಾಶಯ!

T20 World Cup 2026: 27 ಬಾಲ್ ಗಳಲ್ಲಿ ಅರ್ಧಶತಕ ಹೊಡೆದು, ಭಾರತದ ಸ್ಕೋರ್ ಹೆಚ್ಚಿಸಿದ ಇಶಾನ್ ಕಿಶಾನ್!

RSS ದೆವ್ವವಿದ್ದಂತೆ, ಬಿಜೆಪಿ ದೆವ್ವದ ನೆರಳು: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಚಿಕ್ಕಮಗಳೂರು: ತಾಯಿ ಬೈದಿದ್ದಕ್ಕೆ 7ನೇ ತರಗತಿ ಬಾಲಕಿ ಆತ್ಮಹತ್ಯೆ!

SCROLL FOR NEXT