ರಾಜ್ಯ

GBA ಚುನಾವಣೆ ಮುನ್ನ ಮತದಾರರ ಪಟ್ಟಿ ಸರಿಪಡಿಸಿ: ಇಸಿಗೆ ಡಿ.ಕೆ ಶಿವಕುಮಾರ್ ನೇತೃತ್ವದ ಬೆಂಗಳೂರು ನಿಯೋಗ ಮನವಿ

ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೀಶಿ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್, ಪ್ರಸ್ತುತ ಇರುವ ಮತದಾರರ ಮಾಹಿತಿಯನ್ನು ಆಧರಿಸಿ ರಾಜ್ಯ ಚುನಾವಣಾ ಆಯೋಗ ತಿದ್ದುಪಡಿ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ಹೇಳಿದರು.

ಬೆಂಗಳೂರು: ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಬೆಂಗಳೂರಿನ ಸಚಿವರು ಮತ್ತು ಶಾಸಕರ ನಿಯೋಗವು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೀಶಿ ಅವರನ್ನು ಭೇಟಿ ಮಾಡಿ, ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಮಾಡುವಂತೆ ಮನವಿ ಸಲ್ಲಿಸಿದೆ.

ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೀಶಿ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್, ಪ್ರಸ್ತುತ ಇರುವ ಮತದಾರರ ಮಾಹಿತಿಯನ್ನು ಆಧರಿಸಿ ರಾಜ್ಯ ಚುನಾವಣಾ ಆಯೋಗ ತಿದ್ದುಪಡಿ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ಹೇಳಿದರು. ಆದರೆ ಕೆಲವು ಸಮಸ್ಯೆಗಳು ಇವೆ. ಕೆಲವೆಡೆ ಒಂದೇ ಮನೆಯ ಮತದಾರರನ್ನು ತಪ್ಪಾದ ಮ್ಯಾಪಿಂಗ್‌ನಿಂದ ವಿಭಿನ್ನ ಮತಗಟ್ಟೆಗಳಿಗೆ ಹಂಚಲಾಗಿದೆ ಎಂದು ತಿಳಿಸಿದರು.

ಮತದಾರರ ಮ್ಯಾಪಿಂಗ್ ವೇಳೆ ರಾಜಕೀಯ ಪಕ್ಷಗಳ ಬೂತ್ ಲೆವೆಲ್ ಏಜೆಂಟ್‌ಗಳು (BLA) ಅಧಿಕಾರಿಗಳ ಜೊತೆಗಿದ್ದರೆ ತಪ್ಪುಗಳನ್ನು ಸುಲಭವಾಗಿ ಸರಿಪಡಿಸಬಹುದು ಎಂದು ಸಲಹೆ ನೀಡಿದರು.

ಕೆಲವು ಅಲ್ಪಸಂಖ್ಯಾತ ಸಮುದಾಯಗಳು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಅಥವಾ ಸ್ಥಳಾಂತರಿಸಲಾಗಿದೆ. ಕೆಲವೆಡೆ ಒಬ್ಬ ಮತದಾರರ ಹೆಸರು ಎರಡು ಅಥವಾ ಹೆಚ್ಚು ಮತಗಟ್ಟೆಗಳಲ್ಲಿ ಕಾಣಿಸುತ್ತಿದೆ. ಈ ಸಂಬಂಧಿತ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ಡಿ ಕೆ ಶಿವಕುಮಾರ್ ಆಯುಕ್ತರ ಗಮನಕ್ಕೆ ತಂದರು.

ಇಂತಹ ಲೋಪಗಳಿಗೆ ಕಾರಣರಾದ ಬೂತ್ ಲೆವೆಲ್ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಅವರು ಒತ್ತಾಯಿಸಿದರು. ವಿಶೇಷ ಗಹನ ಪರಿಷ್ಕರಣೆ (Special Intensive Revision - SIR) ನಡೆಯುತ್ತಿರುವುದರಿಂದ ಹೆಚ್ಚುವರಿ ಎಚ್ಚರಿಕೆ ಅಗತ್ಯವಿದೆ. ಹಿಂದೆ ಕೆಲವರು ಅರ್ಜಿಗಳನ್ನು ದುರುಪಯೋಗಪಡಿಸಿಕೊಂಡು ಮತದಾರರ ಅರಿವಿಲ್ಲದೆ ಹೆಸರುಗಳನ್ನು ತೆಗೆದುಹಾಕುವುದು ಅಥವಾ ಹೊಸದಾಗಿ ಸೇರಿಸುವ ಘಟನೆಗಳು ನಡೆದಿವೆ ಎಂದರು.

GBA ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಈ ತಪ್ಪುಗಳನ್ನು ತಕ್ಷಣ ಸರಿಪಡಿಸಬೇಕು. ತಪ್ಪುಗಳನ್ನು ಬೇಗ ಸರಿಪಡಿಸದಿದ್ದರೆ ಸರ್ಕಾರ ಮತ್ತು ಚುನಾವಣಾ ಆಯೋಗದ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ ಎಂದು ಎಚ್ಚರಿಸಿದರು.

SIR ನಡೆಯುತ್ತಿರುವಾಗ ಪ್ರತ್ಯೇಕ ತಿದ್ದುಪಡಿ ನಡೆಸಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್, ಅದನ್ನು ಮಾಡಲು ಆಯೋಗಕ್ಕೆ ಅಧಿಕಾರವಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ನ ಬಂದರುಗಳ ದಿಗ್ಬಂಧನ ಕೈಬಿಡುವಂತೆ ಸೌದಿ ಅರೇಬಿಯಾ 'ಒತ್ತಡ': ಟ್ರಂಪ್ ನೀತಿಗೆ ಮಿತ್ರ ರಾಷ್ಟದಿಂದಲೇ ವಿರೋಧ!

US-Iran Peace Talks: ಅಣ್ವಸ್ತ್ರ ವಿಚಾರದಲ್ಲಿ ಅಮೆರಿಕಾ ಕಠಿಣ ನಿಲುವು; ಮಾತುಕತೆಯಲ್ಲಿ ಪ್ರಗತಿ ಸಾಧಿಸಿದ್ದೇವೆ, ಮುಂದಿನ ನಿರ್ಧಾರ ಇರಾನ್'ಗೆ ಬಿಟ್ಟದ್ದು- ಜೆ.ಡಿ.ವ್ಯಾನ್ಸ್

ನಾಸಿಕ್ TCS 'ಕಾರ್ಪೊರೇಟ್ ಜಿಹಾದ್' ಕೇಸ್: ಕಾರ್ಮಿಕ ಸಚಿವಾಲಯದ ಮೆಟ್ಟಿಲೇರಿದ ಐಟಿ ಉದ್ಯೋಗಿಗಳ ಒಕ್ಕೂಟ, ಕೂಲಂಕಷ ತನಿಖೆಗೆ ಆಗ್ರಹ!

ಅಮೆರಿಕ- ಇರಾನ್ ನಡುವೆ ಗುರುವಾರ ಮತ್ತೊಂದು ಸುತ್ತಿನ ಮಾತುಕತೆ; 2 ಸಂಭಾವ್ಯ ಸ್ಥಳಗಳ ಪರಿಶೀಲನೆ: ವರದಿ

'ಪರಮಾಣು ಶಸ್ತ್ರಾಸ್ತ್ರ ಹೊಂದುವ ಇರಾನ್‌ ಕನಸಿನ ಮೇಲೆ 20 ವರ್ಷ ನಿಷೇಧ ಬಯಸಿದ ಅಮೆರಿಕ; ಟೆಹ್ರಾನ್ 5 ವರ್ಷ ಸಿದ್ಧ'

SCROLL FOR NEXT