ನೀರು ಹೊರಹಾಕಿದ ನಂತರ ಒಣಗಿದಂತೆ ಕಾಣುವ ಕೆರೆ  
ರಾಜ್ಯ

ಬೆಂಗಳೂರಿನ ಐತಿಹಾಸಿನ ಅಲಸೂರು ಕೆರೆ: 20 ವರ್ಷಗಳ ನಂತರ ಹೂಳೆತ್ತುವ ಕಾರ್ಯ ಆರಂಭ

ಸುಮಾರು ಎರಡು ದಶಕಗಳ ನಂತರ ಕೆರೆಯ ಸಂಪೂರ್ಣ ಡಿಸಿಲ್ಟಿಂಗ್ (ಹೂಳು ತೆಗೆಯುವ) ಕಾರ್ಯವನ್ನು ರಾಷ್ಟ್ರೀಯ ವಿಪತ್ತು ಶಮನ ನಿಧಿ (NDMF) ಅಡಿಯಲ್ಲಿ 4 ಕೋಟಿ ರೂಪಾಯಿ ಅನುದಾನದಿಂದ ಕೈಗೊಳ್ಳಲಾಗಿದೆ.

ಬೆಂಗಳೂರು: 108 ಎಕರೆ ವ್ಯಾಪ್ತಿಯ ಐತಿಹಾಸಿಕ ಅಲಸೂರು ಕೆರೆ ಬಹುತೇಕ ಒಣಗಿದಂತಾಗಿದೆ. ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಶನ್ (BCCC) ಇಂಜಿನಿಯರ್‌ಗಳು ಮುಖ್ಯ ಜಲಾಶಯ, ಸೆಡಿಮೆಂಟೇಶನ್ ಟ್ಯಾಂಕ್ ಹಾಗೂ ಕಲ್ಯಾಣಿ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಿರುವ ಹಿನ್ನೆಲೆಯಲ್ಲಿ ನೀರನ್ನು ಹೊರಹಾಕಲಾಗಿದೆ.

ಸುಮಾರು ಎರಡು ದಶಕಗಳ ನಂತರ ಕೆರೆಯ ಸಂಪೂರ್ಣ ಡಿಸಿಲ್ಟಿಂಗ್ (ಹೂಳು ತೆರವು) ಕಾರ್ಯವನ್ನು ರಾಷ್ಟ್ರೀಯ ವಿಪತ್ತು ಶಮನ ನಿಧಿ (NDMF) ಅಡಿಯಲ್ಲಿ 4 ಕೋಟಿ ರೂಪಾಯಿ ಅನುದಾನದಿಂದ ಕೈಗೊಳ್ಳಲಾಗಿದೆ. ಕೆಲಸ ಆರಂಭಿಸಲು ನೀರನ್ನು ಔಟ್‌ಲೆಟ್ ಮೂಲಕ ಬೇರೆಡೆಗೆ ಹರಿಸಲಾಗಿದೆ.

ಪ್ರಸ್ತುತ ಕೆರೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಯಿಂದ ದಿನಕ್ಕೆ 1.5 ಎಂಎಲ್‌ಡಿ ಶುದ್ಧೀಕೃತ ನೀರು ಬರುತ್ತಿದೆ. ಹೂಳು ತೆಗೆಯುವ ಕಾರ್ಯ ಪೂರ್ಣಗೊಳ್ಳುವವರೆಗೆ ಈ ನೀರನ್ನು ಪ್ರಮುಖ ಕಾಲುವೆಗೆ ವರ್ಗಾಯಿಸುವ ಬಗ್ಗೆ ಅಧ್ಯಯನ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಮುಂದಿನ ಎರಡು ವಾರಗಳಲ್ಲಿ ಹೂಳು ತೆಗೆಯುವಿಕೆ ಕಾರ್ಯ ಆರಂಭವಾಗಿ ಕೆರೆ ಸಂಪೂರ್ಣ ಖಾಲಿಯಾಗುತ್ತದೆ. ಮೀನುಗಾರಿಕೆ ಗುತ್ತಿಗೆದಾರರಿಗೆ ಉಳಿದ ಮೀನುಗಳನ್ನು ಸಾಗಿಸಲು ಸೂಚಿಸಲಾಗಿತ್ತು. ಪುನಶ್ಚೇತನ ಕಾರ್ಯ ಪೂರ್ಣವಾದ ನಂತರ ಮತ್ತೆ ಮೀನಿನ ಮರಿಗಳನ್ನು ಬಿಡಲಾಗುತ್ತದೆ ಎಂದು ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಶನ್ (BCCC) ಕೆರೆ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿಲ್ಪಾ ತಿಳಿಸಿದ್ದಾರೆ. ಅಭಿವೃದ್ಧಿ ಕಾರ್ಯದ ಅವಧಿಯನ್ನು ಪರಿಗಣಿಸಿ ಗುತ್ತಿಗೆ ಅವಧಿಯನ್ನು ವಿಸ್ತರಿಸಲಾಗುತ್ತದೆ ಎಂದು ಅವರು ಹೇಳಿದರು.

ಕಳೆದ 14 ವರ್ಷಗಳಿಂದ ಬೆಂಗಳೂರು ಮೀನು ಉತ್ಪನ್ನ ಮತ್ತು ಮಾರಾಟಗಾರ ಸಂಘದ ಅಡಿಯಲ್ಲಿ ಸುಮಾರು 120 ಮೀನುಗಾರರು ಕೆರೆಯಲ್ಲಿ ಮೀನುಗಾರಿಕೆ ಮತ್ತು ನಿರ್ವಹಣೆಯಲ್ಲಿ ತೊಡಗಿದ್ದಾರೆ. ಜನವರಿ 31ರೊಳಗೆ ಮೀನು ಸಂಗ್ರಹ ತೆರವುಗೊಳಿಸಲು ಸೂಚನೆ ನೀಡಲಾಗಿದ್ದು, ಅದರಂತೆ ಚಟುವಟಿಕೆ ನಿಲ್ಲಿಸಲಾಗಿದೆ.

ಒಂದು ಭಾಗದಿಂದ ಕಾಣುತ್ತಿರುವ ಒಣಗಿದ ಕೆರೆಯ ತಳಭಾಗ

ನೀರಿನ ಮಟ್ಟವು ಸುಮಾರು 3 ಅಡಿಗೆ ಇಳಿದಿದ್ದು, ಬಲೆಯಿಂದ ಮೀನುಗಾರಿಕೆ ಸಾಧ್ಯವಾಗುತ್ತಿಲ್ಲ. ಕೆರೆಯ ಹೂಳು ತೆಗೆಯುವ ಕೆಲಸ ಕೊನೆಯದಾಗಿ 2001–02ರಲ್ಲಿ ನಡೆದಿತ್ತು ಎಂದು ಸಂಘದ ಕಾರ್ಯದರ್ಶಿ ಸುಬ್ಬಯ್ಯ ಹೇಳಿದರು. 2020ರಲ್ಲಿ ಭಾಗಶಃ ಸ್ವಚ್ಛತೆ ನಡೆದ ನಂತರ ಗುತ್ತಿಗೆಯನ್ನು ನವೀಕರಿಸಲಾಗಿತ್ತು. ಸಂಘವು 50,000 ರೂಪಾಯಿ ಲೀಸ್ ಹಣ ಪಾವತಿಸಿ ಲಕ್ಷಾಂತರ ಮೌಲ್ಯದ ಮೀನಿನ ಮರಿಗಳನ್ನು ಬಿಡಲಾಗಿತ್ತು. ಆದರೆ ಕೆಲ ದಿನಗಳಲ್ಲಿ ಅವು ಸತ್ತುಹೋದವು; ಬಳಿಕ ಚಿಕಿತ್ಸೆ ನೀಡಿ ಸಮಸ್ಯೆ ಪರಿಹರಿಸಲಾಯಿತು. ಈಗ ಹೂಳು ಎತ್ತುವ ಕೆಲಸ ಪೂರ್ಣಗೊಂಡು, ಸುಮಾರು 3–4 ತಿಂಗಳಲ್ಲಿ ಮತ್ತೆ ನೀರು ತುಂಬಿದ ನಂತರ ಮೀನುಗಾರಿಕೆ ಪುನರಾರಂಭಿಸಲಾಗುತ್ತದೆ ಎಂದರು.

ಪರಿಸರ ಹೋರಾಟಗಾರರು ಮತ್ತು ಕೆರೆಯ ಸುತ್ತ ವಾಯುವಿಹಾರ ಹೋಗುವವರು ಈ ಅಭಿವೃದ್ಧಿ ಕಾರ್ಯವನ್ನು ಸ್ವಾಗತಿಸಿದ್ದಾರೆ. RBANMS ಕಾಲೇಜು ಭಾಗದಿಂದ ಅಗ್ನಿಶಾಮಕ ದಳದ ಮುಖ್ಯ ಕಚೇರಿ ಭಾಗದವರೆಗೆ ನಡಿಗೆ ಹಾದಿ ಅಭಿವೃದ್ಧಿಪಡಿಸಲಾಗಿದೆ.

ಪ್ರಸ್ತುತ ಕಾಮಗಾರಿ ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ಒಂದು ಭಾಗದಲ್ಲಿ ನಡಿಗೆ ನಿರ್ಬಂಧಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ, ಅನ್ನಸ್ವಾಮಿ ಮುದಲಿಯಾರ್ ರಸ್ತೆ ಭಾಗದ ಉದ್ಯಾನ ಪ್ರದೇಶಕ್ಕೂ ಕಾಲ್ನಡಿಗೆಯವರಿಗೆ ಪ್ರವೇಶ ಸಿಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran War: Hormuz ಕುರಿತು ಬಹ್ರೇನ್ ನೇತೃತ್ವದಲ್ಲಿ ಕರಡು ನಿರ್ಣಯ; ಇಂದು UNSC ಮತದಾನ!

'ಸಿಎಂ ಸಿದ್ದರಾಮಯ್ಯ ತಮ್ಮ ಮಗನನ್ನು ವಸೂಲಿ ಮಾಡಲು ರಾಜಕೀಯಕ್ಕೆ ಕರೆತಂದಿದ್ದಾರೆ': ಹೆಚ್ ಡಿ ಕುಮಾರಸ್ವಾಮಿ

ಗಡಿ ನುಗ್ಗಿ RSS ಶಿಬಿರ-ಮನೆಗಳ ಮೇಲೆ ನೇರ ದಾಳಿ: ಮತ್ತೆ ಬಾಲ ಬಿಚ್ಚಿದ ಪಾಕ್‌; ಭಾರತಕ್ಕೆ ಗೊಡ್ಡು ಬೆದರಿಕೆ

ಅತ್ತೆ ಮನೆ ಕಿರುಕುಳ: ಬೇಸತ್ತು ಬೆಂಕಿ ಹಚ್ಚಿಕೊಂಡು ಗರ್ಭಿಣಿ ಮಹಿಳೆ ಆತ್ಮಹತ್ಯೆ, ನಾಲ್ವರ ಬಂಧನ

ಸೋಲಿನಲ್ಲೂ RCB ದಾಖಲೆ ಮುರಿದ CSK: 210 ರನ್ ಬಾರಿಸಿ ಚೆನ್ನೈ ವಿರುದ್ಧ 5 ವಿಕೆಟ್ ಗಳಿಂದ ಗೆದ್ದ ಪಂಜಾಬ್‌!

SCROLL FOR NEXT